ಕಂಪ್ಲಿ: ತ್ವರಿತ ಮತ್ತು ಸುಲಭ ನ್ಯಾಯವನ್ನು ಖಚಿತಪಡಿಸುವ ಉದ್ದೇಶದಿಂದ ಜನಸಂಖ್ಯೆಗನುಗುಣವಾಗಿ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದಿಂದ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಆಡಳಿತಾಧಿಕಾರಿ ನಾಗರಾಜಗೆ ಗುರುವಾರ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
ನಂತರ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮುಖಂಡ ಬಟ್ಟಾ ರಾಮಾಂಜಿನೀಯಲು ಮಾತನಾಡಿ, ದೇಶದಲ್ಲಿ ಕೋಟ್ಯಂತರ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಈಗಿನ ನ್ಯಾಯಾಂಗ ಪ್ರಕ್ರಿಯೆಯ ವೇಗ ನೀಡಬೇಕಾಗಿದೆ. ಹಳೆಯ ಬಾಕಿ ಪ್ರಕರಣಗಳ ವಿಲೇವಾರಿಗೇ ದಶಕಗಳ ಕಾಲಾವಕಾಶ ಬೇಕಾಗಬಹುದು. ಅದೇ ಸಮಯದಲ್ಲ ಪ್ರತಿದಿನ ದಾಖಲೆಯಾಗುತ್ತಿರುವ ಹೊಸ ಪ್ರಕರಣಗಳ ತೀರ್ಪು ಯಾವಾಗ ಹೊರಬರಬಹುದು ಎಂಬುದನ್ನು ಹೇಳುವುದೂ ಅತ್ಯಂತ ಕಷ್ಟಕರವಾಗಿದೆ. ಪ್ರಕರಣಗಳ ತೀರ್ಪುಗಳಲ್ಲಿ ಆಗುತ್ತಿರುವ ಈ ಅಸಾಧಾರಣ ವಿಳಂಬವನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಇಟಗಿ ವಿರುಪಾಕ್ಷಿ, ಟಿ.ಕೃಷ್ಣ, ಸಿ.ರಾಜರಾಮ್, ಯು.ಬಸವರಾಜ, ಬಿ.ರಾಜಶೇಖರ, ಬಿ.ವಿ.ಗೌಡ, ವಿ.ವಿರೇಶ, ರಮೇಶ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















