ಇಳಕಲ್ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಇಳಕಲ್ ಘಟಕದ ನಾಲ್ಕು ಜನ ಚಾಲನಾ ಸಿಬ್ಬಂದಿಗಳಾದ ಶ್ರೀ ಬಿ. ಕೆ. ಅಂಗಡಿ, ಶ್ರೀ ಎಸ್. ವಿ. ಹಿರೇಮಠ, ಶ್ರೀ ಅಮೀನ್ಸಾಬ್ ನದಾಫ್ ಹಾಗೂ ಶ್ರೀ ಬಿ. ಎಸ್. ಚಲವಾದಿ ಅವರು ನವೆಂಬರ್ ೧-೨೦೨೬ ರ ಕನ್ನಡ ರಾಜ್ಯೋತ್ಸವದ ದಿನ ಎರಡು ಬಸ್ಸುಗಳನ್ನು ಕನ್ನಡ ರಥಗಳಾಗಿ ಪರಿವರ್ತಿಸಿ ತಮ್ಮ ಅನನ್ಯ ಕನ್ನಡಾಭಿಮಾನ ಮೆರೆದಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಇಳಕಲ್ ತಾಲೂಕು ಘಟಕದ ವತಿಯಿಂದ ನಿನ್ನೆ ಹೆಮ್ಮೆಯ ಕನ್ನಡಿಗರನ್ನು ಗೌರವಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಕ. ಸಾ. ಪ. ತಾಲೂಕಾಧ್ಯಕ್ಷರು ಶ್ರೀ ಮಹಾದೇವ ಕಂಬಾಗಿ ಸೇರಿದಂತೆ ಶ್ರೀ ರಾಮನಗೌಡ ಸಂದಿಮನಿ, ಶ್ರೀ ಮಹಾಂತೇಶ ಗಜೇಂದ್ರಗಡ, ಶ್ರೀ ಉಮೇಶ ಶಿರೂರ, ಶ್ರೀ ಸಂಗಮೇಶ ಬಂಡರಗಲ್ಲ, ಶ್ರೀ ಶ್ಯಾಮಣ್ಣ ಮುಧೋಳ ಉಪಸ್ಥಿತರಿದ್ದರು.
ಘಟಕ ವ್ಯವಸ್ಥಾಪಕರಾದ ಶ್ರೀ ಜಿ. ಎಸ್. ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ರಾಮನಗೌಡ ಸಂದಿಮನಿ ಅವರು ಮಾತನಾಡಿ ಸಾರಿಗೆ ಸಿಬ್ಬಂದಿಗಳ ಕನ್ನಡಾಭಿಮಾನವನ್ನು ಕೊಂಡಾಡಿದರು.
ಇಳಕಲ್ ಸಾರಿಗೆ ಘಟಕದ ಎಲ್ಲಾ ಶಾಖೆಗಳ ಮೇಲ್ವಿಚಾರಕರು ಹಾಗೂ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




















