ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸತ್ತ ಕುರಿಗಳನ್ನು ಪುರಸಭೆ ಬಾಗಿಲಲ್ಲಿ ಇಟ್ಟು ಮುಖ್ಯಾಧಿಕಾರಿ ವಿರುದ್ಧ ಭಾರೀ ಪ್ರತಿಭಟನೆ

ಶಿಕಾರಿಪುರ : ಇತ್ತೀಚಿನ ದಿನಗಳಲ್ಲಿ ಶಿಕಾರಿಪುರ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ ಜಾಸ್ತಿಯಾಗಿ ಜಾನುವಾರು ಹಾಗೂ ಚಿಕ್ಕ ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯ ಪಡುವ ವಾತಾವರಣ ನಿರ್ಮಾಣಗೊಂಡಿದ್ದು ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ಧೋರಣೆ ಇದಕ್ಕೆ ಕಾರಣವಾಗಿದೆ ಅದಕ್ಕೆ ಪೂರಕವೆಂಬಂತೆ ಇಂದು ಬೆಳಿಗ್ಗೆ ಸುಮಾರು ಮೂವತ್ತರಿಂದ ಐವತ್ತು ನಾಯಿಗಳ ಹಿಂಡು ರೈತ ದಿನೇಶ್ ಹಾಗೂ ಇತರರ ಲಕ್ಷ ಲಕ್ಷ ಬೆಲೆ ಬಾಳುವ ಕುರಿಗಳನ್ನು ಕಚ್ಚಿ ಸಾಯಿಸಿದ ಘಟನೆ ನಗರದ 11 ನ ವಾರ್ಡ ಹೋಸ್ಕೆರಿಯಲ್ಲಿ ನಡೆದಿದ್ದು ನೊಂದ ಜನರು ಸತ್ತ ಮೂರು ಕುರಿಗಳನ್ನು ಪುರಸಭೆ ಬಾಗಿಲಲ್ಲಿ ಇಟ್ಟು ಪುರಸಭೆ ಮುಖ್ಯಾಧಿಕಾರಿ ಭರತ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ಎಂಟು ಗಂಟೆಗೆ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿಗೆ ಪೋನ್ ಮಾಡಿದರೂ 11 ಗಂಟೆಯಾದರೂ ಬಾರದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾ ಮುಖಂಡರು ನಗರದ ಕೆಲ ಬಡಾವಣೆಗಳಲ್ಲಿ ಪ್ರತಿ ದಿನ ಒಂದು ಎರಡು ಕುರಿಗಳು ಬೀದಿ ನಾಯಿ ಕಡಿತಕ್ಕೆ ಬಲಿಯಾಗುತ್ತಿರುವುದು ಕಂಡು ಬಂದರೂ ಹಾಗೂ ಎರಡು ಮೂರು ಬಾರಿ ದೂರು ನೀಡಿದರೂ ಪುರಸಭೆ ಮುಖ್ಯಾಧಿಕಾರಿ ದಿವ್ಯ ನಿರ್ಲಕ್ಷ್ಯ ಇಂದಿನ ಅನಾಹುತಕ್ಕೆ ಕಾರಣ ಇದಕ್ಕೆ ಆತನೇ ಸೂಕ್ತ ಪರಿಹಾರ ನೀಡಬೇಕು. ಚನ್ನಕೇಶವ ನಗರದಲ್ಲಿ ಕೆಲವು ಮಕ್ಕಳಿಗೂ ನಾಯಿ ಕಡಿದ ವಿಚಾರಗಳನ್ನು ತಿಳಿಸಿ ನಗರದಲ್ಲಿ ಲಕ್ಷ ಗಟ್ಟಲೆ ಹಣ ಸಾರ್ವಜನಿಕರ ಹಣ ಪೋಲು ಮಾಡಿಸಿ ಕ್ಯಾಮರಾ ಹಾಕಿಸಿದ್ದಾರೆ ಒಂದರಲ್ಲೂ ಮುಖ್ಯಾಧಿಕಾರಿ ವಾರ್ಡ್ ಗಳ ಸಮಸ್ಯೆ ಭೇಟಿ ಮಾಡಿದ ಮಾಹಿತಿ ಇಲ್ಲ ಜನರ ಬಗ್ಗೆ ಕಾಳಜಿ ಇಲ್ಲದ ಅಧಿಕಾರಿ ಪುರಸಭೆ ಕಚೇರಿಯಲ್ಲಿ ತನಗೆ ಬೇಕಾದ ಅಂದರೆ ಭ್ರಷ್ಟಾಚಾರಕ್ಕೆ ಅನುಕೂಲವಾದ ಕೆಲಸಕ್ಕೆ ರಾತ್ರಿ ಹನ್ನೆರಡು ಗಂಟೆ ಯವರೆಗೂ ಇರುವ ಈತ ಸಾರ್ವಜನಿಕರ ಸಮಸ್ಯೆಗೆ ಕರೆ ಮಾಡಿದರೂ ಬಾರದ ಇಂತ ಅಧಿಕಾರಿಗಳು ನಮಗೆ ಬೇಡ ಈ ಕೂಡಲೇ ಅಮಾನತ್ತುಗೊಳಿಸಿ ಆತನ ಭ್ರಷ್ಟಾಚಾರದ ವಿಚಾರಣೆ ನಡೆಸಿ ಎಂದು ದಿಕ್ಕಾರ ಕೂಗಿದರು. ಈ ಹಿಂದೆ ಎರಡು ಬಾರಿ ವರ್ಗಾವಣೆ ಆದ್ರೂ ಇತ ಯಾಕೆ ಇಲ್ಲೇ ಉಳಿದಿದ್ದಾರೆ ಇದರಲ್ಲಿ ರಾಜಕೀಯದ ಕೈವಾಡ ಇದ್ದರೂ ಈತ ನಮಗೆ ಬೇಡ ಒಂದು ವೇಳೆ ಇನ್ನು ಅಧಿಕಾರಿ ಬರಲಿಲ್ಲವಾದರೆ ಈ ಸತ್ತ ಕುರಿಗಳನ್ನು ಪುರಸಭೆ ಒಳಗೆ ಇಡುವುದಾಗಿ ಹಾಗೂ ಇದೆ ರೀತಿ ಸಾರ್ವಜನಿಕರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದರೆ ಪುರಸಭೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ನೊಂದವರು ಪುರಸಭೆ ಮುಖ್ಯಾಧಿಕಾರಿ ಗೆ ಹಿಡಿ ಶಾಪ ಹಾಕಿದರು.
ಈಗಲೇ ಶಾಸಕರಿಗೆ ಈತನನ್ನು ಈ ಕೂಡಲೇ ವಜಾ ಮಾಡಿ ಕ್ರಮ ಜರುಗಿಸಬೇಕೆಂದು ದೂರವಾಣಿ ಮೂಲಕ ಮಾಹಿತಿ ನೀಡಲಾಗಿದೆ ಎಂದು ಪ್ರತಿಭಟನಾ ಕಾರರು ಮಾಧ್ಯಮದವರೊಂದಿಗೆ ತಿಳಿಸಿದರು. ನೂರಾರು ಜನ ಪ್ರತಿಭಟನೆ ಸ್ಥಳದಲ್ಲಿ ಜಮಾಯಿಸಿ ಮುಖ್ಯಾಧಿಕಾರಿ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!