ಕಲಬುರ್ಗಿ:ಮಂಜುನಾಥ ಹೂಗಾರ ಅವರು ಕಲಬುರ್ಗಿ ಜಿಲ್ಲೆಯಲ್ಲಿ ಜೇವರ್ಗಿ ಹಾಗೂ ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಸೇವೆ ಸಲ್ಲಿಸಿದ್ದರು.
ನೇರ ಮತ್ತು ದಿಟ್ಟತನದಿಂದ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಉತ್ತಮ ಸೇವೆ ಸಲ್ಲಿಸಿದ ಕೀರ್ತಿ ಮಂಜುನಾಥ ಹೂಗಾರ ಅವರದು.
ಇವರ ಉತ್ತಮ ಸೇವೆ ಗುರುತಿಸಿ 2022 ನೇ ಸಾಲಿನ ಮುಖ್ಯಮಂತ್ರಿ ಪದಕ್ಕೆ ಭಾಜನರಾಗಿದ್ದಾರೆ. ಈಗ ಇವರು ಬೆಂಗಳೂರು ನಗರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪೋಲಿಸ್ ಅಧಿಕಾರಿಗಳಿಂದ ಹಿಡಿದು ಎಲ್ಲಾ ವಿಧದ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಜಿಲ್ಲೆಯ ಆಳಂದ ಠಾಣೆಯ ವೃತ್ತದ ನಿರೀಕ್ಷಕರಾದ ಬಾಸು ಚವ್ಹಾಣ ಅವರು ಸಹ ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಸಿ.ಪಿ.ಐ ಆಗಿ ಸೇವೆ ಸಲ್ಲಿಸಿರುವ. ಇವರು ಸಹ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ