ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಪಂಜಿನ ಮೆರವಣಿಗೆ ಮಾಡಲಾಯಿತು…ಈಗಾಗಲೇ ವಿಧಾನಸಭಾ ಚುನಾವಣೆಯು ಹತ್ತಿರ ಬರುತ್ತಿದೆ ಆದ್ದರಿಂದ
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮುಂದಿನ ತಿಂಗಳು ಮೇ 10 ರಂದು ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಮತದಾನ ಮಾಡಬೇಕೆನ್ನುವ ಅಭಿಯಾನಕ್ಕೆ ಎಚ್ ಹೊಸಳ್ಳಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಶಿವಮೂರ್ತಿ ಚಾಲನೆ ನೀಡಿದರು ನಂತರ ಅವರು ಮಾತನಾಡಿ ನಗರದಲ್ಲಿ ನಡೆಯುವ ಚುನಾವಣೆಯಲ್ಲಿ ಅರ್ಹ ಮತದಾರರು ಹೆಚ್ಚಿನ ಮಹತ್ವ ಮತದಾನಕ್ಕೆ ಮುಂದಾಗ ಬೇಕು ಮತ್ತು ಮತದಾನದ ಹಕ್ಕು ಯಾರು ಬಿಟ್ಟುಕೊಡಬಾರದು ಎಂದು ವಿಶೇಷವಾಗಿ ತಿಳಿಸಿದರು
ಮತದಾನದ ಮೌಲ್ಯ ಹಾಗೂ ಮಹತ್ವ ಸಾರುವ ಜಾಗೃತಿಯ ಸಂದೇಶವುಳ್ಳ ನಾಮಫಲಕ ಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಜಾತ ನಡೆಸಿದರು.
ಮತದಾನದ ನೋಂದಣಿ ಮತ್ತು ಮತದಾನ ಮಾಡುವ ರೀತಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ವಿವರಗಳು, ಮತಗಟ್ಟೆ ವಿವರಗಳು, ಹಕ್ಕು ಮತ್ತು ಆಕ್ಷೇಪಣೆಗಳ ಪಟ್ಟಿ ಇವುಗಳ ಮಹತ್ವವನ್ನು ಮತದಾನದ ನಾಗರಿಕರಲ್ಲಿ ಜಾಗೃತಿಯ ಮೂಲಕ ತಿಳಿಸಿಕೊಟ್ಟರು
ಸಂದರ್ಭದಲ್ಲಿ ಅಂಗನವಾಡಿಯ ಕಾರ್ಯಕರ್ತರು ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಇನ್ನು ಮುಂತಾದವರು ಇದ್ದರು
ವರದಿ:ಎಂ.ಪವನ್ ಕುಮಾರ್




















