ಯಾದಗಿರಿ ಶಹಾಪುರ ತಾಲ್ಲೂಕಿನ ಮಡಿವಾಳ ಸಮಾಜದ ಯುವ ಘಟಕ ಶಹಾಪುರ ಕ್ಷೇತ್ರದ ಹಳಿಸಗರದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪ್ರತಿಯೊಂದು ಕ್ಷೇತ್ರದಲ್ಲಿ ಎಲ್ಲಾ ಸಮಾಜವು ಮುಂದೆ ಬರುತ್ತಿವೆ
ಆದರೆ ನಮ್ಮ ಸಮಾಜ ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರಬೇಕು ಅಂದರೆ ನಾವು ವಿಶೇಷವಾಗಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸಮಾಜದ ಮುಖಂಡರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಯಾದಗಿರಿ ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರಾದ ಮಡಿವಾಳಪ್ಪ ಬಿಜಾಸಪುರ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು.
ಶಹಾಪುರ ನಗರಕ್ಕೆ ಹೊಂದಿಕೊಂಡಿರುವ ಹಳಿಸಗರದ ಮಡಿವಾಳೇಶ್ವರ ಮಠದಲ್ಲಿ ಸಮಾಜದ ಮುಖಂಡರು ಸಮ್ಮುಖದಲ್ಲಿ ಯುವ ಘಟಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಮಾಜದ ಜಿಲ್ಲಾ ಅಧ್ಯಕ್ಷರು ಮಾತನಾಡಿದ ಅವರು. ಸಮಾಜದ ಹಿರಿಯ ಮುಖಂಡರು ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.
ತಾಲೂಕ ಗೌರವಾಧ್ಯಕ್ಷ ಶೇಖಪ್ಪ ಸಾಹು, ಸಾಯಬಣ್ಣ ಮಡಿವಾಳಕರ್, ಭೀಮರಾಯ ಮುದ್ನೂರ, ಮಹಾದೇವಪ್ಪ ಸಗರ, ದೇವಿಂದ್ರಪ್ಪ ಮಡಿವಾಳಕರ್ ಪ್ರಾಚಾರ್ಯರು, ಸಂಗಣ್ಣ ದಿಗ್ಗಿ, ಹಾಗೂ ಸಮಾಜದ ಹಿರಿಯ ಮುಖಂಡರು ಮತ್ತು ನೂತನ ಯುವ ಘಟಕ ಪದಾಧಿಕಾರಿಗಳು ಅಧ್ಯಕ್ಷ ನಾಗರಾಜ ಮಡಿವಾಳ, ಉಪಾಧ್ಯಕ್ಷ ಮಂಜುನಾಥ ವಡಿಗೇರ, ಕಾರ್ಯದರ್ಶಿ ವಿಜಯ ಮುದ್ನೂರ, ಖಜಾಂಚಿ ಸಾಯಿದೇವ ಹಳಿಸಗರ, ಕಾನೂನು ಸಲಹೆಗಾರ ಬಸವರಾಜ ಮಂದೇಲಿ, ಸಂಘಟನಾ ಕಾರ್ಯದರ್ಶಿ ಸಾಬರಡ್ಡಿ ಕೊಲ್ಲೂರ, ಮಂಜುನಾಥ ಹವಾಲ್ದಾರ್, ಸಹ ಕಾರ್ಯದರ್ಶಿ ಪರಶುರಾಮ ಕರಕಳ್ಳಿ, ಸಂಗು ಮಡಿವಾಳ, ಸದಸ್ಯರಾದ ಸಿದ್ದು ಕನ್ನಕೊಳೂರ, ಬಸವರಾಜ ಹುಂಡೆಕಲ್, ಮಾನಪ್ಪ ಅಂಚೆಸೂಗುರ, ಮೌನೇಶ್, ಚಂದ್ರಕಾಂತ, ಸುರೇಶ್ ಕನ್ನೆ ಕೋಳೂರ, ಬಸಲಿಂಗಪ್ಪ, ಸತೀಶ್ ಸಲ್ಲಾದಪುರ, ಹಣಮಂತ ಮಡಿವಾಳಕರ್, ರಾಜು ಯಾಳವಾರ, ಹಿರಿಯರ ಸಮ್ಮುಖದಲ್ಲಿ ಯುವ ಘಟಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ




















