ಯಾದಗಿರಿ: ಯಾದಗಿರಿ ಜಿಲ್ಲೆಯ ಬೆಳೆ ಕಟಾವು ಪ್ರಯೋಗಗಳು ಮತ್ತು ಬೆಳೆ ಸಮೀಕ್ಷೆಯನ್ನು ಸೂಕ್ತವಾಗಿ ಕಾರ್ಯಕ್ರಮ ನಿರ್ವಹಿಸಬೇಕು ಎಂದು ಮಾನ್ಯ ನೂತನ ಜಿಲ್ಲಾಧಿಕಾರಿ ಡಾ||ಸುಶೀಲ.ಬಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ರಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ 2023/24 ನೇ ಸಾಲಿನ ಮೊದಲನೇ ವಾರ್ಷಿಕ ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫೈಸಲ್ ಭೀಮಾ ಯೋಜನೆಡಿಯಲ್ಲಿ ಯಾದಗಿರಿ ಜಿಲ್ಲೆಯ ಒಟ್ಟು 2262 ಪ್ರಯೋಗಗಳು ಇದ್ದು, ಈಗಾಗಲೇ ಕಂದಾಯ, ಕೃಷಿ ತೋಟಗಾರಿಕೆ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಹಂಚಿಕೆ ಮಾಡಲಾಗಿದೆ.
ಬೆಳೆ ಕಟಾವು ಪ್ರಯೋಗ ಇಳುವರಿ ಆಧರಿಸಿ ಬೆಳೆ ವಿಮೆ ಕಂಪನಿಗಳು ಪ್ರತಿ ಬೆಳೆಗಳಿಗೆ ವಿಮೆ ಮೊತ್ತ ನಿರ್ಧರಿಸುತ್ತಿದ್ದು , ಹಂಚಿಕೆ ಆದ ಮೂಲ ಕಾರ್ಯಕರ್ತರು ಪ್ರತಿ ಪ್ರಯೋಗಕ್ಕೆ 1+4 ಸರ್ವೇ ನಂಬರ್ ಸೇರಿಸಿ ಯಾವುದೇ ಪ್ರಯೋಗಗಳು ವ್ಯಪಗತವಾಗದಂತೆ ಹಾಗೂ ಕಡ್ಡಾಯವಾಗಿ ಮೂಲ ಕಾರ್ಯಕರ್ತರು ಮತ್ತು ರೈತರು ಹಾಜರಿದ್ದು ವಿಮಾ ಕಂಪನಿಯ ಪ್ರತಿನಿಧಿಗಳ ಛಾಯಾ ಚಿತ್ರ ಇರುವಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ. ತಾಲೂಕ ಮಟ್ಟದ ಅಧಿಕಾರಿಗಳು ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂಲ ಕಾರ್ಯಕರ್ತರು ನಿರ್ಲಕ್ಷ್ಯ ವಹಿಸದಂತೆ, ತಪ್ಪುಗಳು ಆಗದಂತೆ ನಿಯಮಗಳ ಪ್ರಕಾರ ಪ್ರಯೋಗಗಳು ಕೈಗೊಳ್ಳಲು ಅವರು ಸೂಚಿಸಿದರು.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಅಪರ ನಿರ್ದೇಶಕರು ಬಸವರಾಜ.ಎಸ್
ಅವರು ಸಭೆಯಲ್ಲಿ ಮಾತನಾಡಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಖಾಸಗಿ ನಿವಾಸಿ ಅವರಿಗೆ ಸೂಕ್ತ ತರಬೇತಿ ನೀಡಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬಿಟ್ಟು ಹೋಗದಂತೆ ಸಮೀಕ್ಷೆ ಮಾಡಲು ನೀರಾವರಿ ಮೂಲ ಸರಿಯಾಗಿ ಪರಿಶೀಲಿಸಲು, ನೀತಿ ಆಯೋಗದ ಸಂಯೋಜಿತ ನೀರು ನಿರ್ವಹಣೆ ಸೂಚ್ಯಂಕ ಸಂಬಂಧಿಸಿದ ಅಧಿಕಾರಿಗಳು ಪ್ರತಿ ವರ್ಷ ಮಾಹಿತಿಯನ್ನು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಅವರಿಗೆ ಸಲ್ಲಿಸಬೇಕು ಎಂದು ಹೇಳಿದರು.
ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿ ಸಭೆಯ ಸದಸ್ಯ ಕಾರ್ಯದರ್ಶಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶ್ರೀ ಯೂಸುಫ್ ಅಲಿ ಮಾತನಾಡಿ ಬೆಳೆ ಕಟಾವು ಪ್ರಯೋಗ ಕೈಗೊಳ್ಳುವ ತಾಲೂಕ ತರಬೇತಿಗಳಲ್ಲಿ ಎಲ್ಲಾ ತಾಲೂಕ ಮಟ್ಟದ ಅಧಿಕಾರಿಗಳು ಹಾಜರಿದ್ದು ಪ್ರಯೋಗಗಳು ನಷ್ಟವಾಗದಂತೆ ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟಪ್ಪಗೊಳ, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್, ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ



















