ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಾರತದ ಆತಿಥ್ಯದಲ್ಲಿ ಜಿ-20

75 ವರ್ಷಗಳಿಂದ ಕೂಡಿಬರದ ಅದೃಷ್ಟದ ಭವ್ಯವಾದ ಭಾರತದ ಭವಿಷ್ಯ 2023 ರಲ್ಲಿ ಭಾರತಕ್ಕೆ ಒಲಿದು ಬಂದಿದೆ.ಜಗತ್ತಿನ ಅತ್ಯಂತ ದೊಡ್ಡ ದೊಡ್ಡ ಆರ್ಥಿಕ ಬಲಿಷ್ಠ ನಾಯಕರೇ ಭರತ ಭೂಮಿಗೆ ಕಾಲಿಟ್ಟಿದ್ದಾರೆ.ಗ್ರೂಪ್ ಆಫ್ 20 ಇದೊಂದು ಬಹುದೊಡ್ಡ ಆರ್ಥಿಕ ಸಹಕಾರ ವೇದಿಕೆಯಾಗಿದೆ. ಒಂದಾನೊಂದು ಕಾಲದಲ್ಲಿ ಭಾರತವನ್ನು ನೀಲಿ ಗಣ್ಣಿನಿಂದ ನೋಡಿದ ರಾಷ್ಟ್ರಗಳು ಇಂದು ಭಾರತದ ಭವ್ಯವಾದ ಬಾಗಿಲನ್ನು ತಟ್ಟಿವೆ ಹಿಂದೊಂದು ದಿನ ಜಗತ್ತಿನ ಬಹುತೇಕ ರಾಷ್ಟ್ರಗಳ ನಡುವೆ ವೈರತ್ವದ ಮನೋಭಾವನೆ ಮೂಡಿತ್ತು ಇಂದು ಆ ಎಲ್ಲಾ ವೈರತ್ವವನ್ನು ಮರೆತು ಕೈ ಕೈ ಕುಲುಕಿಸುವಷ್ಟು ಸಾಮರಸ್ಯದ ಸಂಬಂಧವನ್ನು ಭಾರತದ ಮಣ್ಣಿನಲ್ಲಿ ಕಾಣುತ್ತಿದ್ದೇವೆ ಆತ್ಮೀಯ ಭಾರತೀಯ ಪ್ರಜೆಗಳೇ ಭಾರತ ವಿಶ್ವ ಗುರುವಿನತ್ತ ಸಾಗುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ.ಜಗತ್ತಿನ ಬಹುತೇಕ ಬಲಿಷ್ಠ ರಾಷ್ಟ್ರಗಳೇ ಈ ಸಭೆಯ ಸದಸ್ಯ ರಾಷ್ಟ್ರಗಳಾಗಿವೆ ಜಗತ್ತಿನಲ್ಲಿ ನಡೆಯುವ ವಾಣಿಜ್ಯ ಮತ್ತು ವ್ಯಾಪಾರ ಕೈಗಾರಿಕೆಗಳನ್ನು ನಿರ್ಧರಿಸಲು ಸೂಕ್ತವಾದ ವೇದಿಕೆಯೇ ಗ್ರೂಪ್ ಆಫ್ 20. ಭಾರತವು ಡಿಸೆಂಬರ್ 1,2022 ರಂದು ಇಂಡೋನೇಷ್ಯಾದಿಂದ ಜಿ-20 ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ ಮತ್ತು ಒಂದು ವರ್ಷದವರೆಗೆ ಈ ಹುದ್ದೆಯನ್ನು ಹೊಂದಿರುತ್ತದೆ. ಇದು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಒತ್ತುವ ವಿಷಯಗಳ ಜಾಗತಿಕ ಕಾರ್ಯಸೂಚಿಗೆ ಕೊಡುಗೆ ನೀಡಲು ಭಾರತಕ್ಕೆ ಒಂದು ಅನನ್ಯ ಅವಕಾಶವನ್ನು ನೀಡುತ್ತದೆ ನವದೆಹಲಿಯಲ್ಲಿ 18ನೇ G-20 ಶೃಂಗಸಭೆಯು ಎಲ್ಲಾ G-20 ಪ್ರಕ್ರಿಯೆಗಳು ಮತ್ತು ಮಂತ್ರಿಗಳು,ಹಿರಿಯ ಅಧಿಕಾರಿಗಳು ಮತ್ತು ನಾಗರಿಕ ಸಮಾಜಗಳ ನಡುವೆ ವರ್ಷವಿಡೀ ನಡೆದ ಸಭೆಗಳ ಪರಾಕಾಷ್ಠೆಯಾಗಿದೆ.G-20 ನಾಯಕರ ಘೋಷಣೆಯನ್ನು G-20 ಶೃಂಗಸಭೆಯ ಸಮಾರೋಪದಲ್ಲಿ ಅಂಗೀಕರಿಸಲಾಗುವುದು, ಆಯಾ ಮಂತ್ರಿಗಳು ಮತ್ತು ಕಾರ್ಯಕಾರಿ ಗುಂಪು ಸಭೆಗಳಲ್ಲಿ ಚರ್ಚಿಸಿದ ಮತ್ತು ಒಪ್ಪಿದ ಆದ್ಯತೆಗಳ ಬಗ್ಗೆ ನಾಯಕರ ಬದ್ಧತೆಯನ್ನು ತಿಳಿಸಲಾಗುತ್ತದೆ.
ಸೆ.9 ರಿಂದ ಎರಡು ದಿನಗಳ ಕಾಲ ದೆಹಲಿಯಲ್ಲಿ ನಡೆಯುತ್ತಿರುವ ಜಿ-20 ನಾಯಕರ ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ವಿಶೇಷ ಆಹ್ವಾನಿತ ಅತಿಥಿ ರಾಷ್ಟ್ರಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುತ್ತಿದ್ದು ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ.ಗ್ರೂಪ್ 20 ರಚನೆ, ಸದಸ್ಯರು ಹಾಗೂ ಉದ್ದೇಶಗಳನ್ನು ಅರ್ಥ ಮಾಡಿಸುವ ಸಣ್ಣ ಪ್ರಯತ್ನವನ್ನು ಈ ಲೇಖನ ಮಾಡುತ್ತಿದೆ.
ರಚನೆ:G-20 ಅಥವಾ 20 ರ ಗುಂಪು 19 ದೇಶಗಳು ಮತ್ತು ಯುರೋಪಿಯನ್ ಯೂನಿಯನ್ (EU) ಅನ್ನು ಒಳಗೊಂಡಿರುವ ಅಂತರ ಸರ್ಕಾರಿ ವೇದಿಕೆಯಾಗಿದೆ. ಈ ಸಂಘಟನೆಯು 26 ಸೆಪ್ಟೆಂಬರ್ 1999 ರಂದು ಡಿಸೆಂಬರ್ 1 ರಂದು, ಭಾರತವು ಇಂಡೋನೇಷ್ಯಾದಿಂದ ಅಧಿಕಾರ ವಹಿಸಿಕೊಂಡ G-20 ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಭಾರತಕ್ಕೆ ಒಲಿದು ಬಂದ ಒಂದು ದೊಡ್ಡ ಅವಕಾಶ ಎಂದು ಕರೆದರು.

ಸದಸ್ಯ ರಾಷ್ಟ್ರಗಳು:-
ಗ್ರೂಪ್ 20 ರಲ್ಲಿ ಇರುವ ಸದಸ್ಯ ರಾಷ್ಟ್ರಗಳು ಈ ಕೆಳಗಿನಂತಿವೆ.G-20 ಅರ್ಜೆಂಟೀನಾ,ಆಸ್ಟ್ರೇಲಿಯಾ, ಬ್ರೆಜಿಲ್,ಕೆನಡಾ,ಚೀನಾ,ಫ್ರಾನ್ಸ್,ಜರ್ಮನಿ,ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯುರೋಪಿಯನ್ ದೇಶಗಳನ್ನು ಒಳಗೊಂಡಿದೆ.

ಉದ್ದೇಶಗಳು:-
1.ಹಣಕಾಸಿನ ಗಮನ.
2.ಅಂತರ್ಗತ ಬೆಳವಣಿಗೆ.
3.ಪರಸ್ಪರ ಸಂಬಂಧಿತ ವಿಷಯಗಳ ಚರ್ಚೆ.
4.ಪ್ರಭಾವ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸುವುದು.
6.ಜಾಗತಿಕ ಆರ್ಥಿಕ ಸಮಸ್ಯೆಗಳನ್ನು ಚರ್ಚಿಸಲು ಉತ್ತಮವಾದ ವೇದಿಕೆ.
7.ಪ್ರಮುಖವಾದ ಕೈಗಾರಿಕೀಕರಣಗೊಂಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳನ್ನು ಅಭಿವೃದ್ಧಿ ಸಾಧಿಸುವುದು.
8.ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು.
9.ಪ್ರಮುಖ ನಿಧಾನಗತಿಯ ಹಾರ್ದಿಕತೆಯ ಸಮಸ್ಯೆಗಳಿಗೆ ಪರಿಹಾರ.
10.ಜಗತ್ತಿನ ರಾಜತಾಂತ್ರಿಕ ಸಂಘರ್ಷಗಳನ್ನು ನಿವಾರಿಸುವುದು.

ಉಪಸಂಹಾರ:ರಾಜಕೀಯ ಸವಾಲುಗಳಿಂದ ಕೂಡಿದ ಜಾಗತಿಕ ಪರಿಸರದ ನಡುವೆ ಭಾರತ ಜಿ -20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.ಅನೇಕ ಬದಲಾವಣೆಯೊಂದಿಗೆ ಜಗತ್ತು ಇಂದು ಸಂದಿಗ್ದ ಸ್ಥಿತಿಯಲ್ಲಿದೆ ಇದಕ್ಕೆ ಜಿ-20 ಪರಿಹಾರವನ್ನು ಹುಡುಕಬೇಕಿದೆ.ಜಾಗತಿಕ ಆರ್ಥಿಕತೆ,ವ್ಯಾಪಾರ ಮತ್ತು ಹೂಡಿಕೆ,ಸೃಜನಶೀಲತೆ,ಪರಿಸರ ಮತ್ತು ಶಕ್ತಿ, ಉದ್ಯೋಗ, ಮಹಿಳಾ ಸಬಲೀಕರಣ, ಅಭಿವೃದ್ಧಿ, ಆರೋಗ್ಯ ಈ ವಿಚಾರಗಳ ಬಗ್ಗೆ ಜಿ-20 ಶೃಂಗ ಸಭೆಯಲ್ಲಿ ಚರ್ಚೆ ನಡೆದು ಒಂದಷ್ಟು ಕಾರ್ಯಯೋಜನೆ ಮತ್ತು ನೀತಿಗಳನ್ನು ರೂಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಗ್ರೂಪ್ ಆಫ್ 20 ಸಭೆಯ ಯೋಜನೆಗಳನ್ನು ತಿಳಿಯಲು ಜಗತ್ತು ತುದಿಗಾಲ ಮೇಲೆ ನಿಂತಿದೆ. ಜಗತ್ತಿನ ಭವಿಷ್ಯದ ಮೇಲೆ ಬೀರುವ ಪರಿಣಾಮಗಳೇನು ಎನ್ನುವುದನ್ನು ಕಾದು ನೋಡಬೇಕಾಗಿದೆ ಅಷ್ಟೇ. ಗ್ರೂಪ್ ಆಫ್ 20 ಸಭೆಯು ಸಫಲವಾಗಬೇಕಾದರೆ ಇಲ್ಲಿ ತೆಗೆದುಕೊಳ್ಳುವ ಅನೇಕ ನಿರ್ಧಾರಗಳನ್ನು ಜಗತ್ತು ಪಾಲಿಸಬೇಕಾಗಿದೆ. ಜಗತ್ತು ಯಾವ ರೀತಿಯಾಗಿ ಇಲ್ಲಿ ನಿರ್ಧಾರವಾಗುವ ತೀರ್ಮಾನಗಳನ್ನು ಪಾಲಿಸುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.
-ಹನುಮೇಶ ಅಗಳಕೇರಿ,ರಾಜ್ಯಶಾಸ್ತ್ರ ಉಪನ್ಯಾಸಕರು,ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜ್ ಕೊಪ್ಪಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!