ಕಲಬುರಗಿ/ಯಡ್ರಾಮಿ:ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಲಯ ಭೀಮರಾಯನಗುಡಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ನಡೆಯುತ್ತಿದೆ.
ಗ್ರಾಮದಲ್ಲಿ ಸೆಪ್ಟೆಂಬರ್ 4 ರಿಂದ ಆರಂಭವಾಗಿರುವ ಶಿಬಿರವು ನವೆಂಬರ್ 12 ರ ವರೆಗೆ ನಡೆಯಲಿದೆ ಗ್ರಾಮದಲ್ಲಿ ಪ್ರತಿ ದಿನವೂ ಕಾರ್ಯಕ್ರಮ ಜರಗುತ್ತಿದ್ದು ಕಾಲೇಜಿನ ಡೀನ್ ಡಾ.ಪಿ.ಹೆಚ್.ಕುಚನೂರ್ ಹಾಗೂ ಶಿಬಿರದ ಸಂಯೋಜಕರಾದ ಡಾ.ಸಿದ್ರಾಮ ಬಿ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ.ಸ್ಟೀಫನ್ ರಾಜ್ ಹಾಗೂ ಡಾ.ಶ್ರೀಕಾಂತ್.ಬಿ.ನೇತೃತ್ವದಲ್ಲಿ ಗ್ರಾಮಸ್ಥರಿಗೆ ಶಿಬಿರದ ಕುರಿತು ಜಾಥಾ ಮಾಡುವುದರ ಮೂಲಕ ಜಾಗೃತಿ ಮೂಡಿಸಲಾಯಿತು.




















