ಶಿವಗಂಗೆಯ ಬೆಳಕಿನಲಿ
ಶಿಂಷಾದ ತೆನೆ ಬಳುಕಿನಲಿ
ಸುತ್ತ ಕಣಿವೆಯ ಚಲುವನದದಿರ
ಉತ್ತುಂಗದ ನಿಲುಕಿನಲಿ
ಕಲ್ಪತರು ನಾಡ ವನದ
ತೆಂಗು ರಾಗಿ ತರುಗಳಲಿ
ಇತಿಹಾಸದ ಕತೆಗಳಲಿ
ಮಧುಗಿರಿಯ ನಾಡಿನಲಿ
ಏಕಶಿಲಾ ಬೆಟ್ಟದಲಿನ ಉತ್ತುಂಗದ ನಿಲುಕಿನಲಿ
ತುರುವೇಕೆರೆ ತೆಂಗಾಗಿ
ತಿಪಟೂರಲಿ ಕೊಬರಿಯಾಗಿ
ಚಿಕ್ಕನಾಯಕನ ಗಣಿಯಾಗಿ
ಗುಬ್ಬಿಯು ಕಲೆಯಾಗಿ
ಶಿರಾದಲ್ಲಿ ನಾಲೆಯಾಗಿ
ಪಾವಗಡದ ಬಯಲಾಗಿ
ಇದುವೇ ತುಮಕೂರು
ಶೈಕ್ಷಣಿಕ ತವರೂರು
-ಎ.ಬಿ




















