ಮೈಸೂರು:”ಜನ ಚೈತನ್ಯ ಫೌಂಡೇಷನ್”ರವರು ನಾದಬ್ರಹ್ಮ ಸಭಾಂಗಣದಲ್ಲಿ ಇಂದು ಖ್ಯಾತ ಘಜಲ್ ಹಾಗು ಹಿನ್ನೆಲೆ ಗಾಯಕ ಪಂಕಜ್ ಉದಾಸ್ ಹಾಗು ಕೆ.ಶಿವರಾಂರ ಸವಿನೆನಪಿಗಾಗಿ ಗಾಯನಸುಧೆಯನ್ನು ಆಯೋಜಿಸಿತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚರ್ಮ ರೋಗ ತಜ್ಞ ಡಾ.ಕೆ,ಎ,ಕೆ ಸುರೇಂದ್ರನ್, ಹಿರಿಯವಕೀಲಎಂ.ಷರೀಫ್,ಸಮಾಜಸೇವಕರವಿಗೌಡ,ರಂಗಭೂಮಿಕಲಾವಿದಆರ್,ಸಿ,ರಂಗಶೇಖರ್,ನಿವೃತ್ತ ಇಂಜಿನಿಯರ್ ಎನ್,ಶ್ರೀನಿವಾಸಲು,ಸಹಾಯಕ ಕಾರ್ಯಪಾಲಕ ಅಭಿಯಂತರ ಅಜರುದ್ದೀನ್, ಸಂಗೀತ ನಿರ್ದೇಶಕ ವೈಶಾಖ್ ಶಶಿಧರನ್ ಆದಿಲ್ ಪಾಷ ಭಾಗವಹಿಸಿದ್ದರು.
ಜನ ಚೈತನ್ಯ ಫೌಂಡೇಶನ್ ಗಾಯನ ಹವ್ಯಾಸ ಹಾಗೂ ನವ ಗಾಯಕರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಕಾರ್ಯಕ್ರಮದಲ್ಲಿ ಮೈಸೂರಿನ ಹೆಮ್ಮೆ ರಾಜೇಶ್ ಅವರು ಮುಖೇಶ್ ಅವರ ಧ್ವನಿ ಅನುಕರಿಸಿ ಜೀನಾ ಯಹಾ ಮರನಾ ಯಹಾ ಹಿಂದಿ ಹಾಡನ್ನು ಹಾಡಿದರು. ರೂಪ್ ಕುಮಾರ್ ಮತ್ತು ಆರಾಧನಾ ರವರ ಯುಗಳಗೀತೆ “ಓ ಅಸೀನ ಝಲ್ಫೊ ವಾಲಿ”ಹಿಂದಿ ಹಾಡು ಜನರ ಗಮನಸೆಳೆಯಿತು.
ವರದಿ:ಚೇತನ್ ಕುಮಾರ್ ಎಂ ಕೆ,ಮೈಸೂರು.




















