ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಕ್ಕಲದೊಡ್ಡಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ಯುವಕರ ಬಳಗದ ನೇತೃತ್ವದಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ರಸ್ತೆಯ ಅಕ್ಕ ಪಕ್ಕದ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ ಯುವಕರ ಕಾರ್ಯಕ್ಕೆ ಗ್ರಾಮದ ಹಿರಿಯರಾದ ಶ್ರೀ ವೆಂಕಟರಾಯಗೌಡ ಬೆನಕನ್ ಪ್ರೋತ್ಸಾಹ ನೀಡಿ ಬೆನ್ನು ತಟ್ಟಿದ್ದಾರೆ ಇಂತಹ ಬೇಸಿಗೆಯಲ್ಲಿ ಗಿಡಗಳಿಗೆ ನಿರುಣಿಸಿರುವುದು ಅತ್ಯಂತ ಪುಣ್ಯದ ಕೆಲಸ ನಿಮ್ಮೊಟ್ಟಿಗೆ ನಾವು ಯಾವಾಗಲೂ ಇರುತ್ತೇವೆ ಎಂದು ಯುವ ನಾಯಕರಾದ ಸಂಜೀವರೆಡ್ಡಿ ಸಾಹುಕಾರ ಹೇಳಿದರು.ಇದೆ ಸಂದರ್ಭದಲ್ಲಿ ಹಿರಿಯರಾದ ಬಸವರಾಜ ಪಾಟೀಲ್ ವಕೀಲರು ಶರಣಗೌಡ ಕಮ್ಮಲದಿನ್ನಿ ಶಶಿ ದೇಸಾಯಿ ಹೇಮರಡ್ಡಿ ಮಲ್ಲಮ್ಮ ಯುವಕ ಬಳಗದ ಸರ್ವ ಸದಸ್ಯರು ಭಾಗವಹಿಸಿದ್ದರು.
ವರದಿ:ಶರಣಪ್ಪ ಹುಣಸಗಿ




















