ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಕಾಶ್ ನಿಂದ (AESL) ನ ANTHE 2024 ಪರೀಕ್ಷೆ ಘೋಷಣೆ

ಶಿವಮೊಗ್ಗ: ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ (AESL) ತನ್ನ ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಪರೀಕ್ಷೆಯಾದ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಂ (ANTHE) ಆರಂಭಿಸಿ 15 ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಇತ್ತೀಚಿನ ಆವೃತ್ತಿಯಾದ ANTHE -2024 ಅನ್ನು ಪ್ರಕಟಿಸಿದೆ.7 ರಿಂದ 12 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯ ನಂತರ ಶೇ.100 ರವರೆಗೆ ವಿದ್ಯಾರ್ಥಿವೇತನ ಪಡೆಯುವ ಅವಕಾಶವನ್ನು ಗಳಿಸಬಹುದಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಯುಎಸ್ಎದ ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್ ಗೆ ಸಂಪೂರ್ಣ ಉಚಿತವಾಗಿ ಕರೆದೊಯ್ಯುವ 5 ದಿನಗಳ ಪ್ರವಾಸ ಕಾರ್ಯಕ್ರಮವೂ ಇರಲಿದೆ.ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ ನ ಸಿಇಒ, ಎಂಡಿ ದೀಪಕ್ ಮೆಹ್ರೋತ್ರಾ ಮಾತನಾಡಿ, ದೇಶದ ವಿದ್ಯಾರ್ಥಿಗಳ ಆಕಾಂಕ್ಷೆಗಳು ಮತ್ತು ಸಾಮರ್ಥ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ANTHE ಕಳೆದ 15 ವರ್ಷಗಳಿಂದಲೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿದೆ ಎಂದರು.ANTHE 2024 ಅ.19 ರಿಂದ 27 ರ ಅವಧಿಯಲ್ಲಿ ನಡೆಯಲಿದ್ದು,ಆನ್ ಲೈನ್ ಮತ್ತು ಆಫ್ ಲೈನ್ ಗಳೆರಡರಲ್ಲೂ ನಡೆಯಲಿದೆ. ದೇಶದ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರವೇಶ ಪರೀಕ್ಷೆಯನ್ನು ಆಯೋಜಿಸಲಾಗುತ್ತಿದೆ.

ಆಕಾಶ್ ಗೆ ದಾಖಲಾಗಿ ಅತ್ಯುನ್ನತ ಸಾಧನೆ ಮಾಡಿದ ಮತ್ತು ಉನ್ನತ ಶ್ರೇಣಿ ಪಡೆದುಕೊಳ್ಳುವಲ್ಲಿ ಅನೇಕ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ :ರಿಷಿ ಶೇಖರ್ ಶುಕ್ಲಾ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 25), ಕೃಷ್ಣ ಸಾಯಿ ಶಿಶಿರ್ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 67), ಅಭಿಷೇಕ್ ಜೈನ್ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 78). ಇವರಲ್ಲದೇ,ಎನ್ಇಇಟಿ 2023 ರಲ್ಲಿ ಸಂಸ್ಥೆಯ ಟಾಪ್ ಸ್ಕೋರರ್ ಗಳಾಗಿ ಕೌಸ್ತವ್ ಬೌರಿ (ಎಐಆರ್ 03), ಧೃವ್ ಅಡ್ವಾಣಿ(ಎಐಆರ್ 05), ಸೂರ್ಯ ಸಿದ್ಧಾರ್ಥ್ ಎನ್ (ಎಐಆರ್ 06), ಆದಿತ್ಯಾ ನೀರಜೆ (ಎಐಆರ್ 07) ಮತ್ತು ಆಕಾಶ್ ಗುಪ್ತಾ(ಎಐಆರ್ 28) ಹೊರಹೊಮ್ಮಿದ್ದಾರೆ.

ಆಫ್ ಲೈನ್ ಮತ್ತು ಆನ್ ಲೈನ್ ಪರೀಕ್ಷೆಗಳೆರಡಕ್ಕೂ 200 ರೂಪಾಯಿ ಶುಲ್ಕವಿದೆ. 15 ಆಗಸ್ಟ್ 2024 ರೊಳಗೆ ನೋಂದಾಯಿಸುವ ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯ್ತಿ ಸಿಗಲಿದೆ. ಆನ್ ಲೈನ್ ಪರೀಕ್ಷೆಗಿಂತ ಮೂರು ದಿನಗಳ ಮೊದಲು ಮತ್ತು ಆಫ್ ಲೈನ್ ಪರೀಕ್ಷೆ ಆರಂಭಗೊಳ್ಳುವ ಏಳು ದಿನಗಳೊಳಗೆ ನೋಂದಾಯಿಸಿ ಕೊಳ್ಳಬಹುದಾಗಿದೆ.ANTHE ಯ ಆಫ್ ಲೈನ್ ಪರೀಕ್ಷೆಗಳು ಅ. 20 ಮತ್ತು 27, 2024 ರಂದು ದೇಶಾದ್ಯಂತ ಇರುವ ಆಕಾಶ್ ಸಂಸ್ಥೆಯ 315+ ಕೇಂದ್ರಗಳಲ್ಲಿ ನಡೆಯಲಿವೆ. ಆನ್ ಲೈನ್ ಪರೀಕ್ಷೆಗಳನ್ನು ಅ. 19 ರಿಂದ 27, 2024 ರವರೆಗೆ ಎಕ್ಸಾಂ ವಿಂಡೋದಲ್ಲಿ ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದಾಗಿದೆ.10 ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ನ 08, 2024 ರಂದು ಪ್ರಕಟಿಸಲಾಗುತ್ತದೆ. ಇದೇ ವೇಳೆ, 7 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ನ 13, 2024 ಮತ್ತು 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ನ. 16, 2024 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.ಬ್ರಾಂಚ್ ಮ್ಯಾನೇಜರ್ ಹರ್ಷ ಹೆಚ್ ಎಸ್,ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ವೆಂಕಟೇಶ್ ರಾವ್ ಇದ್ದರು.

ಫಲಿತಾಂಶಗಳು ANTHE ವೆಬ್ ಸೈಟ್ anthe.aakash.ac.in ನಲ್ಲಿಯೂ ಲಭ್ಯವಿರಲಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!