ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ವಿಜಯೋತ್ಸವ ಆಚರಿಸಿದರು.
ಈ ವಿಜಯೋತ್ಸವವನ್ನು ಏಕೆ ಅಚರಿಸಲಾಗುತ್ತಿದೆ ಇದರ ಉದ್ದೇಶ ಏನೆಂದು ತಿಳಿಸುತ್ತಾ ಅದೇ ರೀತಿ ಅಂಬೇಡ್ಕರ್ ರವರು ಇದರ ಪುರಾವೆಯನ್ನು ಪತ್ತೆ ಹಚ್ಚಿ ಮಹಾರಾಷ್ಟ್ರದ ಪೂನಾ ನಗರದಿಂದ 15 ಕಿಲೋಮೀಟರ್ ದೂರದಲ್ಲಿರುವ ಕೋರೆಗಾಂವ್ ಗೆ ತೆರಳಿ ವಿಜಯ ಸ್ತಂಭವನ್ನು ಪತ್ತೆ ಹಚ್ಚಿ ಯುದ್ಧ ನಡೆದು 109 ವರ್ಷಗಳ ನಂತರ ಅಂದರೆ 1927 ರ ಜನವರಿ 1ನೇ ತಾರೀಕಿನಂದು ಅಂಬೇಡ್ಕರ್ ಅವರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಪ್ರಥಮ ಬಾರಿಗೆ ವಿಜಯ ಸ್ಥಂಬಕ್ಕೆ ದೀರ್ಘದಂಡ ನಮಸ್ಕಾರ ಮಾಡಿದರು ಎಂಬ ವಿಷಯವನ್ನು ದಲಿತ ಸಂಘಟನೆ ಮುಖಂಡರಾದ ಸಿ. ಕೆ ತಿಪ್ಪೇಸ್ವಾಮಿ ರವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದಲಿತ ಸಂಘಟನೆ ಮುಖಂಡರಾದ ವಳ್ಳುರು ನಾಗೇಶ್ , ಕಡಪಲಕೇರೇ ನರಸಿಂಹಪ್ಪ, ಪೆದ್ದನ್ನ, ಕೃಷ್ಣಮೂರ್ತಿ, ಕಡಮಲಕುಂಟೆ ಹನುಮಂತರಾಯಪ್ಪ, ಅಪ್ ಬಂಡೆ ಗೋಪಾಲ್ , ಮುಖಂಡರಾದ ಎಂ. ಕೆ ನಾರಾಯಣಪ್ಪ, ಮತ್ತು ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ ಮತ್ತು ದಲಿತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ವಿಜಯೋತ್ಸವ ಆಚರಿಸಿದರು.




















