ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ನಂ10 ಮುದ್ದಾಪುರ ಸಹಿಪ್ರಾ ಶಾಲೆಯ ಪರಿಸರ ದಿನದಿಂದ ದಿನಕ್ಕೆ ಹದಗೆಡುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಕಿಡಿಗೇಡಿಗಳು ಶಾಲೆಯ ಆಸ್ತಪಾಸ್ತಿಗಳನ್ನು ಹಾಳುಗೆಡುವುತ್ತಿದ್ದು, ಶಾಲೆಯ ಶಿಕ್ಷಕರಿಗೆ, ಎಸ್ ಡಿ ಎಂ ಸಿ ಪದಾಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ.
ನಂ. 10 ಮುದ್ದಾಪುರ ಶಾಲೆಯ ಅಕ್ಕಪಕ್ಕದಲ್ಲಿ ಸಾರ್ವಜನಿಕರು ತಿಪ್ಪೆಗುಂಡಿಗಳನ್ನು ಹಾಕಿದ್ದು, ಇದರಿಂದ ಕೆಟ್ಟ ವಾಸನೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಡಚಣೆಯಾಗಿದ್ದು, ದೈನಂದಿನ ಪಾಠ ಪ್ರವಚನಕ್ಕೆ ತೊಂದರೆಯಾಗಿದ್ದು ಶಿಕ್ಷಕರು, ವಿದ್ಯಾರ್ಥಿಗಳು ಸ್ಥಳೀಯರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಶಾಲೆಯ ಕಟ್ಟಡಗಳು ಸಹಿತ ಹಳೆಯದಾಗಿದ್ದು, ಹೊಸ ಕಟ್ಟಡಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕೆಂದು ಶಾಲೆಯ ಎಸ್ಡಿಎಂಸಿ ಪದಾಧಿಕಾರಿಗಳು, ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.
ಇದರ ಜೊತೆಗೆ ಇತ್ತೀಚೆಗೆ ಶಾಲೆಯ ಆವರಣದಲ್ಲಿ ನೂತನವಾಗಿ 4 ಲಕ್ಷರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ್ದ ಶೌಚಾಲಯವನ್ನು ಕಿಡಿಗೇಡಿಗಳು ಹಾಳು ಮಾಡಿರುವುದಲ್ಲದೆ, ಶಾಲೆಯ ವಿದ್ಯುತ್ ಸಂಪರ್ಕದ ವೈರ್ಗಳನ್ನು ಸಹಿತ ಕಿತ್ತುಹಾಕಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶಾಲೆಯ ಮೊದಲ ಮಹಡಿಯ ಶಾಲೆಯ ಕಟ್ಟಡದ ಕಿಟಕಿಗಳನ್ನು ಹಾಳು ಮಾಡಿದ್ದಾರೆ. ಶಾಲೆಯ ಕೊಠಡಿಗಳ ಬಾಗಿಲುಗಳನ್ನು ಸಹಿತ ಹಾಳು ಮಾಡಿದ್ದು ಒಟ್ಟಾರೆ ಉತ್ತಮವಾಗಿ ಇರಬೇಕಾಗಿದ್ದ ಶಾಲೆಯ ಪರಿಸರ ಹಾಳಾಗಿದ್ದು, ಶಾಲೆಯ ಆಸ್ತಿ ಪಾಸ್ತಿಗೆ ಹಾನಿ ಮಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಇನ್ನು ಮುಂದಾದರು ಶಾಲಾ ದೇಗುಲವನ್ನು ಗ್ರಾಮದವರು ಶಿಕ್ಷಣ ಇಲಾಖೆ, ಮುತ್ತುವರ್ಜಿ ವಹಿಸುತ್ತಾರೋ? ಇಲ್ಲವೋ,,,,
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷೆ ಕಜ್ಜಿ ಪದ್ಮಾವತಿ, ಪದಾಧಿಕಾರಿಗಳಾದ ಎಚ್.ರೇಣುಕಪ್ಪ, ಸ್ವಾಮಿ, ಎಚ್.ಗೋಪಾಲ್, ಅಕ್ಕಿ ಬಸವರಾಜ್, ರಾಮಚಂದ್ರ ದಂಡಿನ, ಹುಲುಗಪ್ಪ ಸೇರಿದಂತೆ ಇತರೆ ಸದಸ್ಯರು, ಮುಖಂಡರಾದ ಎ. ಎಸ್. ಯಲ್ಲಪ್ಪ ಹಾಗೂ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















