ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಎಂ. ಬಿ. ಪಾಟೀಲರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು – ಸಂಗಮೇಶ ಎನ್ ಜವಾದಿ

ಬೀದರ್/ಚಿಟಗುಪ್ಪ : ಕರ್ನಾಟಕ ರಾಜ್ಯದ ಭವಿಷ್ಯದ ನಾಯಕರು, ಬಡವರ ಬಂಧು, ರೈತರ ಆಶಾಕಿರಣ, ವಿಜಯಪುರ ಜಿಲ್ಲೆಯ ಅಭಿವೃದ್ಧಿ ಹರಿಕಾರರು, ಯುವಕರ ಕಣ್ಮಣಿ, ಜನಸಾಮಾನ್ಯರ ಪ್ರೀತಿಯ ಅಕ್ಕರೆಯ ಜನನಾಯಕರಾದ ಶ್ರೀ ಎಂ ಬಿ ಪಾಟೀಲರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಜವಾಬ್ದಾರಿ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸಾಹಿತಿ, ಸಾಮಾಜಿಕ ಸೇವಕರು, ಪರಿಸರವಾದಿ ಸಂಗಮೇಶ ಎನ್. ಜವಾದಿಯವರು ಕಾಂಗ್ರೆಸ್ ಹೈಕಮಾಂಡ್ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಗಮೇಶ ಎನ್. ಜವಾದಿ ರವರು ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರ ಸೇರಿದಂತೆ ಇಡೀ ವಿಜಯಪುರ
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಜನಪರ, ರೈತಪರ ನಿಸ್ವಾರ್ಥ ಸೇವೆಗೈದು ಸರ್ವ ಜನಾಂಗದವರಿಂದ ಸೈ ಎನಿಸಿಕೊಂಡಿದ್ದಾರೆ. ಪ್ರಗತಿಪರ ಚಿಂತಕರಾಗಿ, ವೈಜ್ಞಾನಿಕ ಶಿಕ್ಷಣದ ಅಭಿವೃದ್ಧಿಯ ಹರಿಕಾರರಾಗಿ, ಈದಿಗ ಆರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ, ರಸ್ತೆ, ಸಾರಿಗೆ, ವಸತಿ ಸೇರಿದಂತೆ ಹಲವು ಕ್ಷೇತ್ರಗಳ ಉನ್ನತಿಗಾಗಿ ಯೋಜನೆಗಳನ್ನು ತಂದು ಬಬಲೇಶ್ವರ ಕ್ಷೇತ್ರದ ವಿಕಾಸಕ್ಕಾಗಿ ತನು ಮನದಿಂದ ಶ್ರಮಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ದುಡಿಯುತ್ತಿದ್ದಾರೆ.

ಉತ್ತಮ ಸಂಘಟಕರು, ಯಶಸ್ವಿ ಆಡಳಿತಗಾರರು ಹೌದು, ಮೇಲಾಗಿ ಲಿಂಗಾಯತ ಧರ್ಮದ ಪ್ರಬಲ ನಾಯಕರು, ಸರ್ವ ಜನಾಂಗದ ಪ್ರೀತಿಯ ನೇತಾರರಾಗಿ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿ, ಕರುನಾಡಿನಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ಛಾಪು ಮೂಡಿಸಿದ್ದಾರೆ.
ಈಗ ನೀಡಿರುವ ಸಚಿವ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಾ, ಜನರಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ , ಬಡವರಿಗೆ, ನೊಂದವರಿಗೆ ನೆರವು ನೀಡಿ,ಜನ ಮೆಚ್ಚಿನ ಸಚಿವರಾಗಿದ್ದಾರೆ.

ಅದಕ್ಕಾಗಿಯೇ ಇವರ ವೈಯಕ್ತಿಕ ಜನಮನ್ನಣೆಯ ಸಾಮರ್ಥ್ಯ ಕರುನಾಡಿನ ಜನರಿಗೆ ಅವಶ್ಯಕವಾಗಿದೆ. ಹಾಗಾಗಿ ಇವರು ಘನ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾಗಿ ಕಾರ್ಯನಿರ್ವಹಿಸಲು ಹೇಳಿ ಮಾಡಿಸಿದ
ಸೂಕ್ತ ಮತ್ತು ಯೋಗ್ಯ, ಸಮರ್ಥ ಉತ್ಸಾಹಿ ವ್ಯಕ್ತಿತ್ವದವರಾಗಿದ್ದು, ಕರ್ನಾಟಕ ರಾಜ್ಯದ ಸರ್ವಾಂಗೀಣ, ಸರ್ವತೋಮುಖ ಅಭಿವೃದ್ಧಿಗಾಗಿ
ಸುರಕ್ಷಿತ ಕರುನಾಡಿನ ಅಭ್ಯುದಯದ ಏಳಿಗೆಗಾಗಿ ಸನ್ಮಾನ್ಯ ಶ್ರೀ ಎಂ ಬಿ ಪಾಟೀಲರಿಗೆ ಈ ತಕ್ಷಣವೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಘೋಷಣೆ ಮಾಡುವ ಮುಖಾಂತರ ನಾಡಿನ ಅಭಿವೃದ್ಧಿಗೆ ಕಾಂಗ್ರೆಸ್ ಹೈಕಮಾಂಡ್ ಕೊಡುಗೆ ನೀಡಬೇಕು.
ನೀಡುವುದರಿಂದ ಕಾಂಗ್ರೆಸ್ ಪಕ್ಷ ನಾಡಿನಾದ್ಯಂತ ಇನ್ನುಷ್ಟು ಬಲಿಷ್ಠವಾಗಲಿದೆ ಹಾಗೆಯೇ
ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಇವರಿಗಿದೆ.

ಕಾರಣ ಈ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ಸನ್ಮಾನ್ಯ ಶ್ರೀ ಎಂ ಬಿ ಪಾಟೀಲರನ್ನು ಆಯ್ಕೆ ಮಾಡಬೇಕು. ಈ ಮೂಲಕ ಉತ್ತರ ಕರ್ನಾಟಕಕ್ಕೆ ಅವಕಾಶ ಕಲ್ಪಿಸಿದಂತೆ ಆಗುತ್ತದೆ ಎಂದು ಸಾಹಿತಿ, ಪತ್ರಕರ್ತರು, ಸಾಮಾಜಿಕ ಸೇವಕರು , ಪರಿಸರ ಸಂರಕ್ಷಕರಾದ ಸಂಗಮೇಶ ಎನ್ ಜವಾದಿ ಯವರು ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಯವರಿಗೆ ಹಾಗೂ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಯವರೆಗೆ ಒತ್ತಾಯಿಸಿ, ವಿನಂತಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!