ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಸವಾದಿ ಶಿವ ಶರಣರ ವಿರಾಟ್ ಹಿಂದೂ ಸಮಾವೇಶ ನಡೆಯುವುದು ಶತಸಿದ್ಧ : ತಡೋಳಾ ಶ್ರೀ

ಬಸವಕಲ್ಯಾಣ : ಇದೇ ಜೂನ್ 28ರ ರವಿವಾರದಂದು ನಗರದ ಅಕ್ಕಮಹಾದೇವಿ ಆವರಣದಲ್ಲಿ ನಡೆಯಲಿರುವ ಬೀದರ್ ಜಿಲ್ಲೆಯ ಎಲ್ಲಾ ಮಠಾಧೀಶರ ಒಕ್ಕೂಟ, ಹಿಂದೂ ಸರ್ವ ಸಮಾಜಗಳ ಒಕ್ಕೂಟ ಬೀದರ ಮತ್ತು ಬಸವಾದಿ ಶಿವ ಶರಣರ ಬೃಹತ ಹಿಂದೂ ಸಮಾವೇಶ ಉತ್ಸವ ಸಮಿತಿ ಬಸವಕಲ್ಯಾಣ ವತಿಯಿಂದ ಧರ್ಮ, ಪರಿಸರ ಹಾಗೂ ಕೃಷಿ ರೈತಾಪಿ ವರ್ಗದ ಕಲ್ಯಾಣಕ್ಕಾಗಿ ಮಹಾ ಸಂಕಲ್ಪದ ಪ್ರಯುಕ್ತ ಕೊಲ್ಲಾಪೂರದ ಕಣೇರಿ ಮಠದ ಜಗದ್ಗುರು ಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯ ಹಾಗೂ ನೇತೃತ್ವದಲ್ಲಿ ಐತಿಹಾಸಿಕ ಬಸವಾದಿ ಶಿವ ಶರಣರ ವಿರಾಟ ಹಿಂದೂ ಸಮಾವೇಶ ಯಾವುದೇ ಕಾರಣಕ್ಕೂ ತಡೆಯುವುದಕ್ಕೆ ಆಗುವುದಿಲ್ಲ ನೂರು ಪ್ರತಿಶತದಷ್ಟು ಕಾರ್ಯಕ್ರಮ ನಡೆದೇ ನಡೆಯುತ್ತೇ, ಈಗಾಗಲೇ ಜಿಲ್ಲೆಯ ಎಲ್ಲಾ ಪರ ವಿರೋಧದ ಸ್ವಾಮಿಜಿಗಳಿಗೆಲ್ಲರಿಗೂ ಚರ್ಚಿಸಲಾಗಿದೆ ಎಲ್ಲರ ಸಹಕಾರ ಸಹಯೋಗದಿಂದ ಕಾರ್ಯಕ್ರಮ ಯಶ್ವಶಿಯಾಗಲಿದೆ ಎಂದು ಬೀದರ್ ಜಿಲ್ಲಾ ಮಠಾಧೀಶರ ಒಕ್ಕೂಟದ ನೂತನ ಅಧ್ಯಕ್ಷರಾದ ಷ.ಬ್ರ, ಪೂಜ್ಯ ಶ್ರೀ ಡಾ. ರಾಜೇಶ್ವರ ಶಿವಾಚಾರ್ಯರು ತಡೋಳಾ, ಡೊಣಗಾಪೂರ, ಮೇಹಕರ ಹಿರೇಮಠ ಸಂಸ್ಥಾನ ರವರು ಇಂದು ನಡೆದ ಹಿಂದೂ ಸಮಾಜದ ಸರ್ವ ಸಮುದಾಯಗಳ ಮುಖಂಡರೊಂದಿಗೆ ಚರ್ಚಿಸಿ ಎಲ್ಲರ ಸಹಯೋಗದೊಂದಿಗೆ ಈ ಕಾರ್ಯಕ್ರಮ ಬಸವಣ್ಣನವರ ಕರ್ಮ ಭೂಮಿ. ಶರಣರ ನಾಡು ಬಸವಕಲ್ಯಾಣ ನೆಲದಲ್ಲಿ ಐತಿಹಾಸಿಕವಾಗಲಿದ್ದು, ಜಾತಿ ರಹಿತ, ಪಕ್ಷ ರಹಿತ ಹಾಗೂ ಎಲ್ಲಾ ಸಮುದಾಯಗಳ ಶರಣರನ್ನು ಬಿಂಬಿಸುವ ಹಾಗೂ ಹಿಂದೂ ಧರ್ಮದ ಜಾಗೃತಿಯ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲೆಯ, ರಾಜ್ಯದ ಮತ್ತು ನೆರೆ ರಾಜ್ಯದ ನಾನಾ ಕಡೆಯಿಂದ 300 ಕ್ಕೂ ಅಧಿಕ ಪೂಜ್ಯ ಸ್ವಾಮಿಜಿಗಳ ದಿವ್ಯ ಸನ್ನಿಧಾನದಲ್ಲಿ ಮಹಾ ಸಮಾವೇಶ ಜರುಗಲಿದ್ದು, ಜೊತೆಗೆ ಸಾವಿರಾರು ಮಾತೆಯರಿಂದ ಬೃಹತ ಪೂರ್ಣ ಕುಂಭಕಳಸ (ಮಂಗಳ ಕಳಸ) ವಿವಿಧ ಜನಪದ ಕಲಾತಂಡಗಳ ಭವ್ಯ ಪ್ರದರ್ಶನದೊಂದಿಗೆ ಶ್ರೀ ಮಹಾತ್ಮಾ ಬಸವೇಶ್ವರ ದೇವಸ್ಥಾನದಿಂದ ಅಕ್ಕಮಹಾದೇವಿ ಕಾಲೇಜು ಮೈದಾನದವರೆಗೆ ಭವ್ಯ ಮೆರವಣಿಗೆ ನಂತರ ಬೃಹತ್ ಹಿಂದೂ ಮಹಾ ಸಮಾವೇಶ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಜಿಲ್ಲೆಯ ಆಡಳಿತ ವರ್ಗಕ್ಕೆ, ರಾಜ್ಯ ಸರ್ಕಾರಕ್ಕೆ ಹಾಗೂ ಕಾನೂನಿನ ಅಡಿಯಲ್ಲಿ ಕಾರ್ಯಕ್ರಮದ ಪರವಾನಿಗೆ ವಿನಂತಿಸಲಾಗಿದೆ ಕಾರ್ಯಕ್ರಮದ ಅನುಮತಿ ನೂರಕ್ಕೆ ನೂರು ಸಿಕ್ಕೆ ಸಿಗುತ್ತದೆಂದು ತಡೋಳಾ ಶ್ರೀಗಳು ನುಡಿದರು.

ಈ ಕಾರ್ಯಕ್ರಮದಲ್ಲಿ ದೇಶದ ಬೆನ್ನೆಲುಬಾಗಿರುವ ರೈತಾಪಿ ವರ್ಗದ ಅಭಿವೃದ್ಧಿ, ರೈತರ ಸಮಸ್ಯೆಗಳು ಮತ್ತು ಅದಕ್ಕೆ ಸೂಕ್ತ ಪರಿಹಾರಗಳ ಕುರಿತು ಮಂಥನ. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾಗಿರುವ ಮಹತ್ವದ ಬದಲಾವಣೆಗಳ ಬಗ್ಗೆ ಮುಕ್ತ ಚರ್ಚೆ, ಹಿಂದೂ ಸಮಾಜದ ಒಗ್ಗಟ್ಟು ಜಗದ್ಗುರು ಶ್ರೀ ಬಸವೇಶ್ವರರ ಸನ್ಮಾರ್ಗದಂತೆ ಸದೃಢ, ಸಾಮರಸ್ಯದ ಸಮಾಜ ನಿರ್ಮಾಣ, ಅಸ್ಪೃಶ್ಯತೆಯ ನಿರ್ಮೂಲನೆ ಹಾಗೂ ಎಲ್ಲರಲ್ಲೂ ‘ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುವದೊಂದಿಗೆ ನಾವೆಲ್ಲ ಒಂದು, ನಾವೆಲ್ಲ, ಬಂಧು, ನಾವೆಲ್ಲಾ ಹಿಂದೂಗಳು ಎಂಬ ಧೃಡ ಸಂಕಲ್ಪ ಈ ಕಾರ್ಯಕ್ರಮದ ಕಹಳೆಯ ಪ್ರತಿಧ್ವನಿಯಾಗಿದೆ ಎಂದು ಶ್ರೀಗಳು ವಿವರಿಸಿದರು.

ವರದಿ: ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!