
ಹೊಳವನಹಳ್ಳಿ ಹೋಬಳಿಯ ಅವದರನಹಳ್ಳಿ ಸರ್ವೆ ನಂಬರ್ 25/1ರಲ್ಲಿ 8ಎಕರೆ 1 ಗುಂಟೆ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಭೂಗಳ್ಳರು.
ನಕಲು ದಾಖಲೆ ಸೃಷ್ಟಿಸಿ 10 ಲಕ್ಷ ರೂಪಾಯಿಗೆ 8 ಎಕರೆ 1 ಗುಂಟೆಯನ್ನು ಮಾರಾಟ ಮಾಡಿದ ಭೂಗಳ್ಳ ಗೋವಿಂದ ರಾಜು.
2 ತಿಂಗಳು ಹಿಂದೆ ಅಷ್ಟೇ ನಕಲು ದಾಖಲೆ ಸೃಷ್ಟಿಸಿ ರಿಜಿಸ್ಟರ್ ಗೆ ಬಂದ ಅನಾಮಧೇಯ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ.
ಭೂ ಗಳ್ಳ ಕುಣಿಗಲ್ ತಾಲೂಕು ಹುಲಿಯೂರು ದುರ್ಗಾ ಸಬ್ ರಿಜಿಸ್ಟರ್ ಆಫೀಸಿನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ನೊಂದ ರೈತ ಬಸವರಾಜು ಮಾತನಾಡಿ ಭೂಗಳ್ಳರ ವಿರುದ್ಧ ಕಾನೂನು ರೀತಿ ಕ್ರಮವಹಿಸಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕೊರಟಗೆರೆ ತಹಶೀಲ್ದಾರ್ ಮಂಜುನಾಥ್ ರವರಿಗೆ ಮನವಿ ಪತ್ರ ನೀಡಿದರು.
ಕೊರಟಗೆರೆ ತಾಲೋಕು ಹೊಳವನಹಳ್ಳಿ ಹೋಬಳಿಯ ಅವದರನಹಳ್ಳಿ ಸರ್ವೆ ನಂ 25/1ರಲ್ಲಿ 8 ಎಕರೆ 1 ಗುಂಟೆ ದಲಿತ ಕುಟುಂಬಕ್ಕೆ ಸೇರಿದ ಭೂಮಿಯನ್ನು ನಕಲು ದಾಖಲೆ ಸೃಷ್ಟಿಸಿ ಬೇರೊಬ್ಬ ಮಾಲೀಕನಿಗೆ ಮಾರಾಟ ಮಾಡಿದ ಭೂಗಳ್ಳರು.
ಇದಕ್ಕೆ ಸಂಬಂಧಿಸಿದಂತೆ ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿಯ ಅವದರನಹಳ್ಳಿ ನಾರಾಯಣಪ್ಪ ( ನಾರಾಯಣನಾಯ್ಕ ) ಬಿನ್. ರಾಮನಾಯ್ಕ ಇವರುಗಳು ಸುಮಾರು 70ವರ್ಷಗಳಿಂದ ಅನುಭೋಗದಲ್ಲಿ ಇದ್ದು ಇವರಿಗೆ ತಿಳಿಯದೆ ಬೇರೊಬ್ಬ ವ್ಯಕ್ತಿಯು ಜಮೀನನ್ನು ಮಾರಾಟ ಮಾಡಿದ್ದು ಅದರ ಪೂರ್ಣ ಖಾತೆಯನ್ನು ಭೂಗಳ್ಳನಿಂದ ವಜಗೊಳಿಸಿ ಮೂಲ ವಾರಸುದಾರರಾದ ನಾರಾಯಣಪ್ಪ ಬಿನ್ ರಾಮನಾಯ್ಕ ರವರಿಗೆ ಸೇರಬೇಕೆಂದು ಕೊರಟಗೆರೆ ದಲಿತ ಸಂಘಟನೆಯ ಭೀಮ್ ಆರ್ಮಿ ಹಾಗೂ ದಲಿತಪರ ಸಂಘಟನೆಯ ರಾಜ್ಯಾಧ್ಯಕ್ಷ ಎನ್. ಕುಮಾರ್ ರವರು ಹೇಳಿದರು.
ವರದಿ. ಪ್ರಸನ್ನ ಕುಮಾರ್. ಎಸ್.ಕೊರಟಗೆರೆ




















