ವಿಜಯಪುರ/ ಇಂಡಿ : ಹೊರ್ತಿ ಪೊಲೀಸ್ ಸ್ಟೇಷನ್ ನಲ್ಲಿ ಎಸ್ ಸಿ, ಎಸ್ ಟಿ ಕುಂದು ಕೊರತೆ ಬಗ್ಗೆ ಸಭೆ ನಡೆಯಿತು.
ಈ ಸಭೆಯಲ್ಲಿ ಹೊರ್ತಿ ಪೋಲಿಸ್ ಠಾಣೆಯ ಸರಹದ್ದಿನಲ್ಲಿ ಅಕ್ರಮ ಅಕ್ಕಿ ಸಾಗಾಟ ನಡೆಯುತ್ತಿದ್ದು ಈ ಅಕ್ರಮಕ್ಕೆ ಕಡಿವಾಣ ಹಾಕಿ ಎಂದು ಇಂಡಿ ತಾಲೂಕ ಡಿಎಸ್ಎಸ್ ಅಧ್ಯಕ್ಷರು ಸಂತೋಷ್ ತಳಕೇರಿ ಅವರು ಮಾತನಾಡಿದರು. ಹಾಗೂ ಹೊರ್ತಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ತಾವು ದೊಡ್ಡ ಪ್ರಮಾಣದ 2 ಲಾರಿಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ಎಫ್.ಐ.ಆರ್. ಮಾಡಿದ್ದೀರಿ ಎಂದು ಹೊರ್ತಿ ಪೊಲೀಸ್ ಠಾಣೆ ಅಧಿಕಾರಿಗಳಿಗೆ ದಲಿತ ಮುಖಂಡರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಇಂಡಿ ತಾಲೂಕಿನ ಅಂಬೇಡ್ಕರವಾದ ಸಂಘಟನೆಯ ಅಧ್ಯಕ್ಷರಾದಂತಹ ಹೊರ್ತಿ ಗ್ರಾಮದ ಸಿದ್ದು ಕಾಂಬಳೆ ಹಾಗೂ ಹೊರ್ತಿ ಗ್ರಾಮದ ಹಿರಿಯ ದಲಿತ ಮುಖಂಡರಾದ ಶಿವು ಮಸಳಿಕೆರಿ, ಹಿರಿಯರಾದಂತ ರೇವಪ್ಪ ತಳಕೇರಿ ಅವರು ಇದ್ದರು. ಹೊರ್ತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಹಾಗೂ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಸರ್ಕಲ್ ನಲ್ಲಿರುವ ಗುಟಕಾ ಪಾನ್ ಶಾಪ್ ಅಂಗಡಿಗಳನ್ನು ತೆರುವುಗೊಳಿಸಬೇಕೆಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.
ವರದಿ ಆನಂದ ಹರಿಜನ




















