ಸರ್ಕಾರ, ಸಮಾಜದ ಬದಲಾವಣೆ
ನಾರಿ ಮಣಿ ನಿನ್ನ ಕೈಯಲ್ಲಿದೆ ಕಣೆ
ಸಮಾಜ, ಸರಕಾರದಲ್ಲಿನ ಅನ್ಯಾಯ
ಗಂಡಸಿನ ದೌರ್ಜನ್ಯ ಅತ್ಯಾಚಾರ
ಕೊನೆಗಾಣಬೇಕಾದರೆ
ದೇವರಾಣೆಗೂ ನಿನ್ನಿಂದ ಕಣೆ
ನಿನ್ನಲ್ಲಿರುವ ತಾಳ್ಮೆ ನೀ ಪಡುವ ಪರಿಶ್ರಮ
ಪುರುಷ ಪುನರ್ ಜನ್ಮವೆತ್ತಿ ಬಂದರೂ
ತೀರಿಸಲಾರ ನಿನ್ನ ಋಣ ನನ್ನಾಣೆ
ಇದೆ ನಿನ್ನಲ್ಲಿ ಗೆಲ್ಲುವ ಶಕ್ತಿ
ಮುಂದೆ ನೀ ಅಡಿ ಇಟ್ಟಂದೆಡೆ ಜಯ
ನಾಚಿಕೊಂಡೊಡೆ ಸೋಲು
ಸೋಲನೊಮ್ಮೆ ಅನುಭವಿಸು
ಜಯ ನಿನ್ನದಾಗಿಸಿಕೊ.
- ಹನುಮಂತಪ್ಪ ವೈ. ವಡ್ಡರ್




















