ಸಂಸಾರ ದುಃಖಕ್ಕೆ ರಾಗವೇ ಮೂಲ : ಶರಣಬಸವ ಶಾಸ್ತ್ರಿಗಳ ಅಭಿಪ್ರಾಯ
ಬಾಗಲಕೋಟೆ ಜಿಲ್ಲೆಯ ಮುಧೋಳ : ರಾಗವೇ ಭೋಗಕ್ಕೆ ಕಾರಣ, ಭೋಗವು ಕಾಮಾಧಿಗಳಿಗೆ ಕಾರಣ, ಕಾಮಾಧಿಗಳು ಅನೇಕ ಪಾಪಗಳಿಗೆ ಕಾರಣ. ಆದ್ದರಿಂದ ಸಂಸಾರ ದುಃಖಕ್ಕೆ ಆಸೆಯೇ ಕಾರಣ ಎಂದು ಶ್ರೀಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶ್ರೀಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಕಳೆದ ಒಂದು ತಿಂಗಳಿನಿಂದ ಪುರುಷೋತ್ತಮ ಅಧಿಕ ಮಾಸದ ಅಂಗವಾಗಿ ನಡೆದ ಆಧ್ಯಾತ್ಮಿಕ ಚಿಂತನ ಜಗಜ್ಜನನಿಯ ಪುರಾಣ -ಪಾರಾಯಣದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅಜ್ಞಾನ ರೂಪದ ಬೇರನ್ನು ಕತ್ತರಿಸದ ವಿನಃ ಆಸೆ ನಾಶವಾಗದು ಎಂದರು.
ಜಲಗೇರಿಯ ಶರಣ ಶ್ರೀ ಚಿನ್ನಪ್ಪಗೌಡರು ಮಾತನಾಡಿ ಕಡುಲೋಭದಿಂದ ಅಂಗಕ್ಕೆ ಸುಖವಿಲ್ಲವೆಂದರು. ಕುರುಗೋಡದ ಸಂಗಮೇಶ್ವರ ಶಾಸ್ತ್ರಿಗಳು ಮಾತನಾಡಿ ನಾಮಸ್ಮರಣೆಯಿಂದ ಸುಖದ ಪ್ರಾಪ್ತಿ .ಭವದುಖದ ನಿವೃತ್ತಿ ಸಾಧ್ಯ ಎಂದರು.
ಕಲ್ಹಳ್ಳಿಯ ಮಹಾದೇವ ಮಹಾರಾಜರು ಮಾತನಾಡಿದರು.
ನಾವಲಗಿಯ ಶ್ರೀಶೈಲ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉತ್ತೂರಿನ ನಾರಾಯಣ ಪತ್ತಾರ ಸಂಗಡಿಗರಿಂದ ಜನಪದ ಗಾಯನ, ಕೊಣ್ಣೂರಿನ ಕರೇಸಿದ್ದೇಶ್ವರ ಕಲಾ ತಂಡದವರಿಂದ ತತ್ವ ಪದಗಳು, ಯಲ್ಲಟ್ಟಿಯ ಹಿರಿಯ ಕಲಾವಿದ ಲಕ್ಷ್ಮಣ ಮಾಳಗೊಂಡ ತಂಡದವರಿಂದ ಹಂತಿಹಾಡು, ಲಕ್ಕವ್ವ ಕಪರಟ್ಟಿ ತಂಡದವರಿಂದ ಸಂಪ್ರದಾಯ ಪದಗಳು, ಮುಗಳಖೋಡದ ಶಿವಲಿಂಗವ್ವ ಸಂಗಡಿಗರಿಂದ ಭಕ್ತಿ ಗೀತೆಗಳು, ಕುಳಲಿಯ ಮುತ್ತಪ್ಪ ಬನಾಜಗೋಳ ಸಂಗಡಿಗರಿಂದ ಶಿವಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಬಾದಾಮಿ ತಾಲೂಕಿನ ಜಲಗೇರಿಯ ಚಿನ್ನಪ್ಪಗೌಡ ದಂಪತಿಗಳನ್ನು ಹಾಗೂ ಮುಗಳಖೋಡದ ಶಂಕರಗೌಡ ಪಾಟೀಲ ದಂಪತಿಗಳನ್ನು ಮತ್ತು ಸಂಗಮೇಶ ಶಾಸ್ತ್ರಿಗಳನ್ನು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡರಾದ ಲಕ್ಷ್ಮೇಶ್ವರ ಕುಟುಂಬದ ಹಣಮಂತ ಮತ್ತು ಪದ್ಮಣ್ಣ ದಂಪತಿಗಳು ಹಾಗೂ ರಮೇಶ ಮಹಾಲಿಂಗಪೂರ ಮುಂತಾದವರು ಶಾಲು,ಮಾಲೆ,ವಸ್ತ್ರ ಹಾಗೂ ಸಿದ್ಧಾರೂಢ ಸದ್ಗುರುಗಳ ಭಾವಚಿತ್ರ ನೀಡಿ ಪುಷ್ಪಾರ್ಚನೆ ಮಾಡಿ ಗೌರವಿಸಿದರು.
ವಿಶೇಷವಾಗಿ ಕಂದಾಯ ಇಲಾಖೆಯ ಶ್ರೀ ಶೈಲಗೌಡ ಪಾಟೀಲ ಹಾಗೂ ಸೇರಿದ ಭಕ್ತಸಮೂಹವು ಶರಣಬಸವ ಶಾಸ್ತ್ರಿಗಳನ್ನು ಶಾಲು ಮಾಲೆ ಹಾಕಿ ಕಾಣಿಕೆ ನೀಡಿ ಪುಷ್ಪಾರ್ಚನೆ ಮಾಡಿ ಸತ್ಕರಿಸಿದರು. ಮಹಾಲಿಂಗೇಶ್ವರ ದೇವರ ಅಚ೯ಕರು ಗುರು ಪ್ರಸಾದ್ ಸ್ವಾಮೀಜಿ ಸಮ್ಮುಖತ್ವ ವಹಿಸಿದ್ದರು.
ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ ಸ್ವಾಗತಿಸಿ ವಂದಿಸಿದರು.




















