ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಹೋರಾತ್ರಿ ಧರಣಿ ಸತ್ಯಾಗ್ರಹದ ಎಚ್ಚರಿಕೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ಹಾಗೂ ಹಲವಾರು ಗ್ರಾಮಗಳಲ್ಲಿರುವಲ್ಲಿರುವ ಸರ್ಕಾರಿ ಮೈಸೂರ್ ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಕರ್ನಾಟಕ ಸರ್ಕಾರದ ಉದ್ಯಮದ ಎಂ ಆರ್ ಪಿ ದರದ ಒರಿಜಿನಲ್ ಮದ್ಯ ( ಸಾರಾಯಿ )ಮಾರಾಟ ಮಳಿಗೆಯಾಗಿದ್ದು ಈ ಮಳಿಗೆಗಳಲ್ಲಿ ಕಾರ್ಯ ನಿರ್ವಹಿಸುವ ಹಲವು ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಅವಾಚ್ಯ ಶಬ್ದಗಳೊಂದಿಗೆ ಸಾರ್ವಜನಿಕರು ಹಾಗೂ ದಲಿತ ಸಮಾಜದವರನ್ನು ಬಡಿದು ಹೊಡೆದು ಹಲ್ಲೆ ಮಾಡುವುದಲ್ಲದೆ ಬಾಯಿಗೆ ಬಂದ ಹಾಗೆ ಬೈಯುತ್ತಾರೆ ಮಾನ್ಯ ಸರ್ಕಾರ ನಿಗದಿಪಡಿಸಿದ ದರ ಬಿಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು ಈ ವಿಷಯವಾಗಿ ಮೇಲಾಧಿಕಾರಿಗಳಿಗೆ ವಿಷಯ ತಿಳಿಸುತ್ತೇವೆ ಎಂದು ಹೇಳಿದರೆ ಕಮಿಷನ್ ಮೇಲಾಧಿಕಾರಿಗಳಿಗೆ ಸಹ ಕೊಡುತ್ತೀವಿ ಯಾರು ಏನು ಮಾಡುವರು ನಾವು ಹೆಚ್ಚಿನ ದರಕ್ಕೆ ಕೊಡುತ್ತೇವೆ ಕೇಳುವರು ಯಾರು ಎಂದು ಸಾರ್ವಜನಿಕರಿಗೆ ಧಮ್ಕಿ ಹಾಕುತ್ತಾರೆ ಮತ್ತು ಸಾರ್ವಜನಿಕರ ಹತ್ತಿರ ದುಡ್ಡಿಗಾಗಿ ಐದು ಹತ್ತು ಬಾಟಲಿ ತೆಗೆದುಕೊಂಡು ಮನೆಯಲ್ಲಿ ಇಟ್ಟುಕೊಂಡು ಕುಡಿಯಬೇಕೆಂದರೆ ನಮಗೆ ಸರ್ಕಾರ ಪರ್ಮಿಷನ್ ಕೊಟ್ಟಿಲ್ಲ ಬೇಕಾದರೆ ಒಂದು ಎರಡು ತೆಗೆದುಕೊಳ್ಳಿ ಇಲ್ಲವಾದರೆ ಬಿಡಿ ಎಂದು ಖಡಾ ಖಂಡಿತವಾಗಿ ಹೇಳುತ್ತಾರೆ ವಾರಕ್ಕೊಮ್ಮೆ ತಿಂಗಳಿಗೊಮ್ಮೆ ದುಡ್ಡು ಕಾಣುವ ಇವರ ಗೋಳು ದಣಿದು ಬೇಸರ ಆಗಿ ಸಂಜೆ ಹೊತ್ತಲ್ಲಿ ಎಣ್ಣೆ ಹೊಡೆಯುವವರ ಕತೆ ಯಾವ ಅಧಿಕಾರಿಗಳು ಕೇಳುವರು ? ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ವಸೂಲಿ ಹಚ್ಚಿ ಧಮಕಿ ಕೊಡಿಸುವ ಅಧಿಕಾರಿಗಳು ತಾಲೂಕಿನಲ್ಲಿ ಹೆಚ್ಚಾಗಿದ್ದಾರೆ ಆದ್ದರಿಂದ ಪ್ರತಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಮಗ್ರ ಆಸ್ತಿ ತನಿಖೆ ಆಗಬೇಕು ಸರ್ಕಾರಿ ನೌಕರಿ ಸೇರುವ ಮುನ್ನ ಹೊಂದಿದ ಆಸ್ತಿ ಹಾಗೂ ಈಗ ಗಳಿಸಿರುವ ಆಸ್ತಿಯ ಬಗ್ಗೆ ಮಾನ್ಯ ಮೇಲಾಧಿಕಾರಿಗಳು ಇದರ ಬಗ್ಗೆ ಎಲ್ಲಾ ರೀತಿಯ ಗೊಂದಲಗಳ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ನಮ್ಮ ಸಂಘಟನೆಯಿಂದ ಸಂಬಂಧಪಟ್ಟವರನೆಲ್ಲರನ್ನೂ ಅಮಾನತುಗೊಳಿಸಿ ಆದೇಶ ನೀಡುವವರಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸುತ್ತಾ ಈ ವಿಷಯ ಬಗ್ಗೆ ಮಾನ್ಯ ಮೇಲಾಧಿಕಾರಿಗಳು ತೆಗೆದುಕೊಳ್ಳುವ ಸೂಕ್ತ ಕಾನೂನು ಕ್ರಮದ ಬಗ್ಗೆ ಕಾದು ನೋಡಬೇಕಾಗಿದೆ.

ವರದಿ ಮಂಜು ಎಂ.ಚಿಕ್ಕಣ್ಣವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!