
ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಈಗಾಗಲೇ ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ, ಗಾಂಧೀಜಿ ವೃತ್ತ, ಚೆನ್ನಮ್ಮ ವೃತ್ತ, ಹೇಮರಡ್ಡಿ ಮಲ್ಲಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ದಿ.ಗಡದನ್ನವರ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಶಿವಾಜಿ ವೃತ್ತ, ಭಗೀರಥ ವೃತ್ತ, ಜೇಡರ ದಾಸಿಮಯ್ಯ ವೃತ್ತ, ಸಾಯಿ ವೃತ್ತ, ಜ್ಯೋತಿಬಾಯಿ ಫುಲೆ ಇನ್ನೂ ಅನೇಕ ವೃತ್ತಗಳಿದ್ದು ಇತ್ತೀಚೆಗೆ ವಡ್ಡರ್ ಸಮಾಜದ ಯುವಕರು ಹಿರಿಯರು ಸೇರಿ ನಿರ್ಮಿಸಿದ
ಸಮಾಜದ ಜನರಿಗೆ ಸ್ಫೂರ್ತಿದಾಯಕ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಬಲಗೈ ಬಂಟನಾದ ಶಬ್ದವೇದಿ ಯಲ್ಲಣ್ಣ ವಡ್ಡರ ಇವರ ವೃತ್ತವನ್ನು ಮೊದಲ ಬಾರಿಗೆ ದಿ. 2-3-2026 ರಂದು ನಿರ್ಮಿಸಲಾಗಿತ್ತು ಅದೇ ದಿನ
ಠಾಣಾಧಿಕಾರಿಗಳು ಮತ್ತು ಮುಖ್ಯಾಧಿಕಾರಿಗಳು ಸೇರಿ ತೆರವುಗೊಳಿಸಿದ್ದರು. ನಂತರ ದಿ. 3-3-2026 ರಂದು ಪುರಸಭೆಯ ಆವರಣದ ಮುಂದೆ ಪ್ರತಿಭಟನೆ ನಡೆಸಲಾಯಿತು ಇದಕ್ಕೆ ಸ್ಪಂದಿಸಿದ ಮುಖ್ಯಾಧಿಕಾರಿ ಮರು ಸ್ಥಾಪನೆಗೆ ಅವಕಾಶ ಕಲ್ಪಿಸಿದರು. ತದ ನಂತರ ಶಾಸಕರಾದ ಶ್ರೀ ಸಿದ್ದು ಕ.ಸವದಿ ,ಶಂಕರಗೌಡ ಪಾಟೀಲ,ಶೇಖರ ಅಂಗಡಿ, ವೀರೇಶ ಅಸಂಗಿ,ಗಂಗಾಧರ ಮೇಟಿ, ವಡ್ಡರ್ ಸಮಾಜದ ಹಿರಿಯರು, ಯುವಕರು ಸೇರಿ ಮರುಸ್ಥಾಪನೆ ಮಾಡಿದರು.
ಇತ್ತೀಚಿಗೆ ದಿ. 11-06-2026 ರಂದು ಸಂಜೆ 7 ಗಂಟೆಗೆ ಮತ್ತೆ ವಡ್ಡರ್ ಯಲ್ಲಣ್ಣ ನಾಮಫಲಕವನ್ನು ಪುರಸಭೆಯ ವತಿಯಿಂದ ಯಾವುದೇ ಮುನ್ಸೂಚನೆ ಇಲ್ಲದೆ ತೆರವುಗೊಳಿಸಿದರು.
ತೆರವುಗೊಳಿಸಿದ ಕಾರಣ ತಿಳಿಯಲು ಸಂಬಂಧಪಟ್ಟವರನ್ನು ಸಂಪರ್ಕಿಸಲು ಪ್ರಯತ್ನಿಸಿ ನಂತರ ಅಹೋರಾತ್ರಿ ಧರಣಿಗೆ ಅರ್ಜುನ ಬಂಡಿವಡ್ಡರ್ ಅಧ್ಯಕ್ಷರು ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಸೇವಾ ಸಂಘ ಮಹಾಲಿಂಗಪುರ ಇವರು ಮುಂದಾದರು ಇವರಿಗೆ ಬೆಂಬಲಿಗರಾಗಿ
ತಿಪ್ಪಣ್ಣ ಬಂಡಿವಡ್ಡರ ಕಾರ್ಯದರ್ಶಿಗಳು ,
ಯಂಕಪ್ಪ ಬಂಡಿವಡ್ಡರ, ಚನ್ನಪ್ಪ ಬಂಡಿವಡ್ಡರ,
ರಾಮು ಬಂಡಿವಡ್ಡರ, ರಾಜು ಬಂಡಿವಡ್ಡರ,
ಪ್ರಭು ಬಂಡಿವಡ್ಡರ, ರಾಮು ಪಾತ್ರೋಟ,
ಅಡಿವೆಪ್ಪ ಬಂಡಿವಡ್ಡರ, ಶಶಿಕಾಂತ ಪಾತ್ರೋಟ, ಪ್ರಜ್ವಲ್ ನಾಗನೂರ, ಮಲ್ಲೇಶ ಬಂಡಿವಡ್ಡರ ,ಮಹಾಲಿಂಗ ಬಂಡಿವಡ್ಡರ ಜೊತೆಯಾದರು.
ದಿ 17-6-2026 ರ ಬುಧವಾರದಂದು ಧರಣಿ ನಿರತ ಸ್ಥಳಕ್ಕೆ ಕೋಳಿಹಾಳ ವಡ್ಡರ್ ಹನುಮಂತಪ್ಪ ಸಂಸ್ಥಾಪಕ ರಾಜ್ಯಾಧ್ಯಕ್ಷರು ಸ್ವತಂತ್ರ ಸೇನಾನಿ ಬೆಳವಡಿ ವಡ್ಡರ್ ಯಲ್ಲಣ್ಣ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು,
ಶ್ರೀ ಶ್ರೀ ಕವಿಸ್ವಾಮಿಗಳು, ಶಿವಯೋಗಿ ಸಿದ್ದರಾಮೇಶ್ವರ ಮಠ ವಡ್ಡರ (ಭೋವಿ) ಪಂಚಪೀಠ ಅಧ್ಯಕ್ಷರು ಮದಬಾವಿ ಜಿ.ತಾ.ವಿಜಯಪುರ ,ಶ್ರೀ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಶಿವಯೋಗಿ ಸಿದ್ದರಾಮೇಶ್ವರ ಮಠ ಸುಟ್ಟಟ್ಟಿ ರಾಯಬಾಗ ಜಿ.ಬೆಳಗಾವಿ, ವಿಠ್ಠಲ ಭೀ. ವಡ್ಡರ್ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಭೋವಿ ವಡ್ಡರ್ ಮಹಾಸಭಾ ಇವರುಗಳು ಬೆಂಗಳೂರು ಆಗಮಿಸಿ
ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.




















