ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿನೂತನ ವಿಭಿನ್ನವಾಗಿ ನಡೆದ ಶಾಲಾ ಸಂಸತ್ ಚುನಾವಣೆ

ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ತಾಲೂಕಿನ ಅತಿ ಹೆಚ್ಚು 350 ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಹಿರಿಯ ಉನ್ನತೀಕರಿಸಿದ ದ್ವಿಭಾಷಾ ಶಾಲೆಯಲ್ಲಿ ಈ ವರ್ಷದ ಶಾಲಾ ಸಂಸತ್ ಚುನಾವಣೆಯು ವಿನೂತನ ವಿಭಿನ್ನವಾಗಿ ಹಾಗೂ ಸಾರ್ವತ್ರಿಕ ನೈಜ ಚುನಾವಣೆಯಂತೆ ವಿದ್ಯಾರ್ಥಿಗಳ ಶಾಲಾ ಮಂತ್ರಿಮಂಡಲ ಚುನಾವಣೆ ಮತ್ತು ಮತದಾನ ಇಂದು ನಡೆದದ್ದು ವಿಶೇಷವಾಗಿತ್ತು .
16 ಮಂತ್ರಿಗಳಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಆಹಾರ ಮಂತ್ರಿ, ಸ್ವಚ್ಛತಾ ಮಂತ್ರಿ, ನೀರಾವರಿ ಮಂತ್ರಿ ಮೊದಲಾದ ಮಂತ್ರಿಗಳ ಸ್ಥಾನಕ್ಕೆ32 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತದಾನ ನಡೆಯಲು 4 ಬೂತ್ಗಳನ್ನು ನಿರ್ಮಿಸಲಾಗಿತ್ತು. ಮತದಾನ ಮಾಡುವ ಎಲ್ಲಾ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಗುರುತಿನ ಚೀಟಿಯನ್ನು ಪ್ರದರ್ಶಿಸುವುದರ ಮೂಲಕ ಚುನಾವಣಾ ಕಾರ್ಯದಲ್ಲಿ ಪಾಲ್ಗೊಂಡರು.
ನಂತರ ಅವರಿಗೆ ಎಡಗೈ ತೋಳು ಬೆರಳಿಗೆ ಇಂಕ್ ಹಚ್ಚುವ ಮೂಲಕ ಇವಿ ಪ್ಯಾಡ್ ಮಾದರಿಯಲ್ಲಿ 101 ಗಂಡು ಮತ್ತು 93 ಹೆಣ್ಣು ಒಟ್ಟು 194 ಮಕ್ಕಳು ಶಾಂತವಾಗಿ ಮತದಾನ ಮಾಡಿದ್ದು ಹೆಚ್ಚು
ವಿಶೇಷವಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಬಹಳ ಖುಷಿಯಿಂದ ಚಟುವಟಿಕೆಯಿಂದ ಮತದಾನ ಮಾಡಿದರು. ಪೋಲಿಂಗ್ ಏಜೆಂಟ್ಗಳಾಗಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚುನಾವಣಾ ವೀಕ್ಷಕರಾಗಿ ಸಹ ಶಿಕ್ಷಕರಾದ ಸತ್ಯನಾರಾಯಣ ಪ್ರಸಾದ್ ಪಾಲ್ಗೊಂಡಿದ್ದರು. ಚುನಾವಣಾ ಕರ್ತವ್ಯ ಅಧಿಕಾರಿಗಳಾಗಿ ಶಾಲೆಯ ಬಡ್ತಿ ಮುಖ್ಯ ಶಿಕ್ಷಕರಾದ ಶ್ರೀಮತಿ ಲೀಲಾವತಿ,
ದೈಹಿಕ ಶಿಕ್ಷಕರಾದ ನಾಗೇಶ್, ಸನ್ಮತಿ, ಮಧು, ಶಾಂತಕುಮಾರಿ ಹಾಗೂ ಎಲ್ಲಾ ಸಹ ಶಿಕ್ಷಕರು, ಶಿಕ್ಷಕಿಯರು ಚುನಾವಣಾ ಕರ್ತವ್ಯದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಈ ವಿನೂತನ ಚುನಾವಣಾ ಕಾರ್ಯಕ್ರಮವು ಇಲಾಖೆಯ ಹಾಗೂ ಸಾರ್ವಜನಿಕರ, ಪೋಷಕರ ಗಮನವನ್ನು ಸೆಳೆಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!