ಸತತ ಮೂರು ವರ್ಷಗಳಿಂದ ನರಕಯಾತನೆಯಲಿರುವ ರೋಣ ತಾಲೂಕು ಮುದೇನಗುಡಿ ಗ್ರಾಮದ ದಲಿತ ಎಸ್ ಸಿ ಕಾಲೋನಿಯ ಜನರಿಗೆ ನೆಮ್ಮದಿಯ ತುತ್ತು ಅನ್ನ ತಿನ್ನಲಾರದೆ ದಿನ ನಿತ್ಯ ಸಾವು ಬದುಕಿನ ಹೋರಾಟ ಅನಿವಾರ್ಯತೆ ಆಗಿದೆ ಎನ್ನುವುದು ಇಲ್ಲಿನ ಎಲ್ಲರ ಆಕ್ರೋಶವಾಗಿದೆ.
ಗದಗ ಜಿಲ್ಲೆಯ ರೋಣ ತಾಲೂಕು ಕುರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದೇನಗುಡಿ ಗ್ರಾಮದ ದಲಿತ ಕಾಲೋನಿಯ ಕರುಣಾಜನಿಕ ಸ್ಥಿತಿ ದಿನನಿತ್ಯ ಬದುಕಿಗಾಗಿ ದಲಿತರು ದಾರಿಗಾಗಿ ಪರದಾಡುತ್ತಿರುವ ಸಂಕಷ್ಟಗಳನ್ನು ಯಾರೂ ಕೇಳುತ್ತಿಲ್ಲ.
ಮೂರು ವರ್ಷ ಸುದೀರ್ಘ ಹೋರಾಟ ಆದರೂ ಇವರ ಕಣ್ಣೀರು ಮಾತ್ರ ಅಧಿಕಾರಶಾಹಿಯ ಮಂದಹಾಸದ ಮುಂದೆ ಕರಗಿ ನೀರಾಗುತ್ತಿದೆ ಇದು ಸರಕಾರದ ಜಾಗವಾಗಿದ್ದರೂ ದಲಿತ ಕಾಲೋನಿರವರು ತಪ್ಪದೇ ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಈ ಜಾಗವನ್ನು ಬಳಸಿಕೊಂಡು ನೆಮ್ಮದಿಯಿಂದ ಬದಕುವ ಹಕ್ಕು ಜನರಿಗಿದೆ ಆದರೆ ಕಾಲೋನಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕಿಡಿಗೇಡಿಗಳು ಇವರ ದೈನಂದಿನ ಜೀವನಕ್ಕೆ ನಿರಂತರವಾಗಿ ಕಲ್ಲು ಹಾಕುತ್ತಿದ್ದಾರೆ ನಡೆದಾಡುವ ದಾರಿಗೆ ಅಡ್ಡಿಪಡಿಸುತ್ತಾ ಕೆಲಸಗಳಿಗೆ ಅಡೆತಡೆ ಉಂಟುಮಾಡುವ ಮೂಲಕ ದಲಿತರ ಬದುಕನ್ನೇ ಮೂರಾಬಟ್ಟೆ ಮಾಡಿದ್ದಾರೆ ಇವರ ದೌರ್ಜನ್ಯಕ್ಕೆ ಸಣ್ಣ ಮಕ್ಕಳು ಗರ್ಭಿಣಿಯರು ಹಾಗೂ ವೃದ್ಧರು ನಿತ್ಯ ನಲುಗುತ್ತಿದ್ದಾರೆ.
ನೊಂದ ನಿವಾಸಿಗಳು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಹತ್ತಾರು ಬಾರಿ ಮೌಖಿಕವಾಗಿ, ಲಿಖಿತವಾಗಿ ದೂರನ್ನು ಸಲ್ಲಿಸಿದ್ದಾರೆ ಆದರೆ ಕಸದಬುಟ್ಟಿಗೆ ಎಸೆದಿರುವ ಪಿ ಡಿ ಒ ಜಾಧವ್ ಕಣ್ಣಿದ್ದೂ ಕುರುಡರಂತೆ ಕಿವಿಯಿದ್ದೂ ಕಿವುಡರಂತೆ ವರ್ತಿಸುತ್ತಿದ್ದಾರೆ ದೂರು ನೀಡಲು ಹೋದ ಜನರಿಗೆ ಕೇವಲ ಆಶ್ವಾಸನೆಗಳ ಲೇಪನ ಸವರಿ ಕಳುಹಿಸುತ್ತಾ ಪರೋಕ್ಷವಾಗಿ ಅಡ್ಡಿಪಡಿಸುವ ಕಿಡಿಗೇಡಿಗಳಿಗೆ ಸಾಥ್ ನೀಡುತ್ತಿದ್ದಾರಾ ಎಂಬ ಅನುಮಾನ ದಲಿತರಲ್ಲಿ ಮೂಡಿದೆ.
ತಾಲ್ಲೂಕು ಪಂಚಾಯತ ಇಒ ಚಂದ್ರಶೇಖರ್ ಕನಕೋರ ನಿಷ್ಕ್ರಿಯತೆ ತಾಲೂಕು ಮಟ್ಟದಲ್ಲೂ ನ್ಯಾಯ ಸಿಗಲಿಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲೂ ನ್ಯಾಯ ಸಿಗದಿದ್ದಾಗ ನೊಂದ ನಾಗರಿಕರು ಆಶಾಭಾವನೆಯಿಂದ ಮೆಟ್ಟಿಲೇರಿದ್ದು ರೋಣ ತಾಲೂಕು ಪಂಚಾಯಿತಿಯನ್ನು.
ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಾದ (E O) ಚಂದ್ರಶೇಖರ್ ಕನಕೋರ್ ರವರ ಗಮನಕ್ಕೆ ಇಡೀ ಪ್ರಕರಣವನ್ನು ತರಲಾಯಿತು ದಲಿತ ಕಾಲೋನಿಯ ವೃದ್ಧರು ಮಹಿಳೆಯರು ಸಾಲಾಗಿ ನಿಂತು ತಮಗಾಗುತ್ತಿರುವ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು ನಮಗೆ ಬದುಕಲು ಬಿಡಿ ಸ್ವಾಮಿ ಎಂದು ಗೋಳಾಡಿದರು ಆದರೆ ದುರ್ದೈವ ಸಂಗತಿಯೆಂದರೆ ತಾಲೂಕಿನ ಸವೋರ್ಚ್ಚ ಅಧಿಕಾರಿಯಾದ ಚಂದ್ರಶೇಖರ್ ಕನಕೋರ ರವರು ಸಹ ಈವರೆಗೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಕನಿಷ್ಠ ಸೌಜನ್ಯವನ್ನೂ ತೋರದೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ.
ಅಧಿಕಾರಿಗಳ ನಿಷ್ಕ್ರಿಯತೆ ದಲಿತರ ಆಕ್ರೋಶದ ಜ್ವಾಲೆಯನ್ನು ಮತ್ತಷ್ಟು ಹೆಚ್ಚಿಸಿದೆ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ದಲಿತರು ಸಣ್ಣ ಮಕ್ಕಳು ವೃದ್ಧರನ್ನು ಇಟ್ಟುಕೊಂಡು ನಾವು ದಿನ ಹೇಗೆ ಜೀವನ ಕೈಯಲ್ಲಿ ಹಿಡಿದು ಬದುಕಬೇಕು ಪಿಡಿಓ ಜಾದವ್ ಅವರಿಗಾಗಲೀ ಇ ಒ ಚಂದ್ರಶೇಖರ್ ಕನಕೊರ್ ಅವರಿಗಾಗಲಿ ನಮ್ಮ ಕಷ್ಟ ಕಾಣಿಸುತ್ತಿಲ್ಲವೇ ಇಷ್ಟೊಂದು ನಿರ್ಲಕ್ಷ್ಯವೇಕೆ ನಮ್ಮ ಈ ಮೂರು ವರ್ಷಗಳ ನರಕಯಾತನಗೆ ಕೊನೆ ಹಾಡುವವರು ಯಾರು ಇಲ್ಲದಂತಾಗಿದೆ ಎನ್ನುವುದು ಮುದೇನಗುಡಿ ಗ್ರಾಮದ ನೊಂದ ಮಹಿಳೆಯರ ಆಕೋಶದ ನುಡಿಗಳು.
ಗ್ರಾಮದ ಬೆಲ್ಲಿಕರ ಕಾಲೋನಿಯಲ್ಲಿ ಸದ್ಯ ಜ್ವಾಲಾಮುಖಿಯಂತಹ ವಾತಾವರಣ ನಿರ್ಮಾಣವಾಗಿದೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೋಸಿ ಹೋಗಿರುವ ಗ್ರಾಮಸ್ಥರು ಇನ್ನೇನಿದ್ದರೂ ಬೀದಿಗಿಳಿದು ಉಗ್ರವಾದ ಹೋರಾಟ ಮಾಡೋದೊಂದೇ ದಾರಿ ಎಂದು ನಿರ್ಧರಿಸಿದ್ದಾರೆ.
ಕೂಡಲೇ ಗದಗ ಜಿಲ್ಲಾಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (C E O) ಮಧ್ಯ ಪ್ರವೇಶಿಸಬೇಕಿದೆ ಕರ್ತವ್ಯ ಲೋಪ ಎಸಗಿರುವ ಪಿಡಿಒ ಜಾದವ್ ಹಾಗೂ ಇ ಒ ಚಂದ್ರಶೇಖರ್ ಕನಕೊರ್ ರವರಿಗೆ ಬಿಸಿ ಮುಟ್ಟಿಸಿ ಮುದೇನಗುಡಿ ದಲಿತರಿಗೆ ಮುಕ್ತಿ ನೀಡಬೇಕಾಗಿದೆ ಇಲ್ಲದಿದ್ದರೆ ಆಕ್ರೋಶದ ಕಿಡಿ ಮುಂದೆ ದೊಡ್ಡ ಹೋರಾಟವಾಗಿ ರೂಪಾಂತರಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು
ಮುದೇನಗುಡಿ ಗ್ರಾಮದ ದಲಿತ ಕಾಲೋನಿ ನಿವಾಸಿಗಳಾದ ಮುತ್ತಣ್ಣ ಚಲವಾದಿ, ಮಾರುತಿ ಚಲವಾದಿ, ಅಡಿವೆಪ್ಪ ಚಲವಾದಿ, ಸಣ್ಣಪ್ಪ ಚಲವಾದಿ, ಮುತ್ತವ್ವ ಚಲವಾದಿ, ಸುಧಾ ಚಲವಾದಿ, ಬಸವ್ವ ಚಲವಾದಿ, ಬಸಪ್ಪ ಚಲವಾದಿ, ಇಂದ್ರಗೌಡ ಕ್ಯಾತನಗೌಡರ, ಬಸವರಾಜ ಯನಗಿ ತಮ್ಮ ಅಳಲನ್ನು ತೋಡಿಕೊಂಡು ಆಗ್ರಹಿಸಿದರು.
ವರದಿ ಶರಣಪ್ಪಗೌಡ ಸಕ್ಕರಗೌಡರ




















