ಬಳ್ಳಿಯಲಿ ಅರಳಿ ಉದುರಿದ್ದ ಪಂಚದಳ ಪುಷ್ಪಗಳು
ಪಕ್ಕದಲಿ ತೂಗಿದ್ದ ಹಚ್ಚಹಸಿರ ಗರಿಯ ಕುಡಿಗಳು
ಜೊತೆಯಲಿ ಇಣುಕುತಿರುವ ಕೆಂಬಣ್ಣದ ಹೂಗಳು
ಸೃಜನಶೀಲ ಜೋಡಣೆಯಲಿ ಒಟ್ಟು ಸೇರಿಸಲು
ರೂಪುಗೊಂಡಿತು ಸುಲಲಿತ ಚಿತ್ತಾರದ ಹೊನಲು
ಓದುಗ ಸುಮನಗಳಿಗೊಂದು ಕಾವ್ಯದಾ ಅಮಲು
ಅರುಣೋದಯದಿ ಬರುತಿವೆ ಅಭಿಮಾನಿಗಳಲ್ಲಿಗೆ
ಆಸ್ವಾದಿಸುತ ತೊಡಗಿಸಿಕೊಳ್ಳೋಣ ಮೆಲ್ಲ ಮೆಲ್ಲಗೆ
ಉಂಟಾಗುವುದು ನವನವೋಲ್ಲಾಸ ನಮ್ಮೆಲ್ಲರಿಗೆ
- ಲಲಿತಾ ಕೆ ಆಚಾರ್ ಬೆಂಗಳೂರು




















