ಕೊಪ್ಪಳ : ಜಿಲ್ಲೆಯ ಕುಷ್ಟಗಿಯ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಯಲಬುರ್ಗಾ ಪತಂಜಲಿ ಯೋಗ ಸಮಿತಿಯವರಿಂದ ಶಿಬಿರಾರ್ಥಿಗಳಿಗೆ ಯೋಗಾಸನಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಲಾಯಿತು.
ಈ ವೇಳೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ವೀರೇಶ ಬಂಗಾರ ಶೆಟ್ಟರ, ಗೌರವ ಅಧ್ಯಕ್ಷ ಸಂಗಣ್ಣ ಟೆಂಗಿನಕಾಯಿ,
ಹಾಗೂ ಯೋಗ ತರಬೇತುದಾರ ಆಯುಷ್ಮಾನ ಇಲಾಖೆಯ ಲೋಕೇಶ ಲಮಾಣಿ, ಯೋಗ ಸಮಿತಿಯ ಶರಣಬಸಪ್ಪ ದಾನಕೈ ಇವರನ್ನು ಕುಷ್ಟಗಿಯ ಪತಂಜಲಿ ಸಮಿತಿಯವರು ಸನ್ಮಾನಿಸಿದರು.
ಈ ವೇಳೆ ಪಂಕಜಾ ವಾಲಿಕಾರ, ಗಣೇಶ ಗುಡ್ಡದ,ಲತಾ ಸ್ಥಾವರಮಠ, ಕುಸುಮಕ್ಕ ಶ್ಯಾಟಿ ಶೀವಲೀಲಾ ದಾವಣಗೇರಿ ,ಭಾರತಿ ಶೆಟ್ಟಿ, ಕುಮಾರ ಬಡಿಗೇರ, ಹನುಮಂತಪ್ಪ ಜಾಲಿಮರದ,ಶಿಕ್ಷಕರಾದ ಶರಣಬಸವ ಮಾಟೂರ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ ಸುದ್ದಿ




















