ಕೊಪ್ಪಳ : 79ನೇ ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ಉಪಾಧ್ಯಕ್ಷರಾದ ಶ್ರೀ ಲಕ್ಷ್ಮಣ್ ಆಚಾರ್ ಜೋಶಿ ಮತ್ತು ಪ್ರಾಂಶುಪಾಲರಾದ ಶ್ರೀ ಬಸವರಾಜ್ ಗಂಗಾಡಿ ಶಿಕ್ಷಕರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲರು, 1947 ಆಗಸ್ಟ್ 15ರಂದು ಭಾರತ ಸ್ವತಂತ್ರ ಪಡೆದರೂ ಹೈದರಾಬಾದ್ ಸಂಸ್ಥಾನದ ಅಡಿಯಲ್ಲಿ ಇದ್ದ ನಮ್ಮ ಕಲ್ಯಾಣ ಕರ್ನಾಟಕದ ಪ್ರದೇಶಗಳಿಗೆ ತಕ್ಷಣವೇ ಸ್ವತಂತ್ರ ದೊರೆಯಲಿಲ್ಲ. ನಿಜಾಮರ ಆಡಳಿತದಿಂದ ಮುಕ್ತರಾಗಿ ಅನೇಕ ತ್ಯಾಗ, ಬಲಿದಾನ ಮತ್ತು ಹೋರಾಟದ ಫಲವಾಗಿ 1948ರ ಸೆಪ್ಟಂಬರ್ 17ರಂದು ಹೈದರಾಬಾದ್ ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರ್ಪಡೆ ಆಯಿತು. ಇದು ನಮ್ಮ ಪೂರ್ವಜರ ಹೋರಾಟ ಮತ್ತು ತ್ಯಾಗವನ್ನು ನೆನೆಸಿಕೊಳ್ಳುವ ದಿನ. ನಮ್ಮ ಕಲ್ಯಾಣ ಕರ್ನಾಟಕವನ್ನು ಕೃಷಿ ಮತ್ತು ಅಭಿವೃದ್ಧಿಯಲ್ಲಿ ಮುನ್ನಡೆಸುವ ಸಂಕಲ್ಪ ಮಾಡೋಣ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಬಸವರಾಜ್ ಗಂಗಾಡಿ ಶಿಕ್ಷಕರು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ದಿನಾಚರಣೆ ಕೂಡ ಆಚರಿಸಲಾಯಿತು. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಆಗಮಿಸಿದಂತ ಊರಿನ ಪ್ರಮುಖ ಮುಖಂಡರಾದ ಶ್ರೀ ಲಕ್ಷ್ಮಣ್ ಆಚಾರ್ ಜೋಶಿ, ಕಾಲೇಜಿನ ಉಪಾಧ್ಯಕ್ಷರು, ವಿಠ್ಠಲ ವಾಲ್ಮೀಕಿ, ಗುಂಡಪ್ಪ ವಂಕಲಕುಂಟಿ, ಶ್ರೀ ಕುಂಟೆಪ್ಪ ಬೀರಲದಿನ್ನಿ, ಶ್ರೀ ಯಂಕೋಬ ಗೋಸಲ್, ಸಂಜೀವಪ್ಪ ಭಜಂತ್ರಿ, ಶಿವಾನಂದ ಹೂಗಾರ್ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.




















