ಹಾಡುಗಳೋ
ಅಸಂಬದ್ಧ, ಚಿತ್ರ ವಿಚಿತ್ರ!
ಹುಚ್ಚೆದ್ದು ಕುಣಿಯುವುದೇ
ಭಕ್ತಿಯ ಪರಾಕಾಷ್ಠೆ?
ಡಿಜೆ ಹೈ ಸೌಂಡಿಗೆ
ಎದೆ ನಡುಕ,
ಗರ್ಭಿಣಿ, ಬಾಣಂತಿ, ಮಕ್ಕಳು, ವಯೋವೃದ್ಧರಿಗೆ ಆತಂಕ!
ಸಂಭ್ರಮ ಇರಲಿ, ಭಕ್ತಿ ಮೆರೆಯಲಿ..
ಆದರೆ,
ಭಕ್ತಿ ಹೆಸರಿನ ಚೀರಾಟ
ಇನ್ನೊಬ್ಬರ ಜೀವನಕ್ಕೆ ಕಂಟಕವಾಗದಿರಲಿ
ಅತಿಯಾದ ಶಬ್ದ, ಅತಿರೇಕದ ವರ್ತನೆ
ವಿರುದ್ಧ ಒಕ್ಕೊರಲ ಧ್ವನಿ ಏಳಲಿ
ಇದು ಶಬ್ದ ಮಾಲಿನ್ಯ ವಿರುದ್ಧದ ದನಿ
ಧರ್ಮ ವಿರೋಧವಲ್ಲ
- ವಿಶ್ವನಾಥ ವಿ.ಎಸ್., ಕುಷ್ಟಗಿ




















