
ನೂತನ ಅಧ್ಯಕ್ಷರಾಗಿ ಕೊಡ್ಲಹಳ್ಳಿಯ – ಹುಚ್ಚ ವೀರಯ್ಯನಪಾಳ್ಯದ ಎಚ್. ಸಿ. ಮಂಜುನಾಥ್ ಪದಗ್ರಹಣ.
ಕೊರಟಗೆರೆ: ತಾಲ್ಲೂಕಿನ ಜಗಜ್ಯೋತಿ ಬಸವೇಶ್ವರ ದೇವಾಲಯದಲ್ಲಿ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವೀರಭದ್ರ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯರ ಆಶೀರ್ವಾದದೊಂದಿಗೆ ವೀರಶೈವ ಲಿಂಗಾಯತ ಸೇವಾ ಟ್ರಸ್ಟ್( ರಿ.) ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ, ಪದಗ್ರಹಣ ಸಮಾರಂಭ ನೆರವೇರಿತು.
ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ತಾಲ್ಲೂಕು ಅಧ್ಯಕ್ಷ ಪಿ. ಆರ್. ಪರ್ವತಯ್ಯ ಮಾತನಾಡಿ ಸಂಘಟನೆಯ ಮೂಲಕ ಸಮಾಜದ ಶೈಕ್ಷಣಿಕ ಧಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಸಮುದಾಯದ ಅಭಿವೃದ್ಧಿಗೆ ಸಂಘಟನೆಯ ಪಾತ್ರ ಮಹತ್ವದಾಗಿದೆ ಸಮಾಜದ ಎಲ್ಲರ ಸಹಕಾರ ಮಾರ್ಗದರ್ಶನದೊಂದಿಗೆ ಮುನ್ನಡೆಸಬೇಕು ಯುವಜನರು ವಿದ್ಯಾರ್ಥಿಗಳು ಅಗತ್ಯ ಕುಟುಂಬಗಳಿಗೆ ನೆರವಾಗುವಂತಹ ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸೇವಾ ಟ್ರಸ್ಟ್ ಉದ್ದೇಶ ಈ ಸಲವಾದರೂ ಗ್ರಾಮೀಣ ಭಾಗದ ಯುವಕರಿಗೆ ಸಂಘಟನೆ ಬಗ್ಗೆ ಶ್ರಮಿಸಬೇಕು ಎಂದು ಹೇಳಿದರು.
ಸಂದರ್ಭದಲ್ಲಿ ಅಧ್ಯಕ್ಷರಾಗಿ ಹೆಚ್.ಸಿ. ಮಂಜುನಾಥ್ ಉಪಾಧ್ಯಕ್ಷರುಗಳಾಗಿ ಕೆ.ಎನ್ ಶಿವಕುಮಾರ್. ವಡ್ಡಗೆರೆ ಲಿಂಗರಾಜು. ಕಾರ್ಯದರ್ಶಿಗಳಾಗಿ ಬಸವರಾಜು. ಶಿವಕುಮಾರ್ ಎಂ. ಆರ್. ಖಜಾಂಚಿ ಚಿನ್ನಂಜಯ್ಯ. ಪ್ರಚಾರ ಸಮಿತಿ ಮೆಡಿಕಲ್ ಕುಮಾರ್. ಮಂಜುನಾಥ್ ಮಹೇಶ್ ನಾಗಭೂಷಣ ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ವರದಿ ಪ್ರಸನ್ನ ಕುಮಾರ್




















