
ಕಲೆ ಸಂಸ್ಕೃತಿ ಹಾಗೂ ಕರ ಕುಶಲತೆಯೇ ಕೌಶಲ್ಯವು ಇಡೀ ವಿಶ್ವವೇ ತಿರುಗಿ ನೋಡುವಂತಹ ನೈಪುಣ್ಯತೆ ಇರುವ ವಿಶ್ವಕರ್ಮರು ಕಲೆಯ ಸೃಷ್ಟಿಕರ್ತರು.
ಕೊರಟಗೆರೆ ತಾಲ್ಲಕಿನ ಆಡಳಿತ ಕಚೇರಿಯ ಸಭಾಂಗಣದಲ್ಲಿ ಅತ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಭಗವಾನ್ ವಿಶ್ವಕರ್ಮ ರವರ ಜಯಂತೋತ್ಸವವನ್ನು ಆಚರಿಸಲಾಯಿತು.
ಕಛೇರಿಯ ಸಭಾಂಗಣದಲ್ಲಿ ಮಧುಗಿರಿ ಸಹಾಯಕ ಆಯುಕ್ತರಾದ ಗುಟೂರು ಶಿವಪ್ಪ ಹಾಗೂ ತಹಶೀಲ್ದಾರ್ ಮಂಜುನಾಥ್ ರವರು ಭಾವಚಿತ್ರಕ್ಕೆ ಪುಪ್ಪ ನಮನ ಮಾಡಿ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಟಿಸಿದರು.
ಸ್ನೇಹ, ಕರ್ತವ್ಯ, ಧರ್ಮ ಮತ್ತು ಕೌಶಲ್ಯ ನೆನಪಿಸುವ ಮಹತ್ವದ ಈ ದಿನ ಇಡೀ ವಿಶ್ವವೇ ವಿಶ್ವಕರ್ಮ ಜಯಂತೋತ್ಸವ ಆಚರಣೆ ಹಬ್ಬವಾಗಿದ್ದು , ಎಲ್ಲರೂ ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸಲು ಪ್ರೋತ್ಸಾಹಿಸಿದರಿಂದ ವೃತ್ತಿಜೀವನದಲ್ಲಿ ಅಡೆತಡೆಗಳು ನಿವಾರಣೆಯಾಗಿ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ ಸಿಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಭಗವಾನ್ ವಿಶ್ವಕರ್ಮರನ್ನು ನಿರ್ಮಾಣ, ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ತಾಂತ್ರಿಕ ಕೌಶಲ್ಯದ ದೇವರೆಂದು ಪರಿಗಣಿಸಲಾಗುತ್ತದೆ.
ಯಂತ್ರೋಪಕರಣಗಳಿಗೆ ಸಂಬಂಧಿಸಿದ ಕೆಲಸ ಮಾಡುವವರು ವಿಶ್ವಕರ್ಮ ಪೂಜೆಯಂದು ತಮ್ಮ ಉಪಕರಣಗಳು ಮತ್ತು ಯಂತ್ರಗಳಿಗೆ ಪೂಜೆ ಸಲ್ಲಿಸುತ್ತಾರೆ.
ಈ ದಿನ ವಿಶ್ವಕರ್ಮರನ್ನು ವಿಧಿವಿಧಾನಗಳೊಂದಿಗೆ ಪೂಜಿಸುವುದರಿಂದ ಕೆಲಸದ ಸ್ಥಳದಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿ ಸಿಗುತ್ತದೆ. ನಿಮ್ಮ ವ್ಯವಹಾರದಲ್ಲೂ ಬಹಳ ದಿನಗಳಿಂದ ಅಡೆತಡೆಗಳು ಎದುರಾಗುತ್ತಿದ್ದರೆ ಅಥವಾ ನಿರೀಕ್ಷಿಸಿದ ಫಲಿತಾಂಶ ಸಿಗುತ್ತಿಲ್ಲವೆಂದರೆ, ವಿಶ್ವಕರ್ಮ ಜಯಂತಿಯಂದು ಈ ಕಾರ್ಯಗಳಿಗೆ ಪರಿಹಾರ ದೊರೆಯುತ್ತದೆ .ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.
ಇವನು ವಿಶ್ವಕರ್ಮ ಜಾತಿಯವರ ಅಭಿಯಂತರರ ಕುಶಲಕರ್ಮಿಗಳ ಮತ್ತು ವಾಸ್ತುಶಿಲ್ಪಿಗಳ ಪ್ರಧಾನ ದೇವತೆಯಾಗಿದ್ದಾನೆ. ಇವನು ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿಮತ್ತು ಬ್ರಹ್ಮನ್ ಹಾಗೂ ಮೂಲ ಪುರುಷರು ಇವರ ಕೆತ್ತನೆಯು ದೇವತೆಗಳು ಮಾನವನನ್ನು ಸೂಚಿಸಿದರೆ ಇವರು ದೇವರ ವಿಗ್ರಹಗಳನ್ನು ಸೃಷ್ಟಿಸಿ ಅವುಗಳಿಗೆ ಪೂಜಿಸುವ ಕಾರ್ಯವನ್ನು ಮಾಡುತ್ತಾರೆ. ಇವರು ದೇವರ ವಿಗ್ರಹಗಳ ಸೃಷ್ಟಿಕರ್ತರು ಎಂದು ಸಹಾಯಕ ಆಯುಕ್ತರಾದ ಗುಟೂರು ಶಿವಪ್ಪನವರು ಹೇಳಿದರು.
ಪರಮಾತ್ಮ ವಿಶ್ವಕರ್ಮನನ್ನು ಅಂದರೆ ಈ ಭೂಮಿಯಲ್ಲಿ ಪ್ರಥಮವಾಗಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಜಗತ್ತಿನ ಮೊದಲ ವ್ಯಕ್ತಿ ಭೌವನ ವಿಶ್ವಕರ್ಮ ಋಷಿಗಳು ಅದು ನಾವು ಅವರ ಕುಲದಲ್ಲಿ ಹುಟ್ಟಿರೋದೆ ನಮ್ಮ ಭಾಗ್ಯ ಆಧಾರ ವಿಶ್ವಕರ್ಮ ಸೂಕ್ತ ಎಂದು ಗ್ರಾಮ ದೇವತೆ ಮಾರಮ್ಮ ತಾಯಿಯ ಪ್ರಧಾನ ಅರ್ಚಕರಾದ ಶ್ರೀ ಶ್ರೀಧರಾಚಾರ್ಯ ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ವಿಶ್ವಕರ್ಮ ಜನಾಂಗದ ಶ್ರೀಧರ್ ಆಚಾರ್ಯರು, ಕೃಷ್ಣಮೂರ್ತಿ, ನೀಲಕಂಠಚಾರ್ಯ ನಾಗರಾಜು ಎ.,ಸತೀಶ ಕೆಎನ್, ರಮೇಶ್, ನಾಗೇಂದ್ರ ಕಂದಾಯ ಇಲಾಖೆಯ ಬಸವರಾಜು, ನಕುಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ. ಪ್ರಸನ್ನ ಕುಮಾರ್. ಎಸ್. ಕೊರಟಗೆರೆ




















