ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹೆಚ್ಚು ಇಂಗ್ಲೀಷ್ ವ್ಯಾಮೋಹ ಬೇಡ,ಮಕ್ಕಳಲ್ಲಿ ಕನ್ನಡ ಆಸಕ್ತಿ ಮೂಡಿಸಿ:ತಹಶೀಲ್ದಾರ್ ಶ್ರೀನಿವಾಸ್

ವಡಗೇರಾ:ಕರ್ನಾಟಕ ಏಕೀಕರಣದಲ್ಲಿ ಹಲವಾರು ಮಹಾನ್ ಹೋರಾಟಗಾರರ ಸಂತ ಶರಣರ ಪಾತ್ರ ಪ್ರಮುಖವಾಗಿತ್ತು ಅವರನ್ನು ಪ್ರತಿಯೊಬ್ಬರು ಸ್ಮರಿಸಬೇಕಾಗಿದೆ ಎಂದು ವಡಗೇರಾ ತಾಲೂಕು ದಂಡಾಧಿಕಾರಿಗಳಾದ ಶ್ರೀನಿವಾಸ್ ಚಾಪಲ್ ಹೇಳಿದರು.ವಡಗೇರಾ ತಾಲೂಕು ಆಡಳಿತದ ವತಿಯಿಂದ 68 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು ರಾಜ್ಯೋತ್ಸವವು ನಮಗೆ ಬಹು ವಿಶೇಷವಾಗಿದೆ ಏಕೆಂದರೆ ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ ಇಲ್ಲಿಗೆ 50 ವರ್ಷಗಳು ಕಳೆದವು ಆದ್ದರಿಂದ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ವರ್ಷಪೂರ್ತಿ ರಾಜ್ಯೋತ್ಸವಕ್ಕೆ ಸಂಬಂಧಿಸಿದ ಹಲವಾರು ಕನ್ನಡ ಕುರಿತಾದ ಹಲವು ವಿಧದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಕನ್ನಡವನ್ನು ಮರೆಯುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು ದಯವಿಟ್ಟು ಎಲ್ಲರೂ ತಮ್ಮ ಮನೆಗಳಲಿ ಮಕ್ಕಳಿಗೆ ಕನ್ನಡ ಕುರಿತು ಆಸಕ್ತಿ ಮೂಡಿಸಿ ನಾವು ನೀವೆಲ್ಲರೂ ಕನ್ನಡ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡೋಣ ಎಂದು ಹೇಳಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಶೋಕ್ ಸಾಹುಕಾರ ಕರಣಗಿ ಗ್ರೇಡ್ ಒನ್ ತಹಶೀಲ್ದಾರ ಪ್ರಕಾಶ ಹೊಸಮನಿ.ಕ.ಸಾ.ಪ.ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಕರಿಕಳ್ಳಿ,ಕೊಂಕಲ್ ವಲಯ ಕ.ಸಾ.ಪ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕಾವಲಿ,ಉಪ ತಹಸೀಲ್ದಾರ ಸಂಗಮೇಶ್ ದೇಸಾಯಿ ಹಾಗೂ ರಾಮನಗೌಡ ಸಂಜೀವ ಕುಮಾರ್ ಕಾವಲಿ, ಶ್ರೀರಾಮುಲು,ಓಂ ಪ್ರಕಾಶ್,ಸಾಹೇಬ್ ರೆಡ್ಡಿ, ಬಸವರಾಜ್ ಮಾದ್ವಾರ್,ಶ್ರೀ ಗುರು,ಕುಬೇರ, ನಾಗರಾಜ,ಸಿದ್ದಮ್ಮ,ನಹಿಮ್ ಸಾಬ್ ಪಟ್ಟಣದ ಮುಖ್ಯಸ್ಥರಾದ ಡಾ.ಸುಭಾಷ್ ಕರಣಿಗಿ,ಸಿದ್ದಣ್ಣಗೌಡ ಕಾಡಮ್ಮನೂರ,ಬಾಷುಮಿಯ ನಾಯ್ಕೋಡಿ,ಮರೇಪ್ಪ ಜಡಿ,ಶಿವರಾಜ ಸಾಹುಕಾರ,ಡಾ.ಮರೇಪ್ಪ ನಾಟೇಕಾರ,ಸಂಗು ಗೌಡ ಮಾಲಿ ಪಾಟೀಲ್,ಹಣಮಂತರಾಯ ಜಡಿ,ಉಸ್ಮನ್ ಭಾಷಾ ತಡಿಬಿಡಿ,ಭೀಮಣ್ಣ ಚಿನ್ನಿ,ಫಕೀರ ಹಮ್ಮದ್ ಮರಡಿ,ಬಸವರಾಜ್ ಇಟಗಿ,ಶರಣು ಕುರಿ,ಮಲ್ಲಣ್ಣ ನೀಲಹಳ್ಳಿ,ಬಸನಗೌಡ ಜಡಿ,ಸಾಬಯ್ಯ ಗುತ್ತೇದಾರ, ಚೆನ್ನಯ್ಯಸ್ವಾಮಿ,ಮಲ್ಲೇಶಿ ನಾಟೇಕಾರ.ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ರವಿಕುಮಾರ ನೀಲಳ್ಳಿ ನಿರೂಪಿಸಿ ವಂದಿಸಿದರು.
ವರದಿ-ಶಿವರಾಜ ಸಾಹುಕಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ