ಮೈಸೂರು:ವಿಶ್ವಗುರು ಬಸವ ಸೇವಾ ಟ್ರಸ್ಟ್ ಕಿತ್ತಿಗನೂರು ಕೆ.ಆರ್.ಪುರ ಅಂಚೆ ಬೆಂಗಳೂರು ಇವರು ಆಯೋಜಿಸಿದ್ದ ಬಸವ ಧ್ಯಾನ ಮಂಟಪ ಉದ್ಘಾಟನೆ ಹಾಗೂ ಸುವಣ೯ ಕನಾ೯ಟಕ ರಾಜ್ಯೋತ್ಸವವು ಸ್ವಣ೯ ಶ್ರೀ ಬಡಾವಣೆ 3 ನೇ ಹಂತ ಮೇಡಹಳ್ಳಿಯಲ್ಲಿ ನಡೆದ ಕಾಯ೯ಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ನರಸಿಂಹರಾಜಪುರ ಬಸವಕೇಂದ್ರದ ಶ್ರೀ ಬಸವಯೋಗಿಪ್ರಭುಗಳು ಆಶೀವ೯ಚನ ನೀಡಿದರು.
ವಿಶ್ವಗುರು ಬಸವಣ್ಣನವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಬಸವಣ್ಣನವರು ಪ್ರತಿಯೊಬ್ಬ ಕಾಯಕ ಜೀವಿಗಳ ಉದ್ದಾರಕ್ಕೆ ಅನುಭವ ಮಂಟಪ ಸ್ಥಾಪಿಸಿದರು.ಸ್ತ್ರಿ ಸಮಾನತೆ
ವಯಸ್ಕರ ಶಿಕ್ಷಣ ನೀಡಿದರು ಯಾವ ಕಾಯಕವು ಮೇಲಲ್ಲ ಯಾವುದು ಕೀಳಲ್ಲ ಕಾಯಕವು ಸತ್ಯ ಶುದ್ದವಾಗಿರಬೇಕು ಎಂದು ಹೇಳಿ ಕಾಯಕಕ್ಕೆ ಸಮಾನತೆ ಕೊಟ್ಟರು.ಹೆಣ್ಣು ಹುಟ್ಟಿದರೆ ಹುಣ್ಣು ಎಂದು ಹೇಳುತ್ತಿದ್ದ ಜನರಲ್ಲಿ ಹೆಣ್ಣು ಹೆಣ್ಣಲ್ಲ ಹೆಣ್ಣು ಪ್ರತ್ಯಕ್ಷ ಕಪಿಲ ಸಿದ್ದಯಲ್ಲಿಕಾಜು೯ನ ಎಂದು ಸಿದ್ದರಾಮೇಶ್ವರ ಹೆಣ್ಣಿಗೆ ಮಹತ್ವದ ಸ್ಥಾನ ಕೊಟ್ಟರು.ಭ್ರೂಣಹತ್ಯ ಪ್ರಸ್ತುತ ದಿನದಲ್ಲಿ Sach ಸದ್ದು ಮಾಡುತ್ತಿದೆ ಹನ್ನೇರಡನೇ ಶತಮಾನದಲ್ಲಿ ಬಸವಣ್ಣನವರು ಭ್ರೂಣಹತ್ಯವು ಪಂಚಮಹಾಪಾತಕದಿಂಧಿಕ ನೋಡಾ ಕೂಡಲಸಂಗಮದೇವಾ ಎನ್ನುವುದರ ಮೂಲಕ ಭ್ರೂಣಹತ್ಯ ಮಾಡುವುದು ಮಾಡಿಸಿಕೊಳ್ಳುವುದು ಪ್ರೋತ್ಸಾಹ ನೀಡಿದರೆ ದುಗ೯ತಿಗೆ ಒಳಗಾಗಬೇಕಾಗುತ್ತದೆ ಭ್ರೂಣಹತ್ಯವು ಮಹಾಪರಾಧವಾಗುತ್ತದೆ ಆದ್ದರಿಂದ ಸಕಲ ಜೀವರಾಶಿಗೂ ಲೇಸನ್ನು ಬಯಸುವ ಮನಸ್ಥಿತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು.ಬಸವಾದಿ ಶರಣರ ವಚನಗಳನ್ನು ಓದುವುದು ಮತ್ತು ಅಳವಡಿಸಿಕೊಳ್ಳುವುದರ ಮೂಲಕ ಕನ್ನಡ ಭಾಷೆಯನ್ನು ಹೆಚ್ಚು ಬಳಸುವುದರ ಮೂಲಕ ಬೆಳೆಸೋಣ ಉಳಿಸೋಣ ಎಂದು ಹೇಳಿದರು. ಉದ್ಘಾಟನೆಯನ್ನು ಬೆಂಗಳೂರು ಜಾಗತಿಕ ಲಿಂಗಾಯತ ಮಹಾಸಭೆಯ ಕೋಶಾಧ್ಯಕ್ಷ ರೇಣುಕಯ್ಯ ನೇರವೇರಿಸಿದ್ದರು ಅಧ್ಯಕ್ಷತೆಯನ್ನು ಸಂಗಮೇಶ್ವರಿ ಅಕ್ಕ ವಹಿಸಿದ್ದರು ವೇದಿಕೆಯಲ್ಲಿ ರಮೇಶ್ ಬಾಬುರೆಡ್ಡಿ,ಲಕ್ಷ್ಮಿರಮೇಶ್,ಶ್ರೀ ನಿವಾಸ್,
ಲೋಕ ರೆಡ್ಡಿ ಮತ್ತು ಬಸವ ಭಕ್ತರು ಉಪಸ್ಥಿತರಿದ್ದರು.




















