ಮೈಸೂರು:ಮಹಾಮಹಿಮರು ಕಿತ್ತೂರು ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ನಿ||ಪ್ರ|| ಸ್ವ|| ಶ್ರೀ ಶ್ರೀ ಮಡಿವಾಳೇಶ್ವರ ಮಹಾಸ್ವಾಮಿಗಳವರ ಗದ್ದಿಗೆ ಹಾಗೂ ಶ್ರೀ ಪಟ್ಟದ ಬಸವಲಿಂಗ ಸ್ವಾಮಿಗಳವರ ಗದ್ದಿಗೆ ಕಾರ್ತಿಕ ಮಾಸದ ಸೋಮವಾರ ರಾಮಾನುಜ ರಸ್ತೆಯಲ್ಲಿನ ಶ್ರೀ ಮಡಿವಾಳಸ್ವಾಮಿ ಮಠದಲ್ಲಿ ನಿನ್ನೆ ಷ.ಬ್ರ.ಶ್ರೀ ಶ್ರೀ ಅಡವಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವಿಶೇಷ ಪೂಜೆ,ರುದ್ರಾಭಿಷೇಕ,ಸಹಸ್ರ ಬಿಲ್ವಾರ್ಚನೆ,ಮಹಾ ಮಂಗಳಾರತಿ ಮತ್ತು ದೀಪೋತ್ಸವ ಜರುಗಿತು
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಮೊಹಲ್ಲಾ ನಿವಾಸಿಗಳು ಶ್ರೀ ಮಠದ ಭಕ್ತಾದಿಗಳು ಸೇರಿ ಅದ್ದೂರಿಯಿಂದ ಕಾರ್ತಿಕ ಸೋಮವಾರದ ವಿಶೇಷ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಮಾಜಿ ಸದಸ್ಯರಾದ ಬಿ ವಿ ಮಂಜುನಾಥ್,ವೀರಶೈವ ಸಮಾಜದ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ,ಗೌರಿಶಂಕರ ನಗರದ ಯುವ ಮುಖಂಡರಾದ ಶಿವಕುಮಾರ್ ಹಾಗೂ ಮಠದ ಹಲವಾರು ಭಕ್ತಾದಿಗಳು ಶ್ರೀ ಗುರು ಕೃಪೆಗೆ ಪಾತ್ರರಾದರು.




















