ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮದ ಭೋವಿ ಸಮಾಜದ ಮುಖಂಡರಾದ ಹಣಮಂತ್ ಬೀ ದಂಡಗುಲ್ಕರ್ ಅವರು ಸಮಾಜ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದು ಹರ್ಷವಾಗಿದೆ ಜಿಲ್ಲೆಯ ಭೋವಿ ಸಮಾಜಕ್ಕೆ ಹಾಗೂ ಬಿಳವಾರ ಗ್ರಾಮದ ಸಮಸ್ತ ನಾಗರಿಕರ ಪರವಾಗಿ ಹಾಗೂ ಭೋವಿ ಸಮಾಜದ ಪರವಾಗಿ ಆನಂದ್ ಬೋವಿ ಮಾರಡಗಿ ಅವರು ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ಡಾ.ವಿಷ್ಣು ಸೇನಾ ಸಮಿತಿ ಮತ್ತು ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಪ್ರಯುಕ್ತ ದಿನಾಂಕ 28/12/2023 ರಂದು ಇಜೇರಿ ಗ್ರಾಮದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದೇ ರೀತಿಯಾಗಿ ದಂಡಗುಲಕರ್ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಯಾಗಿದ್ದು ತುಂಬಾ ಹರ್ಷವಾಗಿದೆ ಎಂದು ಆನಂದ್ ಬೋವಿ ಮಾರಡಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















