ಕೊಟ್ಟೂರು:ಪಟ್ಟಣದ ಇಂದು ಕಾಲೇಜ್ ನಲ್ಲಿ ಡಾ.ಪಂಡಿತ್ ಪುಟ್ಟರಾಜ ಕವಿಗವಾಯಿಗಳ ಸೇವಾ ಸಮಿತಿ ವತಿಯಿಂದ 14 ನೇ ವರ್ಷದ ಸ್ವರ ಶ್ರದ್ಧಾಂಜಲಿ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಸುಧಾಕರ ಗೌಡ ಪಟೇಲ್ ಇಂದು ಕಾಲೇಜ್ ಅಡಳಿತ ಅಧಿಕಾರಿ ವೀರಭದ್ರಪ್ಪ ಹೆಚ್ ಎನ್.ಸಿದ್ಧಾರ್ಥರವರು ಉದ್ಘಾಟಿಸಿದರು ಈ ಕಾರ್ಯಕ್ರಮದಲ್ಲಿ ಸುಧಾಕರ ಗೌಡ ಪಟೇಲ್ ರವರು ಮಾತನಾಡಿ ಸಂಗೀತವನ್ನು ಕೇಳುವ ಹವ್ಯಾಸ ನಮ್ಮ ದಿನನಿತ್ಯದ ಸಾಕಷ್ಟು ಒತ್ತಡಗಳನ್ನು ಕಡಿಮೆ ಮಾಡುತ್ತದೆ ಯುವ ಪೀಳಿಗೆ ಸಂಗೀತ ಕೇಳುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಡಾಕ್ಟರ್ ಪಂಡಿತ್ ಪುಟ್ಟರಾಜ ಗವಾಯಿಗಳು ತೀರಿಹೋಗಿದ್ದರೂ ಸಹ ಅವರ ಸೇವೆ ಅವರ ಸಂಗೀತದಿಂದ ಇಂದಿಗೂ ನಮ್ಮ ಜೊತೆ ಇರುವರು ಎನ್ನುವ ಭಾವ ಮೂಡುತ್ತದೆ ಪಂಡಿತರು ಅಂದರಾಗಿದ್ದರು ಸಹ ಸಾಕಷ್ಟು ಜನರಿಗೆ ಸಂಗೀತದ ಮೂಲಕ ಬೆಳಕು ಚೆಲ್ಲಿದ್ದಾರೆ ನೂರಾರು ಹಿಂದಿನ ವರ್ಷದ ಹಾಡುಗಳು ಇಂದಿಗೂ ಜೀವಂತವಾಗಿವೆ ಮನುಷ್ಯನಿಗೆ ಒಂದಲ್ಲ ಒಂದು ದಿನ ಸಾವಿದೆ ಆದರೆ ಸಂಗೀತಕ್ಕೆ ಸಾವಿಲ್ಲವೆಂದು ತಿಳಿಸಿದರು.
ಈ ಕಾರ್ಯ ಕ್ರಮದಲ್ಲಿ ಪುಟ್ಟರಾಜ ಗವಾಯಿಗಳ ನೆನಪು ಮಾಡುತ್ತಾ ಜಗಮಲ್ಲ ಚಲನಚಿತ್ರದ “ಓ ನನ್ನ ಕಣ್ಣೆ” ಖ್ಯಾತಿಯ ಸಿದ್ದಾರ್ಥ್ ಬಿ, ತಬಲವಾದ್ಯಕರಾದ ಶ್ರೀಧರ ಮಾಂಡ್ರೆ, ಹಾರ್ಮೋನಿಯಂ ವಾದ್ಯಕರಾದ ಸತೀಶ್ ಭಟ್ ಹೆಗ್ಗಾರ್,ತಾಳವಾದ್ಯ ಸಂತೋಷ್ ಅಳವಂಡಿ, ಕಿರುಚಿತ್ರ ನಿರ್ದೇಶಕ ವೆಂಕಟೇಶ,ಕಾರ್ತಿಕ್, ಅಪ್ಪಾಜಿ,ವಿನಯ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಉಪನ್ಯಾಸಕರಾದ ಮಹೇಶ್ ನಿರೂಪಿಸಿದರು ವೀರೇಶ್ ಸ್ವಾಗತಿಸಿದರು ತಿಪ್ಪೇಸ್ವಾಮಿ ವಂದಿಸಿದರು ಈ ಸಂದರ್ಭದಲ್ಲಿ ಕಾಲೇಜ್ ಸಿಬ್ಬಂದಿ ವಿಧ್ಯಾರ್ಥಿಗಳು ಹಾಗೂ ಇತರರು ಇದ್ದರು.




















