ಯಾರು ಹೋಗುತ್ತೀರಿ ಸ್ವರ್ಗಕ್ಕೆ ಕೇಳಿದರು ಗುರುಗಳು ಶಿಷ್ಯ ಗಣಕ್ಕೆ,
ಶಿಷ್ಯರೆಲ್ಲರೂ ನೋಡಿಕೊಂಡರು
ತಮ್ಮ ತಮ್ಮ ಮುಖಾರವಿಂದವ
ಎಲ್ಲರಿಗೂ ತಮ್ಮೊಳಗೇ ಅನುಮಾನ,
ನೀ ಏನ್ ಅಂತಿಯೋ ಕನಕ
ಎಂದರು ಗುರು ವರ್ಯರು,
“ನಾ ಹೋದರೆ ಹೋದೇನು”
ಅಂದರು ಕನಕದಾಸರು,
ಅಂದರಾಗ ಉಳಿದ ಶಿಷ್ಯರು
ಕನಕನಿಗೆ ಕೊಬ್ಬು ಅತಿಯಾಯಿತು ಅದಕ್ಕೆ ಹೀಗೆಲ್ಲ ಆಡತಾನೆ,
ಕನಕನನ್ನು ನೋಡಿ ಅಪಹಾಸ್ಯ ಮಾಡಿ, ಮಾತನಾಡಿದರು ದಾಸರನೇಕರು,
ಗುರುಗಳಿಗೆ ಮಾತ್ರ ಗೊತ್ತಾಯ್ತು
“ಭಲೇ ಕನಕ “ಎಂದವರು ಬೆನ್ನು ತಟ್ಟಿದರು,ಅವರೇ ಮಾತಿನ ಮರ್ಮವನ್ನು ಬಹಿರಂಗ ಪಡಿಸಿದರು,
ಶಿಷ್ಯಗಣವೆಲ್ಲ ತಗ್ಗಿಸಿತು ತಲೆಯ
ತಿಳಿದರು ಕನಕನ ಮಾತಿನ ಅಂತರಾರ್ಥ, ಬಿಡಬೇಕು
” ನಾನು “ಎಂಬ ಅಹಂಕಾರ
ಆದೀತು ಆಗ ಭಗವಂತನ ಸಾಕ್ಷಾತ್ಕಾರ,
ಸಾರಿದರು ಕನಕರು
ಲೋಕಕ್ಕೆ ಈ ಮಾತಿನ ಸಾರ,
ಇವರಾದರು ವ್ಯಾಸರ ಶಿಷ್ಯರು
ಇವರೇ ನಮ್ಮ ಕನಕದಾಸರು.
-ಶಿವಪ್ರಸಾದ್ ಹಾದಿಮನಿ.
ಕೊಪ್ಪಳ.




















