ಭದ್ರಾವತಿ:ತಾಲ್ಲೂಕು ಮಾಜಿ ಸೈನಿಕರ ಸಂಘ ಭದ್ರಾವತಿಯ ಜೀವನಾಡಿಯಾಗಿದ್ದ ವಿಐಎಸ್ ಎಲ್ ಹಾಗೂ ಎಂಪಿಎಂ ಕಾರ್ಖಾನೆಯ ಉಳಿವಿಗೆ ಒತ್ತಾಯಿಸುವ ಹಿನ್ನೆಲೆಯಲ್ಲಿ ಹೊಸ ವರುಷದ ಕ್ಯಾಲೆಂಡರ್ ರೂಪಿಸಿದೆ.
ಈ ಕಾರ್ಖಾನೆಯ ಉಳಿವಿನ ಘೋಷಣೆಗಳನ್ನು ಪ್ರತಿ ಮನೆಮನೆಗೆ ತಲುಪಿಸುವ ಹಿನ್ನೆಲೆಯಲ್ಲಿ ಈ ಕ್ಯಾಲೆಂಡರ್ ಅನ್ನು ರೂಪಿಸಿದ್ದು,ವಿಐಎಸ್‌ಎಲ್ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರ ಜೊತೆ ಸೇರಿ ಅವರಿಗೆ ಬೆಂಬಲ ನೀಡುತ್ತಾ ಅನಾವರಣಗೊಳಿಸಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕು ಮಾಜಿ ಸೈನಿಕರ ಸಂಘ ಹಾಗೂ ವಿ ಐ ಎಸ್ ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಪ್ರಮುಖರು ಹಾಜರಿದ್ದರು.




















