ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

75ನೇ ಗಣರಾಜ್ಯೋತ್ಸವ ಪೂರ್ವಸಿದ್ದತಾ ಸಭೆ

ಕೊಟ್ಟೂರು:ದಿನಾಂಕ: 08.01.2023 ರಂದು ಅಮರೇಶ್.ಜಿ.ಕೆ ತಹಶೀಲ್ದಾರರು ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ:26.01.2024 ರಂದು ಆಚರಿಸಲಿರುವ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆಯನ್ನು ತಹಶಿಲ್ದಾರ ಕಛೇರಿ ಮಹಾತ್ಮ ಗಾಂದೀಜಿ ಸಭಾಂಗಣದಲ್ಲಿ ನಡೆಸಲಾಯಿತು.
26.01.2026 ರಂದು ಬೆಳಿಗ್ಗೆ 7.30 ಗಂಟೆಗೆ ಕೊಟ್ಟೂರು ಪಟ್ಟಣದಲ್ಲಿ ಎಲ್ಲಾ ಶಾಲಾ-ಕಾಲೇಜು, ಕಛೇರಿಗಳಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ನಂತರ 8.30 ಗಂಟೆಗೆ ಕ್ರೀಡಾಂಗಣದಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮ ಹಾಗೂ ತಹಶೀಲ್ದಾರರಿಂದ ನೆರವೇರುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸುವಂತೆ ಕೋರಿದರು ವಿವಿಧ ಇಲಾಖೆಗಳಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡುತ್ತಾ,ಯಾವುದೇ ಲೋಪವಾಗದಂತೆ ಕಾರ್ಯಕ್ರಮವನ್ನು ನಡೆಸಲು ಸಹಕಾರ ನಿಡುವಂತೆ ಕೋರಿದರು.
ಧ್ವಜಾರೋಹಣದ ನಂತರ ನಡೆಯುವ ಪಥಸಂಚಲನದಲ್ಲಿ ಸಣ್ಣ ಸಣ್ಣ ಮಕ್ಕಳು ಹಾಗೂ ಹೆಚ್ಚಿನ ತಂಡಗಳು ಭಾಗವಹಿಸದೆ ಅಚ್ಚುಕಟ್ಟಾಗಿ ಮಾರ್ಚ್ಫಾಸ್ಟ್ ಮಾಡಲು ಸೂಕ್ತ ತರಬೇತಿ ನೀಡಿದ ತಂಡಗಳು ಭಾಗವಹಿಸುವಂತೆ ಸೂಚಿಸಿದರು. ಪೊಲೀಸ್,ಗೃಹರಕ್ಷಕ,ರಾಷ್ಟ್ರೀಯ ಸೇವಾದಳದ ಜೊತೆಗೆ ದೊಡ್ಡಮಕ್ಕಳನ್ನೊಳಗೊಂಡ 12 ತಂಡಗಳನ್ನು ಸಿದ್ದಪಡಿಸುವಂತೆ ಕ್ಷೇತ್ರ ಶಿಕ್ಷಣಾದಿಕಾರಿಗಳಿಗೆ ತಿಳಿಸಿದರು.ಕನಿಷ್ಟ 10 ಶಾಲಾ ಮಕ್ಕಳಿಂದ ಅಚ್ಚುಕಟ್ಟಾದ ರಾಷ್ಟ್ರಭಕ್ತಿ, ರಾಷ್ಟ್ರಪೇಮವನ್ನೊಳಗೊಂಡ ಕನ್ನಡ ಗೀತೆಗಳಿಗೆ ನೃತ್ಯ ಸಂಯೋಜನೆ ಮಾಡುವಂತೆ ಸಲಹೆ ನೀಡಿದರು. ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಲ್ಲಿ,ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ,ಸರ್ಕಾರಿ ಕಛೇರಿಗಳಲ್ಲಿ ನಿಯಮಾನುಸಾರ ಗಣರಾಜ್ಯೋತ್ಸವನ್ನು ಕಡ್ಡಾಯವಾಗಿ ಆಚರಿಸಲು ಹಾಗೂ ಸದರಿ ದಿನದಂದು ಮಹಾತ್ಮ ಗಾಂಧೀಜಿ,ಡಾ.ಬಿ.ಆರ್.ಅಂಬೇಡ್ಕರ್ ರವರ ಫೋಟೋಗಳನ್ನು ಇಟ್ಟು ಪೂಜಿಸುವಂತೆ ಹಾಜರಿದ್ದ ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಪಿಐ ವೆಂಕಟ ಸ್ವಾಮಿ,ಇಒ ರವಿಕುಮಾರ್,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ,ಬಿಇಒ ಪದ್ಮನಾಭ ಕರಣಂ,ಕೊಟ್ಟೂರು/ಕೂಡ್ಲಿಗಿ ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆಯ ಶಿರಸ್ತೇದಾರರು,ಕಂದಾಯ ನಿರೀಕ್ಷಕರು,ವಿಷಯ ನಿರ್ವಾಹಕರಾದ ವಿಜಯಕುಮಾರ ಪುಟಾಣಿ ಹಾಜರಿದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ವರದಿ:ವೈ.ಮಹೇಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ