ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಸವ ಮಾಸ ಸಮಿತಿಯ ಪ್ರವಚನದ ಸಮಾರೋಪ ಸಮಾರಂಭ

ಮೈಸೂರು:ನಂಜನಗೂಡು ಫ.ಗು.ಹಳಕಟ್ಟಿ ನಗರದ ವೈ.ಕೆ.ಎಲ್.ಸ್ವಾಮಿ ಲೇಔಟ್ ನಲ್ಲಿ ಬಸವ ಮಾಸ ಸಮಿತಿಯ ಪ್ರವಚನದ ಸಮಾರೋಪ ಸಮಾರಂಭ ನಡೆಯಿತು.


ದಿವ್ಯಸಾನಿಧ್ಯ ವಹಿಸಿದ್ದ ನರಸಿಂರಾಜಪುರ ಬಸವಕೇಂದ್ರದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಸಾನಿಧ್ಯವಹಿಸಿ ಅಶೀವ೯ಚನ ನೀಡಿದರು.ಶರಣರು ಯೋಗಿಗಳು ನೆಲೆಸಿದ ನಾಡು ಪಾವನ ಕ್ಷೇತ್ರವಾಗುತ್ತದೆ.ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ಕನಾ೯ಟಕದ ಬಸವ ಕಲ್ಯಾಣದಲ್ಲಿ ಕೂಡಿ ಸಮಾನತೆ ಉತ್ತಮ ಬದುಕಿನಬಗ್ಗೆ ಚಿಂತನೆ ನಡೆಸಿದ್ದರು ಅನುಭವ ಮಂಟಪದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ದೇವರಲ್ಲಿ ನಾವು ಏನೇನೋ ಬೇಡುತ್ತೇವೆ ಆದರೆ ಶರಣರು ಭಕ್ತಿಯನ್ನು ಬೇಡುತ್ತಾರೆ ಭಕ್ತಿಯಿಲ್ಲದ ಬಡವನಾನಯ್ಯ ಎಂದು ಭಕ್ತಿಯನ್ನು ಬೇಡುತ್ತಾರೆ.
ಮುಪ್ಪಿನ ಷಡಕ್ಷರಿಗಳು ಬಸವಣ್ಣನವರಲ್ಲಿ ಭಕ್ತಿ ಸಿದ್ದರಾಮೇಶ್ವರರಲ್ಲಿ ಶಿವಯೋಗ ಅಕ್ಕಮಹಾದೇವಿಯವರಲ್ಲಿ
ನಿವಾ೯ಣ ಅಜಗಣ್ಣನವರಲ್ಲಿ ಗಂಭಿರತೆಯನ್ನು ಬೇಡುತ್ತಾರೆ ಆದ್ದರಿಂದ ಅವರು ಮೆಟ್ಟಿದ ಧರೆ ಪಾವನವಾದವು ಅಕ್ಕ ಮಹಾದೇವಿಯವರು ತನಗೆ ಬಂದ ಎಲ್ಲಾ ರೀತಿಯ ಕಷ್ಟಗಳನ್ನು ಹೆದರಿಸಿದರು
ಅಲ್ಲಮಪ್ರಭುಗಳು ಕಿನ್ನರ ಬ್ರಹ್ಮಯ್ಯನವರ ಪ್ರಶ್ನೆಗಳಿಗೆ ದಿಟ್ಟ ಉತ್ತರ ಕೊಟ್ಟು ಮಹಿಳೆಯೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟರು.ವಚನ ತವನಿಧಿ ಸವ೯ ಶರಣರಿಂದ ಅಕ್ಕ ಎನಿಸಿಕೊಂಡ ವೈರಾಗ್ಯ ನಿಧಿ ಮಹಾದೇವಿ ಅಕ್ಕನನ್ನು ಮಹಿಳೆಯರು ಮರೆಯಬಾರದು.ಕಷ್ಟ ಸುಖ ಬರುತ್ತಿರುತ್ತವೆ ಹೋಗುತ್ತವೆ ಯಾರೂ ಪ್ರಾಣಹತ್ಯ ಆತ್ಮಹತ್ಯ ಮಾಡಿಕೊಳ್ಳಬಾರದು ಎಂದರು.ವೇದಿಕೆಯಲ್ಲಿ ಮೈಸೂರು ಕುದೇರು ಮಠದ ಗುರುಶಾಂತಸ್ವಾಮೀಜಿ ಮಾತನಾಡಿ ಮಾತಿಗಿಂತ ಕ್ರಿಯೆ ಮುಖ್ಯವೆಂದು ಬಸವಮಾಸ ಸಮಿತಿಯಅಧ್ಯಕ್ಷರಾದ ಪ್ರಭುಸ್ವಾಮಿಯವರ ಶ್ರಮವನ್ನು ಶ್ಲಾಘಿಸಿದರು.
ವಚನ ಗಾಯನ ಚಿತ್ರಕಲೆ
ರಸಪ್ರಶ್ನೆ ಛದ್ಮವೇಷ ಸ್ಪಧಿ೯ಗಳಿಗೆ ಬಹುಮಾನ ವಿತರಿಸಲಾಯಿತು.ಈ ಸಂದಭ೯ದಲ್ಲಿ ವಚನಗಾಯನ ನಡೆಸಿದ ಆನಂದ್ ಗವಾಯಿ ಕುಟುಂಬವನ್ನು ಸನ್ಮಾನಿಸಲಾಯಿತು.ಶಿವಕುಮಾರಪುರದ ಭಜನಾ ತಂಡದವರು ದೊಡ್ಡಹುಂಡಿ ಅಕ್ಕಮಹಾದೇವಿ ಮಹಿಳಾ ಭಜನಾ ಮಂಡಳಿಯವರು ಭಾಗವಹಿಸಿದ್ದರು. ಬಸಹಳ್ಳಿಹುಂಡಿಯಬಸವರಾಜಸ್ವಾಮೀಜಿ ತಗರುಪುರ ಸುರೇಶ್ ಚೆನ್ನಪ್ಪ ನಂದಿನಿ ನಂದೀಶ್ ಬಸವಯೋಗಿಶ್
ಕಡಬೂರು ರಾಜಶೇಖರ್
ಬಸವಮಾಸದ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.ಬಸವೇಶ್ವರರ ಭಾವಚಿತ್ರ ಬಸವೇಶ್ವರ ವೃತ್ತದಿಂದ ಮೆರವಣಿಗೆ ನಡೆಯಿತು ಬಸವಭಕ್ತರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ