ಮುಂಡಗೋಡ:ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುಂಡಗೋಡದ ಸಕಾ೯ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಇಲಾಖೆಗಳ ಸಹಕಾರದಲ್ಲಿ ಯಶಸ್ವಿ ಗಿಡ ನೆಡುವ ಕಾರ್ಯಕ್ರಮ ಜರುಗಿತು.ತಾಲೂಕಾ ಮುನ್ಸಿಪಲ್ ನ್ಯಾಯಾಲಯದ ನ್ಯಾಯಾಧೀಶರು ಕಾರ್ಯಕ್ರಮ ಉದ್ಘಾಟಿಸಿ ಪರಿಸರದ ಮಹತ್ವದ ಕುರಿತು ಮಾತನಾಡಿದರು. ಕಾಲೇಜಿನ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಸಸಿಗಳನ್ನು ದತ್ತು ತೆಗೆದುಕೊಂಡು ಭವಿಷ್ಯದಲ್ಲಿ ಅವುಗಳನ್ನು ಪೋಷಿಸುವ ಭರವಸೆ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಮುಂಡಗೋಡದ ಬೆಳಕು ಸ್ವಯಂ ಸೇವಕರ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರಿಗೂ ಉಪಹಾರ ವಿತರಿಸಿದರು.ಕಾಯ೯ಕ್ರಮ ಸ್ಥಳೀಯವಾಗಿ ಜನ ಮೆಚ್ಚುಗೆ ಗಳಿಸಿತು.ಭವಿಷ್ಯದಲ್ಲಿ ಪರಿಸರ ಸಂರಕ್ಷಣೆ ಮಾಡಬೇಕಾದ ಕುರಿತು ಜಾಗೃತಿ ಮೂಡಿಸಲಾಯಿತು.ಇದೇವೇಳೆ ಪಟ್ಟಣ ಪಂಚಾಯ್ತಿ ಮುಂಡಗೋಡ ಮುಖ್ಯಾಧಿಕಾರಿ ಚಂದ್ರಶೇಖರ್ ಬಿ, ಮುಂಡಗೋಡ ವಲಯ ಅರಣ್ಯ ಸಂರಕ್ಷಣಾಧಿಕಾರಿ ವಾಗೀಶ,ತಾಲೂಕ ಪಂಚಾಯತ ಕಾರ್ಯನಿರ್ವಹಣಾ ಅಧಿಕಾರಿ ಟಿ ವಾಯ್ ದಾಸನಕೊಪ್ಪ,ನಗರ ವಲಯದ ಡಿ ಆರ್ ಎಫ ಒ ಅರುಣಕುಮಾರ್,ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರಸನ್ನ ಸಿಂಗ್ ಹಜಾರೆ, ಮುಂಡಗೋಡ ಪೊಲೀಸ್ ಠಾಣೆಯ ಪಿ ಏಸ್ ಐ ಹನ್ಮಂತ ಕುಡಗಂಚಿ,ಸುಭಾಷ್ ಡೊರಿ ಹಾಗೂ ಇತರೆ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.



















