ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿಡಿಲಿನಿಂದ ಸಾವು ತಪ್ಪಿಸಲು ಸುರಕ್ಷತಾ ಕ್ರಮ ಅನುಸರಿಸಿ:ಅಮರೇಶ್ ಜಿ.ಕೆ

ಕೊಟ್ಟೂರು:05.06.2024 ರಂದು ಸಂಜೆ ಗುಡುಗು-ಸಿಡಿಲು ಸಮೇತ ಸುರಿದ ಮಳೆಯಲ್ಲಿ ಕೊಟ್ಟೂರು ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಬಳಿ ಸಿಡಿಲು ಬಡಿದು ಕುರಿ ಕಾಯುತ್ತಿದ್ದ ಡಿ.ಮದ್ದಾನಕುಮಾರ ತಂದೆ ಕೊಟ್ರೇಶ ಎನ್ನುವ ಯುವಕ ಮೃತಪಟ್ಟಿರುತ್ತಾನೆ.ಮೃತ ಯುವಕ ದೂಪದಹಳ್ಳಿ ಗ್ರಾಮದವರಾಗಿದ್ದು,ಕುರುಬ ಜನಾಂಗ, 16ವರ್ಷ ಕೊಟ್ರೇಶ ಇವರಿಗೆ ಇಬ್ಬರು ಗಂಡುಮಕ್ಕಳಿದ್ದು,ಮೃತ ಮದ್ದಾನಕುಮಾರ ಮೊದಲನೆಯವನಾಗಿರುತ್ತಾನೆ.ತಹಶೀಲ್ದಾರರಾದ ಅಮರೇಶ ಜಿ ಕೆ ಇವರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮರಣೋತ್ತದ ಪರೀಕ್ಷೆಯ ಮುನ್ನ ಪರಿಶೀಲನೆ ಮಾಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಾ, ಸರ್ಕಾರದಿಂದ ಸಿಗುವ ಪರಿಹಾರ ಸೌಲಭ್ಯವನ್ನು ಜರೂರು ಸಿಗುವಂತೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಬರುವ ಮಳೆಯ ಸಮಯದಲ್ಲಿ ಗುಡುಗು-ಸಿಡಿಲ ಅಬ್ಬರ ಜಾಸ್ತಿ ಇದ್ದು, ನೈಸರ್ಗಿಕ ವಿಪತ್ತಿನಲ್ಲಿ ಸಿಡಿಲಿನಿಂದ ಬಹಳಷ್ಟು ಮೃತಪಡುತ್ತಾರೆ.ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ರೈತರು,ಕೂಲಿ ಕಾರ್ಮಿಕರು,ಕುರಿಗಾಹಿಗಳು ಇರುತ್ತಾರೆ.ಈ ಸಿಡಿಲಿನಿಂದ ಸಂಭವಿಸುವ ಆಪತ್ತಿನಿಂದ ಪಾರಾಗಲು ಕೆಲವು ಮುಂಜಾಗ್ರತಾ ಕ್ರಮವನ್ನು ವಹಿಸಬೇಕಿದೆ.
1.ಗುಡುಗು-ಸಿಡಿಲು ಸಮೇತ ಮಳೆ ಬರುವ ಸಮಯದಲ್ಲಿ ಮರದ ಕೆಳಗೆ ಆಶ್ರಯ ಪಡೆಯಲು ನಿಲ್ಲಬಾರದು.
2.ಹಳ್ಳ,ಕೆರೆ,ನದಿ ಮುಂತಾದ ನೀರು ಇರುವ ಸ್ಥಳದ ಸಮೀಪ ನಿಲ್ಲಬಾರದು.ಬಯಲು ಸ್ಥಳದಲ್ಲಿದ್ದರೆ ನಿಂತುಕೊಳ್ಳದೇ ಕುಕ್ಕರುಗಾಲಿನಲ್ಲಿ ಎರಡೂ ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡು ಕುಳಿತುಕೊಳ್ಳಬೇಕು.
3.ವಾಹನಗಳಲ್ಲಿ ಸಂಚರಿಸುತ್ತಿದ್ದಲ್ಲ ಗ್ಲಾಸ್ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು.
4.ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದಲ್ಲಿ ಕೂಡಲೇ ಸುರಕ್ಷಿತ ಸ್ಥಳಕ್ಕೆ ಹೋಗಬೇಕು.
5.ಮನೆಗಳಲ್ಲಿದ್ದಲ್ಲಿ ಕಿಟಕಿ-ಬಾಗಿಲುಗಳನ್ನು ಮುಚ್ಚಬೇಕು.ವಿದ್ಯುತ್ ಸಂಪರ್ಕಗಳನ್ನು ತಕ್ಷಣ ಕಡಿತಗೊಳಿಸಬೇಕು.
ಹೀಗೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಿದಲ್ಲಿ ಗುಡುಗು-ಸಿಡಿಲಿನಿಂದ ಆಗುವ ಸಾವು-ನೋವುಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!