ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ- ಶಿವಮೊಗ್ಗ, ವಿಸ್ತರಣಾ ನಿರ್ದೇಶನಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ, ರೈತರ ತರಬೇತಿ ಸಂಸ್ಥೆ ಮತ್ತು ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ -ಆನಂದಪುರ, ಇವರ ಸಂಯುಕ್ತ ಆಶ್ರಯದಲ್ಲಿ ಇದೇ ತಿಂಗಳ ಜೂನ್ 10 ನೇ (ಸೋಮವಾರ) ತಾರೀಖಿನಂದು “ಬಹುಪಯೋಗಿ ಹಲಸು: ಸಂಸ್ಕರಣೆ ಮತ್ತು ಮೌಲ್ಯವರ್ಧನೆ” ಯ ಬಗ್ಗೆ ಒಂದು ದಿನದ ಉಚಿತ ತರಬೇತಿ ಕಾರ್ಯಕ್ರಮ ವನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಇರುವಕ್ಕಿಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
ಒಂದು ಋತುವಿಗೆ ಅಷ್ಟೇ ಸೀಮಿತವಾದ ಹಲಸಿನ ಹಣ್ಣನ್ನು ಹೇಗೆ ನಾವು ವರ್ಷಪೂರ್ತಿ ಸಂಸ್ಕರಣೆ ಮಾಡಿ ಬಳಸಿಕೊಳ್ಳಬಹುದು ಹಾಗೂ ಅದರ ಖಾದ್ಯಗಳನ್ನು ಎಲ್ಲಾ ಋತುಗಳಲ್ಲಿಯೂ ಸವಿಯಬಹುದೆಂದು ತಿಳಿಸಿಕೊಡಲು ಈ ಕಾರ್ಯಕ್ರಮದ ವಿಶೇಷತೆಯಾಗಿರುವ ಹಲಸಿನ ನೂತನ ಸಂಸ್ಕರಣ ವಿಧಾನಗಳು, ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಹಲಸಿನ ವೈವಿಧ್ಯಮಯ ಖಾದ್ಯಗಳ ತಯಾರಿಕೆ ಹಾಗೂ ಅವುಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಎಫ್ ಎಸ್ ಎಸ್ ಎ ಐ ಪರವಾನಗಿ, ಬ್ರಾಂಡಿಂಗ್ ಮತ್ತು ಲೈಸೆನ್ಸ್ ಸಿಂಗ್ ಗಳ ಬಗ್ಗೆ ಸಿಗಲಿರುವ ಮಾಹಿತಿಯನ್ನು ಪಡೆಯಲು ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸುತ್ತೇವೆ.
ತರಬೇತಿಗಾಗಿ ನೋಂದಾಯಿಸಲು ಸಂಪರ್ಕಿಸಿ ಡಾ. ಸುಧಾರಾಣಿ, ಏನ್. (ಆಹಾರ ತಜ್ಞರು), ಕೃಷಿ ವಿಜ್ಞಾನ ಕೇಂದ್ರ – ಶಿವಮೊಗ್ಗ, ಮೊಬೈಲ್ ಸಂಖ್ಯೆ: 9482024908
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ



















