
ತಪೋಭೂಮಿ ಮಠದ ಆವರಣದಲ್ಲಿ 100×100 ಜಾಗ ಕೊಟ್ಟರೆ ಬಡವರಿಗೆ ಉಚಿತವಾಗಿ ಮದುವೆ ಕಾರ್ಯಗಳು ಮಾಡಿಕೊಳ್ಳುಲು ಸಮುದಾಯ ಭವನ ನಿರ್ಮಿಸಿ ಕೊಡುವುದಾಗಿ ಹೇಳಿದರು.
ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿ ಒಂದು ಮಠವನ್ನ ಕಟ್ಟುವಂತ ಕೆಲಸವನ್ನು ಮಾಡಿಲ್ಲ ಒಂದು ಮನಸ್ಸನ್ನ ಕಟ್ಟುವಂತ ಕೆಲಸ ಮಾಡಿದ್ದಾರೆ ಹನುಮನಾಥ ಸ್ವಾಮೀಜಿ.
ಸುಮಾರು ಒಂದೂವರೆ ವರ್ಷಗಳಲ್ಲಿ ಸಿದ್ದರಬೆಟ್ಟ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿ ಮಠದ ಆವರಣದಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಕೊಡುತ್ತೇನೆ ಎಂದು ಹೇಳಿದ ಕೊರಟಗೆರೆ ತಾಲ್ಲೂಕಿನ ಕೋಳಾಲ ಕ್ಷೇತ್ರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕ್ಷೇತ್ರ ಜನರ ನೆಚ್ಚಿನ ನಾಯಕ ಯಾರಿಗೆ ಎಷ್ಟೇ ಕಷ್ಟದಲ್ಲಿದ್ದರೂ ತಕ್ಷಣವೇ ಅವರ ಕಷ್ಟಗಳಿಗೆ ಸ್ಪಂದಿಸುವ ಆಪತ್ಬಾಂಧವ ಯುವ ಪೀಳಿಗೆಯ ಜನನಾಯಕ ಪಿಎನ್ ಕೃಷ್ಣಮೂರ್ತಿ ರವರು.
ಪಿ ಎನ್ ಕೃಷ್ಣಮೂರ್ತಿ ಮಾತನಾಡಿ ಈ ಒಂದು ಇಪ್ಪತ್ತನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಗದ್ಗುರುಗಳ ಪಾದಗಳಿಗೆ ನಮಿಸುತ್ತಾ ಈ ಪುಣ್ಯಕ್ಷೇತ್ರದಲ್ಲಿ ಇಬ್ಬರು ಸ್ವಾಮೀಜಿಗಳು ಯಾರೇ ಎಲ್ಲಿಗೆ ಕರೆದರೂ ಯಾವ ಜಾತಿ ಭೇದವನ್ನು ಕೇಳದೆ ಇಬ್ಬರು ಒಟ್ಟಿಗೆ ಹೋಗಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಾರೆ.
ವರ್ಷ ವರ್ಷ ಹೆಚ್ಚಿನದಾಗಿ ನವ ವಧುಗಳು ಈ ಕ್ಷೇತ್ರಕ್ಕೆ ಬಂದು ವಿವಾಹವಾಗುತ್ತಿದ್ದಾರೆ. ಅದಕ್ಕೆ ಜಗದ್ಗುರು ರೇಣುಕಾ ಶಿವಾಚಾರ್ಯರ ಆಶೀರ್ವಾದ ಇದೆ. ಇದೇ ಆವರಣದಲ್ಲಿ ಒಂದು ದೊಡ್ಡ ಮಟ್ಟದ ಸಮುದಾಯ ಭವನ ( ಕಲ್ಯಾಣ ಮಂಟಪ) ಕ್ಷೇತ್ರದ ಬಡವರು ಸಾರ್ವಜನಿಕರು ಉಚಿತವಾಗಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ವಿವಾಹ ಮಾಡಿಕೊಳ್ಳುವ ಕುಟುಂಬಗಳಿಗೆ ಅನುಕೂಲವಾಗಲೆಂದು. ನಮ್ಮ ಗುರುಗಳನ್ನು ಕರೆಸಿ ಇದೇ ವರ್ಷ ಶ್ರಾವಣ ಮಾಸದಲ್ಲಿ ಗುದ್ದಲಿ ಪೂಜೆಯನ್ನು ನಡೆಸಿ ಒಂದುವರೆ ವರ್ಷದಲ್ಲಿ ಇಲ್ಲಿ ಒಂದು ಸಮುದಾಯ ಭವನವನ್ನು ನಿರ್ಮಿಸಬೇಕೆಂದು ನನ್ನ ಮನಸ್ಸಿನಲ್ಲಿ ಆಸೆ ಇದೆ ಎಂದು ಹೇಳಿದರು.
ವರದಿ. ಪ್ರಸನ್ನಕುಮಾರ್. ಎಸ್. ಕೊರಟಗೆರೆ




















