ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕ್ಕಳಿಗೆ ಕಲಿಕೆ ಹಂತದಲ್ಲಿ ಕಾನೂನಿನ ಜಾಗೃತಿ ಅರಿವು ಅಗತ್ಯ:ನ್ಯಾಯಾಧೀಶೆ ನಂದಿನಿ

ಹನೂರು:ಶಾಲಾ ಮಕ್ಕಳಿಗೆ ಕಲಿಕೆ ಹಂತದಲ್ಲಿ ಕಾನೂನಿನ ಕಠಿಣತೆ ಮತ್ತು ಜಾಗೃತಿಯ ಅರಿವು ಮೂಡಿಸಿದರೆ ಬಾಲ್ಯ ವಿವಾಹ ತಡೆಗಟ್ಟಲು ಸಹಾಯವಾಗುತ್ತದೆ ಎಂದು ಕೊಳ್ಳೇಗಾಲ ಪ್ರಧಾನ ಸಿವಿಲ್ ನ್ಯಾಯಾಧೀಶೆ ನಂದಿನಿ ತಿಳಿಸಿದರು.

ತಾಲ್ಲೂಕಿನ ಪುದು ರಾಮಾಪುರ ಗ್ರಾಮದಲ್ಲಿ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಾಲ್ಯವಿವಾಹ ತಡೆಗಟ್ಟುವ ಜನ ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಕಾನೂನು ಇಲಾಖೆ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುವುದು ಸಹಜ, ಆದರೆ ರೈತ ಸಂಘಟನೆಗಳು ಇದರ ಬಗ್ಗೆ ಕಾಳಜಿ ವಹಿಸಿ ಜನ ಜಾಗೃತಿ ಮೂಡಿಸುತ್ತಿರುವ ಬಾಲ್ಯ ವಿವಾಹ ತಡೆಗಟ್ಟುವಿಕೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಹಾಗೂ ಶ್ಲಾಘನೀಯ ವಿಷಯ ಆಗಿದೆ ಹೆಣ್ಣು ಮಕ್ಕಳಿಗೆ ಹದಿನೆಂಟು ಹಾಗೂ ಗಂಡಿಗೆ ಇಪ್ಪತ್ತೊಂದು ವರ್ಷ ತುಂಬಿರಬೇಕು ಎಂದು ದೇಶದ ಕಾನೂನಿನಲ್ಲಿದೆ ಆದರೆ ಕಡಿಮೆ ವಯಸ್ಸಿನ ಮಕ್ಕಳಿಗೆ ಮದುವೆ ಮಾಡುವ ಮೂಲಕ ಕಾನೂನಿಗೆ ವಿರುದ್ದ ನಡೆದರೆ ಎರಡು ವರ್ಷ ಸಜೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದಲ್ಲದೆ ಅಂತಹ ವಿವಾಹಗಳು ರದ್ದಾಗುತ್ತದೆ. ಜೊತೆಗೆ ಸಹಕರಿಸಿದವರೂ ಸಹ ಜೈಲು ಸೇರಬೇಕಾಗುತ್ತದೆ.

ಬಾಲ್ಯ ವಿವಾಹ ಪ್ರಕರಣಗಳು ನಿಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಡೆದರೆ ಶಿಶು ಅಭಿವೃದ್ದಿ ಇಲಾಖೆ ಸಿಡಿಪಿಒ ಸೇರಿದಂತೆ ಎನ್ ಜಿ ಒ ಗಳ ಸಹಕಾರ ಪಡೆಯಬಹುದು. ಬಾಲಕಿಯರು ಸಮಾಜದಲ್ಲಿ ತಂದೆ ತಾಯಿ ಹೆಸರನ್ನು ಉಳಿಸಬೇಕು. ಗಂಡು ಮಕ್ಕಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಚಾ.ನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಜಿಲ್ಲಾ ವರಿಷ್ಠಾಧಿಕಾರಿ ಜಿ. ಪಂ. ಸಿಇಓ ನ್ಯಾಯದೀಶೆ ಸೇರಿದಂತೆ ಹಲವಾರು ಜನ ಮಹಿಳೆಯರೆ ಸರಕಾರಿ ಉದ್ಯೋಗವನ್ನು ಪಡೆದಿದ್ದೇವೆ.

ಇತ್ತೀಚಿನ ದಿನಗಳಲ್ಲಿ ನಾವು ದಿನ ನಿತ್ಯ ಸೇವಿಸುವ ಆಹಾರದ ಏರುಪೇರಿನಿಂದ ಕೊಳ್ಳೆಗಾಲ ತಾಲ್ಲೂಕಿನಲ್ಲಿ 2ನೇ ತರಗತಿ ಮಗು ಋತುಮತಿಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ನಾವು ತಿನ್ನುವ ಆಹಾರ ಪದಾರ್ಥಗಳನ್ನು ತಯಾರಿಸಲು ಪ್ರಮಾಣಿಕತೆ ಇರಬೇಕು ಎಂದರು

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ರೈತ ಸಂಘದ ಸಮಾಜ ಮುಖಿ ಕಾರ್ಯಗಳು ಇತರರಿಗೆ ಮಾದರಿಯಾಗಿದ್ದು ಇಂದಿನ ದಿನಗಳಲ್ಲಿ ನಮ್ಮ ಸಂಘಟನೆ ಬಲಿಷ್ಠವಾಗಿದೆ. ಜೊತೆಗೆ ಹತ್ತಾರು ಹೋರಾಟಗಳನ್ನು ಮಾಡಿ ಯಶಸ್ವಿಯಾಗಿದೆ. ಎಂದರು.

ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ
ಮಹೇಶ್ ಪ್ರಭು ಮಾತನಾಡಿ ಹ ಲವು ವರ್ಷಗಳಿಂದ ರೈತರ ಸಮಸ್ಯೆಗಳನ್ನು ಬಗೆಹರಿಸಲು ರೈತ ಸಂಘ ಪ್ರಮುಖ ಪಾತ್ರ ವಹಿಸಿದೆ. ಕಾರ್ಯಕ್ರಮ ಆಯೋಜಿಸಿರುವ ಸ್ಥಳ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿನ ಜನ ಕುಡಿಯುವ ನೀರಿನ ಸರಬರಾಜುಗಾಗಿ ಬೇಡಿಕೆಯನ್ನಿಟ್ಟಿದ್ದಾರೆ. ಇಂತಹ ವಿಷಯದಲ್ಲಿ ರಾಜಕೀಯ ಪಕ್ಷಗಳು ಬೇಕಾಬಿಟ್ಟಿ ನಿರ್ಧಾರ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.

ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ
ಸಾಮಾನ್ಯವಾಗಿ ಬಾಲ್ಯ ವಿವಾಹ ಪ್ರಾರಂಭವಾಗುವುದು ಹಳ್ಳಿಗಳಿಂದಲೇ ಅದಕ್ಕೆ ಕಾರಣ ಅವಿದ್ಯಾವಂತರ ಸಂಖ್ಯೆ ಹೆಚ್ಚಿರುವುದು ಮತ್ತು ಮಾನವ ಕಳ್ಳಸಾಗಣಿಕೆಯಲ್ಲಿ ತೊಡಗುವುದರಿಂದ ಅನ್ಯಾಯಗಳು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಕೖಗೂಡಿ ಈ ಎರಡು ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ ನಡೆದಿರುವುದು ಸಂತೋಷದ ವಿಷಯ. ಇಂತಹ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿರುವ ರೈತ ಸಂಘಟನೆಗೆ ಅನಂತ ಧನ್ಯವಾದಗಳು
ಎಂದರು.

ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ನಂಜಮಣಿ ಮಾತನಾಡಿ ಸರ್ಕಾರ ಮಾಡುವ ಕಾರ್ಯಕ್ರಮ ವನ್ನು ರೈತರು ಮುಂದೆ ನಿಂತ್ತು ಮಾಡುತ್ತಿರುವುದು ಬಹಳ ಸಂತೋಷದ ವಿಷಯ. ಆದರೆ ಮಕ್ಕಳು ಬಾಲ್ಯ ವಿವಾಹ ವಿರೋಧಿಸುವ ನಿಟ್ಟಿನಲ್ಲಿ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು. ಪೋಷಕರು ಮಕ್ಕಳು ಭವಿಷ್ಯದ ಕಡೆಗೆ ಚಿತ್ತ ಇರಬೇಕೆ ಹೊರತು ಮಕ್ಕಳು ಮನೆಯಲ್ಲಿದ್ದರೆ ಎಂದು ಮದುವೆ ಮಾಡಿ ಕಳುಹಿಸುವ ಯೋಚನೆ ಮಾಡಬಾರದು ಬಾಲ್ಯ ವಿವಾಹ ನೋಂದಣಿಗೆ ಕಾನೂನಿನಲ್ಲಿ ಶಿಕ್ಷೆ ಇದೆ. ಅರ್ಥಿಕ ಪರಿಸ್ಥಿತಿ ವಧು ದಕ್ಷಿಣೆ
ಆಸ್ತಿ ವಿಭಜನೆ ಉದ್ದೇಶದಿಂದ ಬಾಲ್ಯ ವಿವಾಹ ಆಗುತ್ತದೆ. ಇದಲ್ಲದೆ ಶಾಲಾ ಕಾಲೇಜುಗಳಲ್ಲಿ ಪ್ರೀತಿ ಪ್ರೇಮದ ಬಲೆಗೆ ಬಿದ್ದು ಬೇಗನೆ ಮದುವೆ ಆಗುವುದರಿಂದ ಹುಟ್ಟುವ ಮಕ್ಕಳು ಅಪೌಷ್ಟಿಕತೆಯಿಂದ ಕೂಡಿರುತ್ತವೆ. ಇಂತಹ ಕುಟುಂಬಗಳಿಗೆ ಕಾನೂನಿನ ಅರಿವು ಇಲ್ಲದೆ ಮಕ್ಕಳ ಜೀವನ ಹಾಳು ಮಾಡಬಾರದು.
ಕೌಟುಂಬಿಕ ಹಿನ್ನೆಲೆಯಲ್ಲಿ ಬರುವಾಗ ದೌರ್ಜನ್ಯ ಆಗಬಾರದು ಬಾಲ್ಯ ವಿವಾಹ ಪ್ರಕರಣ ನಡೆದರೆ 1098 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.ರೈತರ ಈ ಕಾರ್ಯಕ್ರಮ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಶ್ಲಾಘನೀಯ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ಮಾತನಾಡಿ ಪ್ರತಿಯೊಬ್ಬ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಕಾನೂನಿನ ಅರಿವು ಕಾರ್ಯ ಮೂಡಿಸಬೇಕು. ಎಲ್ಲಾ ತಂದೆಯು ತಮಗೆ ಇರುವ ಜವಾಬ್ದಾರಿ ಹೊತ್ತಿದ್ದ ಸಮಯ ಕಡಿತಗೊಳಿಸಲು ಅನುವು ಮಾಡಲು ಯೋಚಿಸುತ್ತಾರೆ. ಹಳ್ಳಿಗಳಲ್ಲಿ ಬಾಲ್ಯವಿವಾಹ ತಡೆಯಲು ಸಹಕರಿಸಿದ ಅಂಗನವಾಡಿ ಸಹಯಕಿಯರಿಗೆ ತೊಂದರೆಯಾಗುತ್ತಿತ್ತು. ಈಗ
ರೈತ ಸಂಘದ ಈ ಜನಪರ ಕಾರ್ಯಕ್ರಮದಿಂದ ಅವರಿಗೆ ಬಲ ಸಿಕ್ಕಿದಂತೆ ಆಗಿದೆ. ರೈತ ಸಂಘಟನೆ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ವಕೀಲರುಗಳಾದ ರವಿ ಮಹೇಶ್ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶೈಲೇಂದ್ರ, ಉಪಾಧ್ಯಕ್ಷ ಗೌಡೇಗೌಡ‌, ತಾಲ್ಲೂಕು ಅಧ್ಯಕ್ಷ ಅಮ್ಜದ್ ಖಾನ್ ,ಕಾರ್ಯದರ್ಶಿ ಕಾಂಚಳ್ಳಿ ಬಸವರಾಜು, ಮುಖಂಡರಾದ ವೇಲುಸ್ವಾಮಿ,ರಾಜಮ್ಮಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!