ಕೊಪ್ಪಳ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರ ಕಚೇರಿ ಬೆಂಗಳೂರ ಮುಂಭಾಗದ ಆವರಣದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆಯು,ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಶರಣಬಸಪ್ಪ ಕೆ.ದಾನಕೈ ಅವರನ್ನು ಎಸ್ಡಿಎಂಸಿ ರಾಜ್ಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಮೈನುದ್ದೀನ ಕುಟ್ಟಿ ಅವರು ಅ.೬ ರಂದು ಗುರುತಿನ ಕಾರ್ಡ್ ವಿತರಿಸಿದರು.ಈ ವೇಳೆ ಪ್ರಧಾನ ಕಾರ್ಯದರ್ಶಿ ಸಾಜಸ್ ಕೆ.ಜಿ, ಖಜಾಂಚಿ ಉಸ್ಮಾನ್ ನೆಕ್ಕಿಲು ಹಾಗೂ ಸಮಿತಿಯ ನಿರ್ದೇಶಕರಾದ ಆಂಜನೇಯ ಶಿವಕ್ಕಳರ,ಬಸವರಾಜ ಮಲೆಬೆನ್ನು, ಅಶೋಕ ಬಿ, ಆಶಾ ರಾಮನಗರ ಸೇರಿದಂತೆ ರಾಜ್ಯ ಹಾಗು ವಿವಿಧ ಜಿಲ್ಲೆಯ ನಿರ್ದೇಶಕರು ಭಾಗವಹಿಸಿದ್ದರು.




















