ಕೊಪ್ಪಳ/ಕಾರಟಗಿ: ಕಳೆದ ನಾಲ್ಕು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪುರಸಭೆ ಸದಸ್ಯ ರಾಮಣ್ಣನವರ ಮನೆಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕಾರಟಗಿ ಪಟ್ಟಣದ 21ನೇ ವಾರ್ಡ್ ನ (ಅಬ್ದುಲ್ ನಜೀರ್ ಸಾಬ್ ಕಾಲೋನಿ)ಮೃತ ಪುರಸಭೆ ಕಾಂಗ್ರೆಸ್ ಸದಸ್ಯ ರಾಮಣ್ಣ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ಸಚಿವರು ರಾಮಣ್ಣರ ಪತ್ನಿ ಗಾಳಿಯಮ್ಮ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿ, ನಿಮ್ಮೊಂದಿಗೆ ನಾವಿದ್ದೇವೆ ಎಂದರು.
ಈ ವೇಳೆ ರಾಮಣ್ಣ ಅವರ ಸಹೋದರ ಎಲ್ಲಪ್ಪ, ಅಂದು ಮಧ್ಯರಾತ್ರಿ ಕಳ್ಳರ ಕಳ್ಳರ ಗ್ಯಾಂಗ್ ಹಂದಿ ಕಳವು ಮಾಡಿಕೊಂಡು ಪರಾರಿಯಾಗುತ್ತಿತ್ತು. ಹಂದಿಗಳ ಚೀರಾಟದ ಶಬ್ದ ಕೇಳಿ ಹೊರಬಂದ ಸಹೋದರ ಕಳ್ಳರ ಗ್ಯಾಂಗ್ ನ್ನು ಬೆನ್ನತ್ತಿದ್ದಾರೆ.
ಈ ವೇಳೆ ಕಳ್ಳರು ರಾಮಣ್ಣನ ಮೇಲೆ ಹಲ್ಲೆ ಮಾಡಿದ ಪರಿಣಾಮ ರಾಮಣ್ಣ ಮೃತಪಟ್ಟಿದ್ದಾರೆ ಎಂದು ಸಚಿವರ ಬಳಿ ಅಳಲು ತೋಡಿಕೊಂಡರು.
ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಂದ ಮಾಹಿತಿ ಪಡೆದಿದ್ದು, ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಮರುಣೋತರ ಪರೀಕ್ಷೆಯ ವರದಿಯಲ್ಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದರು.



















