ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ : 22.02.2025 ರಂದು ಜರುಗಲಿರುವ ಶ್ರೀ ಗುರು ಬಸವೇಶ್ವರ ಸ್ವಾಮಿ ರಥೋತ್ಸವ ಮತ್ತು ಜಾತ್ರಾ ಪ್ರಯುಕ್ತ ಪಟ್ಟಣ ಪಂಚಾಯಿತಿ ಮಖ್ಯಾಧಿಕಾರಿಗಳು ಎ.ನಸರುಲ್ಲಾ, ಅಧ್ಯಕ್ಷರಾದ ಬಿ, ರೇಖಾ ರಮೇಶ್ ಇವರ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ತೇರು ಪ್ರದೇಶದಲ್ಲಿ ವಿಶೇಷ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವ ಕುರಿತು ಪರಿಶೀಲನೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಜಿ.ಸಿದ್ದಯ್ಯ, ಸದಸ್ಯರಾದ ಷಷಿ, ಡಿ.ಎಸ್.ಎಸ್ ಮುಖಂಡರಾದ ಬಿ ಮರಿಸ್ವಾಮಿ, ರಾಜೀವ್ ಉಪಸ್ಥಿತರಿದ್ದರು.




















