ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಜ್ರಬಂಡಿ ಗ್ರಾಮದಲ್ಲಿ ಮಕ್ಕಳ ಬಾಲ ಮೇಳ ಕಾರ್ಯಕ್ರಮ

ಕೊಪ್ಪಳ/ಯಲಬುರ್ಗಾ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಡಿಯಲ್ಲಿ
ಅಂಗನವಾಡಿ ಮಕ್ಕಳ ”ಬಾಲ ಮೇಳ” ಕಾರ್ಯಕ್ರಮವನ್ನು ವಾಲ್ಮೀಕಿ ಸಮುದಾಯ ಭವನ, ಯಲಬುರ್ಗಾ ತಾಲೂಕು ವಜ್ರಬಂಡಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಶ್ರೀಮತಿ ಚಂದವ್ವ ರಾಮಣ್ಣ ರಾಠೋಡ,
ಅಧ್ಯಕ್ಷರು ಗ್ರಾ.ಪಂ.ವಜ್ರಬಂಡಿ, ತಾ.ಯಲಬರ್ಗಾ ವಹಿಸಿ, ಕಾರ್ಯಕ್ರಮ ಉದ್ಘಾಟನೆಯನ್ನು
ಶ್ರೀ ಪಿ.ವೈ. ಶೆಟ್ಟೆಪ್ಪನವರ್ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ,
ಶ್ರೀಮತಿ ದ್ರಾಕ್ಷಾಯಿಣಿ ಬೈರೇಗೌಡ ಬನ್ನಿಕೊಪ್ಪ. ಉಪಾಧ್ಯಕ್ಷರು, ಗ್ರಾ.ಪಂ. ವಜ್ರಬಂಡಿ,
ಶ್ರೀ ಗಂಗಪ್ಪ, ಜಿಲ್ಲಾ ನಿರೂಪಣಾಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ.
ಶ್ರೀಮತಿ ಅನ್ನಪೂರ್ಣ ಕುಬಕಡ್ಡಿ ಮಹಿಳಾ ಮಕ್ಕಳ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಕೊಪ್ಪಳ.
ಶ್ರೀ ಬೆಟದಪ್ಪ ಮಾಳೆಕೊಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಯಲಬುರ್ಗಾ ಯೋಜನೆ.
ಶ್ರೀ ಸೋಮಶೇಖರ ಗೌಡ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಣ ಇಲಾಖೆ, ತಾ,ಯಲಬುರ್ಗಾ.
ಶ್ರೀಹನುಮಂತರಾಯ ಯಂಕಂಚಿ, ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ, ವಜ್ರಬಂಡಿ,ತಾ,ಯಲಬುರ್ಗಾ.
ಶ್ರೀಲಕ್ಷ್ಮಣ ಕರ್ಲೆ, ವೈದ್ಯಾಧಿಕಾರಿಗಳು, ಪಿ.ಹೆಚ್.ಸಿ,ವಜ್ರಬಂಡಿ, ತಾ,ಯಲಬುರ್ಗಾ. ಕಾರ್ಯಕ್ರಮವನ್ನು ಎಲ್ಲ ಗಣ್ಯ ಮಾನ್ಯರು ಸೇರಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಶ್ರೀಅಶೋಕ್, ಜಿಲ್ಲಾ ವ್ಯವಸ್ಥಾಪಕರು, ಕಲಿಕೆ ಟಾಟಾ ಟ್ರಸ್ಟ್ ನುಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಗಂಗಮ್ಮ ಮುಶಿಗೇರಿ, ಮೇಲ್ವಿಚಾರಕಿ, ವಜ್ರಬಂಡಿ ವಲಯ ನಡೆಸಿಕೊಟ್ಟರು. ಇನ್ನು ಕಾರ್ಯಕ್ರಮದ ಕುರಿತು ಶ್ರೀ ಪಿ.ವೈ. ಶೆಟ್ಟೆಪ್ಪನವರ್ ಉಪ ನಿರ್ದೇಶಕರು ಮಾತನಾಡಿ ಮಕ್ಕಳ ಪ್ರತಿಭೆಗಳನ್ನು ಹೊರ ತರಲು ಇಂತಹ ಸುವರ್ಣ ಅವಕಾಶವನ್ನು ಗ್ರಾಮ ಮಟ್ಟದ ಬಾಲ ಮೇಳ ಕಾರ್ಯಕ್ರಮದಲ್ಲಿ ದೊರಕಿರುವುದು ತುಂಬಾ ಸಂತೋಷದ ವಿಷಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮವಾಗಿ ಬೆಳೆಯಲು
ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ವಂದನಾರ್ಪಣೆಯನ್ನು
ಶ್ರೀ ಸಿದ್ದಪ್ಪ ಕುರಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ವಜ್ರಬಂಡಿ ವಲಯದ ಅಂಗನವಾಡಿ ಶಿಕ್ಷಕಿಯರು, ಗ್ರಾಮದ ಎಲ್ಲಾ ಅಂಗನವಾಡಿ ಕೇಂದ್ರಗಳ ಬಾಲವಿಕಾಸ ಸಮಿತಿ ಸದಸ್ಯರು, ಅಂಗನವಾಡಿ ಸಹಾಯಕಿಯರು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಮೌನೇಶ ಎಚ್ ನಾಯಕ, ಕೊಪ್ಪಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!