ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಾತಿ ಪದ್ದತಿ-ಅಸ್ಪೃಶ್ಯತೆ ವಿರುದ್ದ ಹೋರಾಡಿದ ಚೇತನ ಮಾಚಿದೇವ : ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ : ಮಡಿವಾಳ ಮಾಚಿದೇವ 12 ನೇ ಶತಮಾನದಲ್ಲಿ ಜಾತಿ ಪದ್ದತಿಯ ವಿರುದ್ಧ ಹೋರಾಡಿದರು. ಆ ಮೂಲಕ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಆದರ್ಶದ ಮಾರ್ಗವನ್ನು ಹಾಕಿಕೊಟ್ಟವರು. ಪ್ರಸ್ತುತ ನಾವೆಲ್ಲರೂ ಅವರ ಜೀವನಾದರ್ಶಗಳನ್ನು ಅನುಸರಿಸಬೇಕು ಎಂದು ಶಾಸಕರಾದ ಎಸ್. ಎನ್. ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮಡಿವಾಳ ಸಮಾಜ ಸಂಘ ಸಹಯೋಗದೊಂದಿಗೆ ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಮಡಿವಾಳ ಮಾಚಿದೇವರು ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸಿಮೀತವಾಗದೆ ಇಡೀ ಮನುಕುಲದ ಒಳಿತಿಗಾಗಿ ದುಡಿದವರು. ಈ ಸಮಾಜಕ್ಕೆ ಯಾವುದು ಬೇಕು, ಬೇಡ ಎಂಬ ಚಿಂತನೆಯಲ್ಲಿ ತೊಡಗಿಕೊಂಡವರು. ಇದಲ್ಲದೆ ಸದಾ ಶೋಷಿತರು, ಅಸ್ಪೃಶ್ಯರು, ಶಿಕ್ಷಣದಿಂದ ವಂಚಿತರಾದವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಮಾಚಿದೇವನು ಕೂಡ ಶಿಕ್ಷಣದಿಂದ ವಂಚಿತರಾದ ಸಮುದಾಯದಿಂದ ಬಂದವರು. ಆದರೆ ಅವರಿಗೆ ಮಲ್ಲಿಕಾರ್ಜುನ ಸ್ವಾಮಿ ಎಂಬ ಗುರು ಶಿಕ್ಷಣ ನೀಡಿದರು. ಅದರಿಂದ ಅವರಿಗೆ 3 ಲಕ್ಷಕ್ಕೂ ಹೆಚ್ಚು ವಚನಗಳನ್ನು ರಚಿಸಲು ಸಾಧ್ಯವಾಯಿತು. ಮಲ್ಲಿಕಾರ್ಜುನ ಸ್ವಾಮಿ ಇಲ್ಲದಿದ್ದರೆ ಮಾಚಿದೇವನಂತಹ ದಾರ್ಶನಿಕನನ್ನು ಈ ಸಮಾಜ ನೋಡುತ್ತಿರಲಿಲ್ಲ. ಗುರುಪರಂಪರೆ ಇಲ್ಲದೆ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮಾಚಿದೇವನು ವಚನಗಳ ಮೂಲಕ ಪ್ರಕಾಶಮಾನವಾಗಿ ಬೆಳೆದರು. ದೇಹದ ಶುಚಿತ್ವ ಬಗ್ಗೆ ಮಾತ್ರವಲ್ಲದೆ ಮನಸ್ಸಿನ ಶುಚಿತ್ವದ ಬಗ್ಗೆಯೂ ಅರಿವು ಮೂಡಿಸಿದರು. ಮಡಿ ಮೈಲಿಗೆಯ ತಾರತಮ್ಯದ ವಿರುದ್ಧ ಸಂಘಟಿಸಿದರು. ಕಾಯಕ, ಕಾರ್ಯ ಹೀಗೇ ಹತ್ತು ಹಲವಾರು ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ. ಇವೆಲ್ಲವೂ ಮಾತಿಗೆ ಸೀಮಿತವಾಗದೇ ಅದನ್ನು ಅನುಸರಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು ಮಾತನಾಡಿ, ಯುವಕರಿಗೆ ಇಂತಹ ಮಹನೀಯರ ಪರಿಚಯವಾಗುವುದು ಇತ್ತೀಚಿನ ವಿದ್ಯಾಮಾನಗಳಲ್ಲಿ ಅಗತ್ಯವಾಗಿದೆ. ಯುವಜನತೆಯನ್ನು ಕೂಡ ಕಾರ್ಯಕ್ರಮದಲ್ಲಿ ಒಳಗೊಳ್ಳುವಂತೆ ಮಾಡಬೇಕು. ಆ ಮೂಲಕ ವಚನಕಾರರ ಸಂದೇಶವು ಇಡೀ ಸಮಾಜಕ್ಕೆ ತಲುಪಬೇಕು ಎಂದರು.
ಮಾಚಿದೇವ ಅಸ್ಪೃಶ್ಯತೆ, ತಾರತಮ್ಯದಂತಹ ಸಾಮಾಜಿಕ ಪಿಡುಗಗಳ ವಿರುದ್ಧ ಕ್ರಾಂತಿ ಮಾಡುತ್ತಿದ್ದರು. ಸಮಾಜದ ಪ್ರಾವಿತ್ರ್ಯತೆ ಕಾಪಾಡುವಲ್ಲಿ ಶ್ರಮಿಸಿದ್ದಾರೆ. ಕಾಯಕವೇ ಕೈಲಾಸ ತತ್ವದಲ್ಲಿ ನಂಬಿಕೆ ಇಟ್ಟಿಕೊಂಡಿದ್ದ ಇವರು ದೇಹ ಮಾತ್ರವಲ್ಲ ಮನಸ್ಸು ಕೂಡಾ ಶುದ್ದವಾಗಿರಬೇಕೆಂದು ಸಾರುತ್ತಿದ್ದರು ಎಂದರು.

ಸೂಡಾ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ ಮಾತನಾಡಿ, ಮಾಚಿದೇವ ಮನುಷ್ಯರಲ್ಲ. ಅವರು ದೈವ ಸಂಭೂತರು. 12 ನೇ ಶತಮಾನದಲ್ಲಿ ಸಮಾಜದಲ್ಲಿನ ಅಂಕುಡೊಂಕು ತಿದ್ದಲು ಬಂದವರು. ಆ ಮೂಲಕ ವಚನ ಕ್ರಾಂತಿ ಆರಂಭಿಸಿ ಶೋಷಿತ ವರ್ಗಗಳ ಸುಧಾರಣೆ ಮಾಡಿದರು. ಶರಣರೆಲ್ಲರೂ ಒಂದುಗೂಡಿಕೊಂಡು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದರು. ಈಗ ಅಂತಹ ಕಾರ್ಯವನ್ನು ಅಂಬೇಡ್ಕರ್ ಮಾಡಿದ್ದಾರೆ, ಶರಣರ ಮಾರ್ಗವನ್ನು ಅನುಸರಿಸಿದ ಅಂಬೇಡ್ಕರ್ ಎಲ್ಲರಿಗೂ ಸ್ವಾತಂತ್ರ್ಯ, ಸಮಾನವಾದ ಹಕ್ಕನನ್ನು ನೀಡಲು ಸಂವಿಧಾನವನ್ನು ರಚಿಸಿದರು. ಸಂಪತ್ತು ಎಲ್ಲಾ ವರ್ಗದವರಿಗೆ ಸಮಾನವಾಗಿ ಹಂಚಿಕೆ ಆಗಬೇಕೆಂಬ ಆಶಯ ಅವರದಾಗಿತ್ತು ಎಂದರು.
ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ಕೆ.ಬಿ.ಮಂಜಪ್ಪ ಉಪನ್ಯಾಸ ನೀಡಿ, ಶರಣರಲ್ಲಿ ಮಾಚಿದೇವ ಅಗ್ರಸ್ಥಾನ ಪಡೆದಿದ್ದರು. ಬಸವಣ್ಣ ಕಲ್ಯಾಣಕ್ಕೆ ಬಂದಾಗ ಮಾಚಿದೇವರನ್ನು ಮೆಚ್ಚಿ ಅನುಭವ ಮಂಟಪಕ್ಕೆ ಕರೆದುಕೊಂಡು ಹೋದರು. ಆ ಮೂಲಕ ಮಾಚಿದೇವ ಶರಣ ಸಂಘದಲ್ಲಿ ಸ್ಥಾನ ಪಡೆದುಕೊಂಡರು. ಆದರೆ ಅಲ್ಲಿಯೂ ತನ್ನ ಕಾಯಕ ವೃತ್ತಿಯನ್ನು ಮುಂದುವರೆಸಿದರು ಎಂದರು.

ಶರಣ ಸಮೂಹದಲ್ಲಿ ಹಿರಿಯರಾಗಿದ್ದ ಮಾಚಿದೇವ ವಿಶೇಷ ಸ್ಥಾನ ಗಳಿಸಿದ್ದರು. ತಮ್ಮ ಇಡೀ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟಿದ್ದರು. ಕಲ್ಯಾಣ ಕ್ರಾಂತಿ ನಂತರ ಅನೇಕ ಶರಣರನ್ನು ಮತ್ತು ಅವರ ವಚನಗಳನ್ನು ರಕ್ಷಣೆ ಮಾಡಿದರು. ಇದರಿಂದ ಅನೇಕ ಶರಣರ ವಚನಗಳು ಈಗಲೂ ನಮಗೆ ಓದಲು ಸಿಗುತ್ತಿದೆ. ವೃತ್ತಿಯ ಬಗ್ಗೆ ಬಹಳ ನಿಷ್ಠೆಯಿಂದ ಇದ್ದ ಮಾಚಿದೇವ ಅಗಸತನ ಕೀಳಲ್ಲ, ಅರಸತನ ಮೇಲಲ್ಲ. ಅವರವರ ವೃತ್ತಿಯಲ್ಲಿ ಅವರು ಅರಸರೇ ಎಂದು ತಿಳಿಸಿದ್ದರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಡಿವಾಳ ಸಮಾಜ ಸಂಘದ ಅಧ್ಯಕ್ಷರಾದ ಹೆಚ್.ಎಸ್.ಸದಾಶಿವಪ್ಪ ಹಾಗೂ ಸಮಾಜದ ಮುಖಂಡರುಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಹಾಜರಿದ್ದರು.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!